ಪ್ರಿಯಾಂಕಾ ಚೋಪ್ರಾ ವಿಮಾನದಲ್ಲಿ ಕೂತ ರೀತಿಗೆ ಭಾರತೀಯರಿಂದ ಮೆಚ್ಚುಗೆ; ಪಿಂಕಿ ಫೋಟೋ ವೈರಲ್

TV9 Digital Desk

| Edited By: Rajesh Duggumane

Updated on:Oct 01, 2021 | 3:07 PM

ನಿಕ್​ ಜೋನಸ್​ ಅವರನ್ನು ಮದುವೆ ಆದ ನಂತರದಲ್ಲಿ ಪ್ರಿಯಾಂಕಾ ಚೋಪ್ರಾ ಭಾರತಕ್ಕೆ ಬಂದಿದ್ದು ಕಡಿಮೆ. ಅವರು ಯಾವುದೇ ಬಾಲಿವುಡ್​ ಸಿನಿಮಾಗಳನ್ನೂ ಒಪ್ಪಿಕೊಂಡಿಲ್ಲ. ಆದರೆ, ಹಾಲಿವುಡ್​ನಲ್ಲಿ ಅವರು ಬ್ಯುಸಿಯಾಗಿದ್ದಾರೆ.

ಪ್ರಿಯಾಂಕಾ ಚೋಪ್ರಾ ವಿಮಾನದಲ್ಲಿ ಕೂತ ರೀತಿಗೆ ಭಾರತೀಯರಿಂದ ಮೆಚ್ಚುಗೆ; ಪಿಂಕಿ ಫೋಟೋ ವೈರಲ್
ಪ್ರಿಯಾಂಕಾ ಚೋಪ್ರಾ
Follow us

ಪ್ರಿಯಾಂಕಾ ಚೋಪ್ರಾ ಹಾಲಿವುಡ್​ನಲ್ಲಿ ಬ್ಯುಸಿಯಾಗಿದ್ದಾರೆ. ಅಮೆರಿಕದ ಪಾಪ್​ ಗಾಯಕ ನಿಕ್​ ಜೋನಸ್​ ಮದುವೆ ಆದ ನಂತರದಲ್ಲಿ ಅಲ್ಲಿಯೇ ಸೆಟಲ್​ ಆಗಿದ್ದಾರೆ. ಆದರೆ, ಅವರಿಗೆ ಭಾರತದ ಮೇಲಿನ ಪ್ರೀತಿ ಕೊಂಚವೂ ಕಡಿಮೆ ಆಗಿಲ್ಲ. ಅವರು ಪತಿ ನಿಕ್​ ಜೋನಸ್​ ಜತೆಗೂಡಿ ಹೋಳಿ ಹಬ್ಬ ಆಚರಿಸಿದ್ದರು. ಈಗ ಅವರು ವಿಮಾನದಲ್ಲಿ ಕೂತಿರುವ ಹೊಸ ಫೋಟೋ ಒಂದು ವೈರಲ್​ ಆಗಿದೆ. ಇದನ್ನು ನೋಡಿದ ಅಭಿಮಾನಿಗಳು ಸಖತ್​ ಖುಷಿಪಟ್ಟಿದ್ದಾರೆ. ಅಲ್ಲದೆ ಪ್ರಿಯಾಂಕಾ ಅವರನ್ನು ದೇಸಿ ಗರ್ಲ್​ ಎಂದು ಕರೆದಿದ್ದಾರೆ.

ನಿಕ್​ ಜೋನಸ್​ ಅವರನ್ನು ಮದುವೆ ಆದ ನಂತರದಲ್ಲಿ ಪ್ರಿಯಾಂಕಾ ಚೋಪ್ರಾ ಭಾರತಕ್ಕೆ ಬಂದಿದ್ದು ಕಡಿಮೆ. ಅವರು ಯಾವುದೇ ಬಾಲಿವುಡ್​ ಸಿನಿಮಾಗಳನ್ನೂ ಒಪ್ಪಿಕೊಂಡಿಲ್ಲ. ಆದರೆ, ಹಾಲಿವುಡ್​ನಲ್ಲಿ ಅವರು ಬ್ಯುಸಿಯಾಗಿದ್ದಾರೆ. ಇದು ಭಾರತೀಯ ಫ್ಯಾನ್ಸ್​ಗೆ ಕೊಂಚ ಬೇಸರ ತರಿಸಿದ್ದು ನಿಜ. ಆದರೆ, ಈಗ ಅವರು ವಿಮಾನದಲ್ಲಿ ಕೂತಿದ್ದ ರೀತಿ ಫ್ಯಾನ್ಸ್​ಗೆ ಇಷ್ಟವಾಗಿದೆ.

