ಬೆಂಗಳೂರಿಗೆ ನಾನೇ ಡಾನ್ ಆಗುತ್ತೇನೆ..! ವೈರಲ್ ಆಯ್ತು ಆಡಿಯೋ

ಅವಲಹಳ್ಳಿ‌ ಪೊಲೀಸರಿಗೆ ಮೆಂಟಲ್ ಮಂಜ ಆವಾಜ್ ಹಾಕಿದ್ದಾನೆ ಎಂದೇ ಕ್ರೈಂ ಜಗತ್ತಿನಲ್ಲಿ ಮಾತು ಕೇಳಿಬರುತ್ತಿದೆ. ಆಡಿಯೋ ವೈರಲ್ ಮೂಲಕ ರೌಡಿ ಪಟ್ಟಕ್ಕಾಗಿ ಬೆಂಗಳೂರಲ್ಲಿ ರೌಡಿಶೀಟರ್​ಗಳ ನಡುವೆ ಶೀತಲ ಸಮರ ನಡೆದಿರುವುದು ಬೆಳಕಿಗೆ ಬಂದಿದೆ.

ಬೆಂಗಳೂರಿಗೆ ನಾನೇ ಡಾನ್ ಆಗುತ್ತೇನೆ..! ವೈರಲ್ ಆಯ್ತು ಆಡಿಯೋ
ಮೆಂಟಲ್ ಮಂಜ
Follow us
TV9 Web
| Updated By: guruganesh bhat

Updated on:Oct 02, 2021 | 4:47 PM

ಬೆಂಗಳೂರು: ಕುಳ್ಳ ವೆಂಕಟೇಶ್​ನನ್ನು ಕೊಲೆ ಮಾಡಿದ್ದು ನಾನೇ, ನಾನು ಬೆಂಗಳೂರಿಗೆ ಡಾನ್ ಆಗುತ್ತೇನೆ ಎಂಬ ಆಡಿಯೋವೊಂದು ಭರ್ಜರಿ ವೈರಲ್ ಆಗುತ್ತಿದೆ ಈ ಆಡಿಯೋದಲ್ಲಿ ಕೇಳಿಸುವ ಧ್ವನಿ ಮೆಂಟಲ್ ಮಂಜ ಎಂಬಾತನದು ಎನ್ನಲಾಗಿದ್ದು, ಅವಲಹಳ್ಳಿ‌ ಪೊಲೀಸರಿಗೆ ಮೆಂಟಲ್ ಮಂಜ ಆವಾಜ್ ಹಾಕಿದ್ದಾನೆ ಎಂದೇ ಕ್ರೈಂ ಜಗತ್ತಿನಲ್ಲಿ ಮಾತು ಕೇಳಿಬರುತ್ತಿದೆ. ಆಡಿಯೋ ವೈರಲ್ ಮೂಲಕ ರೌಡಿ ಪಟ್ಟಕ್ಕಾಗಿ ಬೆಂಗಳೂರಲ್ಲಿ ರೌಡಿಶೀಟರ್​ಗಳ ನಡುವೆ ಶೀತಲ ಸಮರ ನಡೆದಿರುವುದು ಬೆಳಕಿಗೆ ಬಂದಿದೆ.

ವೈರಲ್ ಆದ ಆಡಿಯೋದಲ್ಲಿ ನಾನು ಬೆಂಗಳೂರಿಗೇ ಡಾನ್ ಆಗುತ್ತೇನೆ. ಕುಳ್ಳ ವೆಂಕಟೇಶ್​ನನ್ನು ಕೊಂದದ್ದೇ ನಾನು ಎಂದು ಎಂಬ ಮಾತುಗಳು ಕೇಳುತ್ತದೆ. ಸೆಪ್ಟೆಂಬರ್ 25ರಂದು ಹಾಡಹಗಲಲ್ಲೇ ಕುಳ್ಳ ವೆಂಕಟೇಶ್​ನ ಮರ್ಡರ್ ಆಗಿತ್ತು. ನಡುರಸ್ತೆಯಲ್ಲೇ ಹಂತಕರು ಲಾಂಗು ಮಚ್ಚಿನಿಂದ ಕುಳ್ಳ ಮಂಜನನ್ನು ಕೊಚ್ಚಿ ಕೊಲೆ ಮಾಡಿದ್ದರು. ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಕುಳ್ಳ ವೆಂಕಟೇಶನ ಹತ್ಯೆಯಾಗಿತ್ತು. ಪ್ರಕರಣ ಸಂಬಂಧ ಅನಿಲ್, ಅಪ್ಪು ಸೇರಿದಂತೆ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಕುಳ್ಳ ವೆಂಕಟೇಶ್​ಗೂ ಅನಿಲ್​ಗೂ ಏರಿಯಾ ವಿಚಾರಕ್ಕೆ ಗಲಾಟೆ ನಡೆದಿತ್ತು. ಅದೇ ಕಾರಣಕ್ಕೆ ಅನಿಲ್ ಮತ್ತು ಸಂಗಡಿಗರು ಕುಳ್ಳ ವೆಂಕಟೇಶ್​ನ ಕೊಲೆ ಮಾಡಿದ ಆರೋಪದಡಿ ಬಂಧಿಸಲಾಗಿದೆ. ಆದರೆ ಕುಳ್ಳ ವೆಂಕಟೇಶ್​ನ   ಕೊಲೆ ಮಾಡಿದ್ದುಅನಿಲ್ ಅಲ್ಲ, ನಾನು ಎಂದು ಆಡಿಯೋದಲ್ಲಿ ಹೇಳಿಕೊಳ್ಳಲಾಗಿದೆ. ಆದರೆ ಆ ಆಡಿಯೋದಲ್ಲಿ ಇರುವ ಧ್ವನಿ ಯಾರದ್ದು ಎಂಬುದರ ಬಗ್ಗೆ ಈವರೆಗೂ ಯಾವುದೇ ಖಚಿತ ಮಾಹಿತಿ ತಿಳಿದುಬಂದಿಲ್ಲ.ಭೂಗತ ಲೋಕದಲ್ಲಿ ಮಾತ್ರ ಆ ಧ್ವನಿ ಮೆಂಟಲ್ ಮಂಜನದ್ದು ಎಂಬ ಸುದ್ದಿಗಳು ಹರಿದಾಡುತ್ತಿವೆ.

ಇದನ್ನೂ ಓದಿ: 

Nomads Education : ಅಪರಾಧ ಜಗತ್ತಿನೊಳಗೆ ಅಲೆಮಾರಿ ಮಕ್ಕಳ ಮುಖಗಳನ್ನು ಎದುರುಗೊಳ್ಳುವುದು ಬೇಡ ಅಲ್ಲವೆ?

Viral Video: ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಳಗೆ ಕಾಣಿಸಿಕೊಂಡ ಮಂಗ; ವಿಡಿಯೊ ವೈರಲ್

Published On - 4:41 pm, Sat, 2 October 21

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?