ಮದುವೆಯಲ್ಲಿ ಒಂದು ಪೀಸ್ ಜಾಸ್ತಿ ಕೇಕ್ ತಿಂದ ವ್ಯಕ್ತಿಯ ಬಳಿ ಹಣ ಕೇಳಿದ ಜೋಡಿ; ಏನಿದು ಪ್ರಕರಣ?

Viral Stories: ಮದುವೆಯ ಸಂದರ್ಭದಲ್ಲಿ ಒಂದು ಪೀಸ್ ಕೇಕ್ ಜಾಸ್ತಿ ತಿಂದಿದ್ದೇ ವ್ಯಕ್ತಿಯೊಬ್ಬನಿಗೆ ಫಜೀತಿ ತಂದೊಡ್ಡಿದೆ. ಅದೇನು ಅಂತೀರಾ? ಅಚ್ಚರಿಯ ಸುದ್ದಿಯೊಂದು ಇಲ್ಲಿದೆ.

ಮದುವೆಯಲ್ಲಿ ಒಂದು ಪೀಸ್ ಜಾಸ್ತಿ ಕೇಕ್ ತಿಂದ ವ್ಯಕ್ತಿಯ ಬಳಿ ಹಣ ಕೇಳಿದ ಜೋಡಿ; ಏನಿದು ಪ್ರಕರಣ?
ಸಾಂಕೇತಿಕ ಚಿತ್ರ
Follow us
TV9 Web
| Updated By: shivaprasad.hs

Updated on: Oct 02, 2021 | 5:02 PM

ಮದುವೆಗಳನ್ನು ಭರ್ಜರಿಯಾಗಿ ಅದ್ದೂರಿಯಿಂದ ಆಚರಿಸುವವರಿದ್ದಾರೆ. ಮತ್ತೆ ಕೆಲವರು ಇದ್ಯಾವುದರ ಗೋಜಿಗೆ ಹೋಗದೇ ಸರಳವಾಗಿ ತಮ್ಮಿಚ್ಚೆಯಂತೆ ವಿವಾಹವಾಗುತ್ತಾರೆ. ವಿದೇಶಗಳಲ್ಲೂ ಹೀಗೆಯೇ. ಆದರೆ ಅಲ್ಲಿ ಕೆಲವು ವಿಚಿತ್ರ ಪದ್ಧತಿಗಳಿರುತ್ತವೆ. ಜೊತೆಗೆ ಏನಾದರೂ ಹೆಚ್ಚು ಕಡಿಮೆಯಾದಾಗ ಮುಜುಗರವಿಲ್ಲದೇ, ಪ್ರಶ್ನೆಯನ್ನೂ ಮಾಡುತ್ತಾರೆ. ಭಾರತದಲ್ಲಿ ಮದುವೆ ಮನೆಗಳಲ್ಲಿ ಊಟ, ತಿಂಡಿಗಳು ಯಥೇಚ್ಛ. ಒತ್ತಾಯಪೂರ್ವಕವಾಗಿ ಬಡಿಸಿ, ಆತಿಥ್ಯ ನೀಡಿ ಕಳುಹಿಸುತ್ತಾರೆ. ಆದರೆ, ಈ ಘಟನೆ ನೋಡಿದರೆ ಆಶ್ಚರ್ಯವಾಗಬಹುದು. ಕಾರಣ, ಮದುವೆ ಮನೆಯಲ್ಲಿ ವ್ಯಕ್ತಿಯೊಬ್ಬ ಒಂದು ಪೀಸ್ ಕೇಕ್ ಜಾಸ್ತಿ ತಿಂದನೆಂದು ಆ ಜೋಡಿ, ಆತನಿಗೆ ಹಣ ಕಟ್ಟಲು ಹೇಳಿದ್ದಾರೆ. ಈ ಪ್ರಕರಣ ಸದ್ಯ ಎಲ್ಲೆಡೆ ಸುದ್ದಿಯಾಗಿದ್ದು, ಕುತೂಹಲ ಕೆರಳಿಸಿದೆ.

