ಗಾಂಜಾ ಪೂರೈಕೆಗೆ ಸಿದ್ದವಾಗಿದ್ದ ಸ್ವಿಗ್ಗಿ ಡೆಲಿವರಿ ಬಾಯ್ ಸೆರೆ

TV9 Digital Desk

| Edited By: guruganesh bhat

Updated on: Oct 02, 2021 | 8:24 PM

ಬಂಧಿತರಿಂದ ಒಟ್ಟು 5.20 ಲಕ್ಷ ರೂಪಾಯಿ ಮೌಲ್ಯದ 140 ಕೆಜಿ‌ ಗಾಂಜಾ ಜಪ್ತಿ ಮಾಡಲಾಗಿದೆ.

ಗಾಂಜಾ ಪೂರೈಕೆಗೆ ಸಿದ್ದವಾಗಿದ್ದ ಸ್ವಿಗ್ಗಿ ಡೆಲಿವರಿ ಬಾಯ್ ಸೆರೆ
ಸಾಂಕೇತಿಕ ಚಿತ್ರ
Follow us

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಉನ್ನತ ದರ್ಜೆಯ ಗಾಂಜಾ ಮಾರಾಟ ಜಾಲ ಬೆಳಕಿಗೆ ಬಂದಿದ್ದು ಓರ್ವ ಕಿಂಗ್​ಪಿನ್ ಸೇರಿ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ವಲಯ ಎನ್ಸಿಬಿ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಗಾಂಜಾ ಪೂರೈಕೆ ಮಾಡಲು ಸಿದ್ಧವಾಗಿದ್ದ ಸ್ವಿಗ್ಗಿ ಡೆಲಿವರಿ ಬಾಯ್ ಸೇರಿದಂತೆ ಆರೋಪಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ನಾಲ್ವರನ್ನು ವಶಪಡಿಸಿಕೊಳ್ಳಲಾಗಿದೆ.

ಕಾರಿನಲ್ಲಿ 8 ಬಾಕ್ಸ್ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಸೆಪ್ಟೆಂಬರ್ 30ರಂದು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಈವೇಳೆ 137 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿತ್ತು. ಬಂಧಿತರ ಮನೆ ಪರಿಶೀಲನೆ ನಡೆಸಿದಾಗ ಅಲ್ಲಿಯೂ 4.81 ಲಕ್ಷ ಹಣ ಹಾಗೂ 3 ಕೆಜಿ ಗಾಂಜಾ ಪತ್ತೆಯಾಗಿದೆ. ಆರೋಪಿಗಳು ಸ್ವಿಗ್ಗಿ ಡೆಲಿವರಿ ಬಾಯ್ಸ್ ಮೂಲಕ ಗಾಂಜಾ ಸರಬರಾಜು ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಬಂಧಿತರಿಂದ ಒಟ್ಟು 5.20 ಲಕ್ಷ ರೂಪಾಯಿ ಮೌಲ್ಯದ 140 ಕೆಜಿ‌ ಗಾಂಜಾ ಜಪ್ತಿ ಮಾಡಲಾಗಿದೆ.

ಮೂಕನಮನೆ ಜಲಪಾತದಲ್ಲಿ ನೀರಿನಲ್ಲಿ ಮುಳುಗಿ ಪ್ಯಾರಾಮೆಡಿಕಲ್ ವಿದ್ಯಾರ್ಥಿ ಸಾವು ಹಾಸನ: ಸಕಲೇಶಪುರ ತಾಲೂಕಿನ ಮೂಕನಮನೆ ಜಲಪಾತದಲ್ಲಿ ಈಜುವಾಗ ನೀರಿನಲ್ಲಿ ಮುಳುಗಿ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ್ದಾನೆ. ಜಲಪಾತದಲ್ಲಿ ಮುಳುಗಿದ ಲಿಂಗರಾಜ್ (18) ಮೃತಪಟ್ಟ ವಿದ್ಯಾರ್ಥಿ. ಲಿಂಗರಾಜ್ ಪ್ರಥಮ ವರ್ಷದ ಪ್ಯಾರಾಮೆಡಿಕಲ್ ಓದುತ್ತಿದ್ದ ಎಂಬ ಮಾಹಿತಿ ತಿಳಿದುಬಂದಿದೆ. ಲಿಂಗರಾಜ್ ಜತೆ ಬೆಂಗಳೂರು ಮೂಲದ 27 ಸ್ನೇಹಿತರು ಪ್ರವಾಸಕ್ಕೆ ಬಂದಿದ್ದರು ಎನ್ನಲಾಗಿದೆ. ವಿದ್ಯಾರ್ಥಿಯ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರು ಕಾರ್ಯಾಚರಣೆ ನಡೆಸಿ ಹೊರತೆಗೆದಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 

ಬೆಂಗಳೂರಿಗೆ ನಾನೇ ಡಾನ್ ಆಗುತ್ತೇನೆ..! ವೈರಲ್ ಆಯ್ತು ಆಡಿಯೋ

ಪ್ರಿಯಾಂಕಾ ಚೋಪ್ರಾ ವಿಮಾನದಲ್ಲಿ ಕೂತ ರೀತಿಗೆ ಭಾರತೀಯರಿಂದ ಮೆಚ್ಚುಗೆ; ಪಿಂಕಿ ಫೋಟೋ ವೈರಲ್

ತಾಜಾ ಸುದ್ದಿ

Related Stories

Click on your DTH Provider to Add TV9 Kannada