ಭಾರತೀಯರು ಚಕ್ಕಳ ಮಕ್ಕಳ (ಸುಖಾಸನ) ಹಾಕಿ ಕೂರುತ್ತಾರೆ. ನೆಲಕ್ಕೆ ಕೂರುವಾಗ ಈ ರೀತಿಯಲ್ಲೇ ಕೂರೋಕೆ ಆದ್ಯತೆ ನೀಡುತ್ತಾರೆ. ಆದರೆ, ವಿದೇಶಿಗರು ಈ ರೀತಿಯಲ್ಲಿ ಕುಳಿತುಕೊಳ್ಳುವುದು ತುಂಬಾನೇ ಕಡಿಮೆ. ಆದರೆ, ಪ್ರಿಯಾಂಕಾ ಚೋಪ್ರಾ ಅಮೆರಿಕಕ್ಕೆ ತೆರಳಿದರೂ ಇದೇ ರೀತಿಯಲ್ಲಿ ಕೂರುತ್ತಿದ್ದಾರೆ. ಇದಕ್ಕೆ ವೈರಲ್​ ಆಗುತ್ತಿರುವ ಹೊಸ ಫೋಟೋ ಸಾಕ್ಷಿ.

ಪ್ರಿಯಾಂಕಾ ಚೋಪ್ರಾ ‘ಸಿಟಾಡೆಲ್​’ ಸೀರಿಸ್​ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಇದಕ್ಕಾಗಿ ಅವರು ಸ್ಪೇನ್​ಗೆ ತೆರಳಿದ್ದಾರೆ. ವಿಮಾನದಲ್ಲಿ ಪ್ರಯಾಣ ಮಾಡುವಾಗ ಅವರು ಚಕ್ಕಳ ಮಕ್ಕಳ ಹಾಕಿ ಕೂತಿದ್ದರು. ಈ ಫೋಟೋ ಈಗ ಸಾಕಷ್ಟು ವೈರಲ್​ ಆಗಿದ್ದು, ಪ್ರಿಯಾಂಕಾ ಅವರನ್ನು ದೇಸಿ ಗರ್ಲ್​ ಎಂದು ಕರೆದಿದ್ದಾರೆ ಅಭಿಮಾನಿಗಳು.

ಇತ್ತೀಚೆಗೆ ನಿಜ್​ ಜೋನಸ್​ ಬರ್ತ್​ಡೇ ಆಚರಿಸಿಕೊಂಡಿದ್ದರು. ಶೂಟಿಂಗ್​ ಕಾರಣದಿಂದ ಪ್ರಿಯಾಂಕಾ ಚೋಪ್ರಾ ಇಂಗ್ಲೆಂಡ್​ಗೆ ತೆರಳಿದ್ದರು. ನಿಕ್​ ಜೋನಸ್​ ಹುಟ್ಟುಹಬ್ಬವನ್ನು ಆಚರಿಸುವ ಸಲುವಾಗಿ ಅವರು ಅಲ್ಲಿಂದ ಅಮೆರಿಕದ ವಿಮಾನ ಹತ್ತಿದ್ದರು. ಸಂಜೆ ಆಗುವುದರೊಳಗೆ ಪತಿಯನ್ನು ಬಂದು ಸೇರಿಕೊಂಡಿದ್ದರು. ಅಲ್ಲಿಂದ ಬಂದು ತಮ್ಮ ಬರ್ತ್​ಡೇ ಆಚರಿಸಿರುವುದು ನಿಕ್​ಗೆ ಅಚ್ಚರಿ ತಂದಿತ್ತು. ಹಾಗಾಗಿ ನಿಕ್ ಅದನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ: ‘ನನ್ನ ಒಳ ಉಡುಪು ತೋರಿಸುವಂತೆ ನಿರ್ದೇಶಕರು ಹೇಳಿದ್ದರು’; ಇದು ಪ್ರಿಯಾಂಕಾ ಚೋಪ್ರಾ ಬದುಕಿನ ಕರಾಳ ಅನುಭವ

ತಾಜಾ ಸುದ್ದಿ

Related Stories

Click on your DTH Provider to Add TV9 Kannada