ರೆಡ್ಡಿಟ್​ನಲ್ಲಿ ಹಂಚಿಕೊಳ್ಳಲಾದ ಸ್ಟೋರಿಯೊಂದರಲ್ಲಿ ಈ ವಿಚಿತ್ರ ಘಟನೆಯ ಬಗ್ಗೆ ಬರೆಯಲಾಗಿದೆ. ಮೆಸೇಜ್ ಮುಖಾಂತರ ಜೋಡಿಯು ವ್ಯಕ್ತಿಯೊಬ್ಬನಿಗೆ, ನೀನು ಒಂದಕ್ಕಿಂತ ಹೆಚ್ಚು ಕೇಕ್ ಪೀಸ್ ತಿಂದಿದ್ದೀಯ. ಸಿಸಿಟಿವಿ ಮೂಲಕ ಅದು ಪತ್ತೆಯಾಗಿದೆ. ಆದ್ದರಿಂದ 3.66 ಪೌಂಡ್​​ ಹಣ ನೀಡಬೇಕು ಎಂದು ಕಳುಹಿಸಿದ್ದಾರೆ. ಈ ಮೆಸೇಜ್​ನ್ನು ಆ ವ್ಯಕ್ತಿ ರೆಡ್ಡಿಟ್​ನಲ್ಲಿ ಹಂಚಿಕೊಂಡಿದ್ದಾನೆ.

ಜೋಡಿ ಆ ವ್ಯಕ್ತಿಗೆ ಕಳುಹಿಸಿದ್ದು ಹೀಗೆ. ‘‘ಹೇ, ನಾವು ಈಗಷ್ಟೇ ಸಿಸಿಟಿವಿ ವೀಕ್ಷಿಸುತ್ತಿದ್ದೆವು. ಆಗ ನೀನು ಮದುವೆ ಮನೆಯಲ್ಲಿ 2 ಪೀಸ್ ಕೇಕ್ ತಿಂದದ್ದು ತಿಳಿಯಿತು. ನಾವು ಈ ಮೊದಲು ಪ್ರತಿ ವ್ಯಕ್ತಿಗೂ ಒಂದೊಂದು ಪೀಸ್ ಕೇಕ್ ಎಂದು ತಿಳಿಸಿದ್ದೆವು. ಅದರಲ್ಲಿ ನೀನು ಒಂದೇ ಕೇಕ್​ಗೆ ಹಣ ಪಾವತಿ ಮಾಡಿ, ಎರಡು ಪೀಸ್ ತಿಂದಿದ್ದೀಯ. ಆದ್ದರಿಂದ ಆದಷ್ಟು ಶೀಘ್ರದಲ್ಲಿ 3.66 ಪೌಂಡ್ ಹಣವನ್ನು ನನಗೆ ಕಳುಹಿಸು’’ ಎಂದು ಬರೆಯಲಾಗಿದೆ. ಈ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದ್ದು, ಅಚ್ಚರಿಯ ಕಾಮೆಂಟ್ ಮಾಡುತ್ತಿದ್ದಾರೆ.

ಈಗಾಗಲೇ ಆ ಪೋಸ್ಟ್​​ಗೆ 8,000ಕ್ಕೂ ಅಧಿಕ ಅಪ್​ವೋಟ್ ಲಭಿಸಿದೆ. ಜೊತೆಗೆ ಮುಜುಗರವಿಲ್ಲದೇ ಆ ಜೋಡಿ ಕೇಳಿರುವುದಕ್ಕೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮತ್ತಷ್ಟು ಜನ ಈ ಘಟನೆ ತಮಾಷೆಯಾಗಿದೆ ಎಂದು ಬರೆದಿದ್ದಾರೆ. ಹಲವರು ಈ ವಿಚಿತ್ರ ಪದ್ಧತಿಯ ಬಗ್ಗೆ ಕುತೂಹಲದಿಂದ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:

ಅಬ್ಬಬ್ಬಾ.. ಕಾರಿನ ಮೇಲೆ ಹರಿದು ಬಂತು ಹಾವು! ವಿಡಿಯೋ ವೈರಲ್

Viral Video: ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಳಗೆ ಕಾಣಿಸಿಕೊಂಡ ಮಂಗ; ವಿಡಿಯೊ ವೈರಲ್

‘ನೀವು ಸಾಯಿ ಪಲ್ಲವಿಯನ್ನು ಮದುವೆಯಾಗಿ, ಅವರೇ ಸರಿಯಾದ ಜೋಡಿ’; ವಿಚ್ಛೇದನದ ದಿನವೇ ನಾಗ ಚೈತನ್ಯಗೆ ಹೊಸ ಸಲಹೆ

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