AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಜೆಸಿಬಿ ಏರಿ ಸವಾರಿ ಹೊರಟ ಜೋಡಿ; ನೆಟ್ಟಿಗರ ಮನಗೆದ್ದ ಈ ವಿಡಿಯೊ ನೋಡಿ

ಪಾಕಿಸ್ತಾನದಲ್ಲಿ ವಧು ಮತ್ತು ವರ ಜೆಸಿಬಿ ಏರಿ ಸವಾರಿ ಹೊರಟಿದ್ದಾರೆ. ಪ್ರಸ್ತುತ ಈ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ದಂಪತಿಗಳ ಸಾಹಸಕ್ಕೆ ಮಾರುಹೋಗಿದ್ದಾರೆ.

Viral Video: ಜೆಸಿಬಿ ಏರಿ ಸವಾರಿ ಹೊರಟ ಜೋಡಿ; ನೆಟ್ಟಿಗರ ಮನಗೆದ್ದ ಈ ವಿಡಿಯೊ ನೋಡಿ
ಜೆಸಿಬಿ ಏರಿ ಸವಾರಿ ಹೊರಟಿರುವ ವಧು- ವರ
Follow us
TV9 Web
| Updated By: shivaprasad.hs

Updated on: Oct 02, 2021 | 2:43 PM

ಇತ್ತೀಚೆಗೆ ಮದುವೆಯ ಸಂದರ್ಭದಲ್ಲಿ ಜರುಗಿದ ತಮಾಷೆಯ, ಅಚ್ಚರಿಯ ವಿಡಿಯೊಗಳು ಹೆಚ್ಚಾಗಿ ವೈರಲ್ ಆಗುತ್ತವೆ. ಅದರಲ್ಲೂ ಸಾಮಾನ್ಯ ಜನರಿಗಿಂತ ಭಿನ್ನವಾಗಿ ಸಂಭ್ರಮ ಆಚರಿಸುವ ವಧು- ವರರು ನೆಟ್ಟಿಗರಿಂದ ಮೆಚ್ಚುಗೆಗೆ ಒಳಗಾಗುತ್ತಾರೆ. ಇಂಥದ್ದೇ ಮಾದರಿಯ ಒಂದು ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಅಲ್ಲಿನ ವಧು- ವರರ ಹೊಸ ಸ್ಟೈಲ್ ಕಂಡು ಸ್ಥಳದಲ್ಲಿ ನೆರೆದಿದ್ದವರಲ್ಲದೇ, ನೆಟ್ಟಿಗರೂ ಭೇಷ್ ಎಂದಿದ್ದಾರೆ. ಹೌದು. ಅಲ್ಲಿನ ಜೋಡಿಯೊಂದು ಮದುವೆಯ ಸಂದರ್ಭದಲ್ಲಿ ಜೆಸಿಬಿಯನ್ನೇರಿ ಮೆರವಣಿಗೆ ಹೊರಟಿದ್ದಾರೆ. ಈ ಕುತೂಹಲಕರ ಸಂದರ್ಭದ ವಿಡಿಯೊ ವೈರಲ್ ಆಗಿದೆ.

ಪಾಕಿಸ್ತಾನದ ಹುಂಜಾ ಕಣಿವೆಯ ಪ್ರದೇಶದಲ್ಲಿ ಈ ಘಟನೆ ನಡೆದಿರುವುದು ವರದಿಯಾಗಿದೆ. ವಧು- ವರರು ಯಾವುದೇ ಅದ್ದೂರಿ ವಾಹನಗಳ ಮೊರೆ ಹೋಗದೇ, ಜೆಸಿಬಿಯ ಮೊರೆ ಹೋಗಿದ್ದಾರೆ. ಅದಕ್ಕೆ ಸಂಪೂರ್ಣವಾಗಿ ಅಲಂಕಾರ ಮಾಡಲಾಗಿದ್ದು, ವಿವಿಧ ದೀಪಗಳನ್ನೂ ಇಟ್ಟು ಶೃಂಗರಿಸಲಾಗಿದೆ. ಜೆಸಿಬಿ ಸಾಗುವಾಗ ಅಕ್ಕ ಪಕ್ಕದ ಜನ ಅದನ್ನು ನೋಡುತ್ತಿದ್ದು, ಅಚ್ಚರಿ ಮತ್ತು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ವೈರಲ್ ಆಗಿರುವ ಈ ವಿಡಿಯೊವನ್ನು ಪಾಕಿಸ್ತಾನದ ಪತ್ರಕರ್ತ ಗುಲಾಮ್ ಅಬ್ಬಾಸ್ ಶಾ ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ನಾನಾ ವಿಧವಾಗಿ ಕಾಮೆಂಟ್ ಮಾಡಿದ್ದು, ಮದುಮಕ್ಕಳ ಹೊಸ ಟ್ರೆಂಡನ್ನು ಸ್ವಾಗತಿಸಿದ್ದಾರೆ. ಹಲವರು ‘ಇದು ಸಾಹಸವೆಂದರೆ…’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ‘ವಿಭಿನ್ನವಾಗಿ ಮಾಡಲು ಹೋಗಿ ಹಾಸ್ಯಾಸ್ಪದವಾಗಿದೆ’ ಎಂದಿದ್ದಾರೆ. ಆದರೆ, ಈ ವಿಡಿಯೊಗೆ ಬಹುತೇಕ ಜನರು ಮೆಚ್ಚುಗೆ ಸೂಚಿಸಿದ್ದಾರೆ.

ವೈರಲ್ ಆಗಿರುವ ವಿಡಿಯೊ ಇಲ್ಲಿದೆ:

ಈ ಹಿಂದೆ ಭಾರತದಲ್ಲೂ ಇಂಥದ್ದೇ ಪ್ರಕರಣ ವರದಿಯಾಗಿತ್ತು. ಛತ್ತೀಸ್​ಗಡದ ಇಂಜಿನಿಯರ್ ಒಬ್ಬರು ಜೆಸಿಬಿಯಲ್ಲಿ ಸವಾರಿ ಮಾಡುತ್ತಾ ವಧುವಿನ ಮನೆಗೆ ತಲುಪಿದ್ದರು. ಆ ವಿಡಿಯೊ ಕೂಡ ನೆಟ್ಟಿಗರ ಮನಗೆದ್ದಿತ್ತು. ಇಂಥದ್ದೇ ಮತ್ತೊಂದು ಪರಕರಣ ಕರ್ನಾಟಕದಲ್ಲೂ ವರದಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ:

ಬಿಡದಿ ಟೊಯೊಟ ಕಿರ್ಲೋಸ್ಕರ್ ಘಟಕದ 45 ಕಾರ್ಮಿಕರು‌ ವಜಾ; ಕಾರ್ಮಿಕ ಸಂಘದ ಆಕ್ರೋಶ

KBC: 25 ಲಕ್ಷ ರೂಪಾಯಿ ಪ್ರಶ್ನೆಗೆ ಸ್ಟಾರ್​ ನಟರೇ ಹೇಳಿಲ್ಲ ಉತ್ತರ; ನೀವು ಉತ್ತರಿಸಬಲ್ಲಿರಾ?

S M Krishna invited: ದಸರಾ ಉದ್ಘಾಟನೆಗಾಗಿ ಎಸ್.ಎಂ.ಕೃಷ್ಣಗೆ ಅಧಿಕೃತ ಆಹ್ವಾನ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ
ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?