Viral Video: ಹಾವು ನೋಡಿ ಕಂಗಾಲಾಗಿ ಕಿರುಚುತ್ತಾ ಓಡಿದ ಯುವತಿ ವಿಡಿಯೋ ವೈರಲ್

TV9 Digital Desk

| Edited By: shruti hegde

Updated on: Sep 12, 2021 | 10:36 AM

ಪಕ್ಕದಲ್ಲಿದ್ದ ಗಿಡದಲ್ಲಿ ಅಡಗಿದ್ದ ಹಾವು ಒಮ್ಮೆಲೆ ಎದುರು ಬಂದಿದೆ. ಕಂಗಾಲಾದ ಮಹಿಳೆ ಕಿರುಚುತ್ತಾ ಓಡಿದ್ದಾಳೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

Viral Video: ಹಾವು ನೋಡಿ ಕಂಗಾಲಾಗಿ ಕಿರುಚುತ್ತಾ ಓಡಿದ ಯುವತಿ ವಿಡಿಯೋ ವೈರಲ್
ಹಾವು ನೋಡಿ ಕಂಗಾಲಾಗಿ ಕಿರುಚುತ್ತಾ ಓಡಿದ ಯುವತಿ ವಿಡಿಯೋ ವೈರಲ್


ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋ ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವು ಮನ ಗೆಲ್ಲುತ್ತದೆ. ಇನ್ನು ಕೆಲವು ಆಶ್ಚರ್ಯವನ್ನುಂಟು ಮಾಡುತ್ತವೆ. ಕೆಲವು ತಮಾಷೆಯಾಗಿ ಕಾಣಿಸುವ ವಿಡಿಯೋ ಹೆಚ್ಚು ಮನ ಗೆಲ್ಲುತ್ತದೆ. ಹಾವು ನೋಡಿ ಗಾಬರಿಯಿಂದ ಓಡುತ್ತಿರುವ ಮಹಿಳೆಯ ದೃಶ್ಯ ಇದೀಗ ವೈರಲ್ ಆಗಿದೆ.

ದೃಶ್ಯವನ್ನು ಯೂಟ್ಯೂಬ್​ನಲ್ಲಿ ಪೋಸ್ಟ್ ಮಾಡಲಾಗಿದೆ. ನಡೆದು ಬರುತ್ತಿದ್ದ ಮಹಿಳೆ ಯಾವುದೋ ಯೋಚನೆಯಲ್ಲಿದ್ದಳು ಅನಿಸುತ್ತೆ! ಪಕ್ಕದಲ್ಲಿದ್ದ ಗಿಡದಲ್ಲಿ ಅಡಗಿದ್ದ ಹಾವು ಒಮ್ಮೆಲೆ ಎದುರು ಬಂದಿದೆ. ಕಂಗಾಲಾದ ಮಹಿಳೆ ಕಿರುಚುತ್ತಾ ಓಡಿದ್ದಾಳೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಕಂಬದ ಪಕ್ಕದಲ್ಲಿರುವ ಗಿಡದಿಂದ ಹಾವು ಹೊರಬಂದಿದೆ. ಹಾವು ನೋಡಿದ ಆಕೆ ಕಂಗಾಲಾಗಿದ್ದಾಳೆ. ಕೆಲವು ಬಾರಿ ಹೀಗೆ! ಯಾವುದೋ ಯೋಚನೆಯಲ್ಲಿದ್ದಾಗ ನಡೆಯುವ ಕೆಲವು ಸಂಗತಿಗಳು ತುಂಬಾ ಭಯ ಬೀಳಿಸುವಂತೆ ಮಾಡುತ್ತವೆ. ವಿಡಿಯೋ ಇದೀಗ ಫುಲ್ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ 30,000 ಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಫೇಸ್ಬುಕ್ ಸೇರಿದಂತೆ ಇತರ ಸಾಮಾಜಿಕ ವೇದಿಕೆಗಳಲ್ಲಿಯೂ ಸಹ ವಿಡಿಯೋ ಹರಿಬಿಡಲಾಗಿದೆ.

ನಾನು ಕುಳಿತುಕೊಳ್ಳಲು ಬರುತ್ತಿದ್ದೆ. ಮುಂದಿರುವ ಗಿಡದಿಂದ ಹಾವು ಹೊರಬರುತ್ತಿದ್ದಂತೆಯೇ ಭಯವಾಯಿತು. ಭಯದಲ್ಲಿ ಜೋರಾಗಿ ಕಿರುಚುತ್ತಾ ಅಲ್ಲಿಂದ ಓಡಿ ಹೋದೆ ಎಂದು ಯುವತಿ ವಿಡಿಯೋ ಹಂಚಿಕೊಳ್ಳುವಾಗ ಬರೆದಿದ್ದಾರೆ.

ಇದನ್ನೂ ಓದಿ:

Viral Video: ಮದುವೆ ದಿನದಂದೇ ಮೊಬೈಲ್​ನಲ್ಲಿ ಗೇಮ್ ಆಡುತ್ತಾ ಕುಳಿತ ವಧು ವರರು; ವಿಡಿಯೋ ವೈರಲ್

Viral Video: ರಸ್ತೆಯಲ್ಲಿ ಹೊತ್ತಿ ಉರಿಯುತ್ತಿದ್ದ ಕಾರಿನೊಳಗಿದ್ದ ವೃದ್ಧರನ್ನು ಕಾಪಾಡಿದ ಯುವಕರು; ಶಾಕಿಂಗ್ ವಿಡಿಯೋ ಇಲ್ಲಿದೆ

(Video of a young woman screaming at a snake)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada