ಜಿಮ್ನಾಸ್ಟಿಕ್ ಸ್ಪರ್ಧಿಗಳನ್ನು ತನ್ನ ಬೇಟೆ ಎಂದು ಭಾವಿಸಿದ ಮುದ್ದಾದ ಬೆಕ್ಕು; ವಿಡಿಯೊ ವೈರಲ್

| Updated By: shivaprasad.hs

Updated on: Jul 31, 2021 | 10:09 AM

Viral Video: ಟಿವಿಯ ಪರದೆಯ ಮುಂದೆ ಕುಳಿತ ಬೆಕ್ಕೊಂದು ಪರದೆಯಲ್ಲಿ ಬರುತ್ತಿದ್ದ ಜಿಮ್ನಾಸ್ಟಿಕ್ಸ್ ಆಟದ ಸ್ಪರ್ಧಿಗಳನ್ನು ಹಿಡಿಯಲು ಮುಂದಾಗಿದೆ. ಸದ್ಯ ಈ ವಿಡಿಯೊ ಈಗ ವೈರಲ್ ಆಗುತ್ತಿದ್ದು, ಬೆಕ್ಕಿನ ಆಟಕ್ಕೆ ನೆಟ್ಟಿಗರು ಮನ ಸೋತಿದ್ದಾರೆ.

ಜಿಮ್ನಾಸ್ಟಿಕ್ ಸ್ಪರ್ಧಿಗಳನ್ನು ತನ್ನ ಬೇಟೆ ಎಂದು ಭಾವಿಸಿದ ಮುದ್ದಾದ ಬೆಕ್ಕು; ವಿಡಿಯೊ ವೈರಲ್
ಜಿಮ್ನಾಸ್ಟಿಕ್ ಸ್ಪರ್ಧಿಗಳನ್ನು ಹಿಡಿಯಲು ಪ್ರಯತ್ನಿಸುತ್ತಿರುವ ಬೆಕ್ಕು
Follow us on

ಪ್ರಸ್ತುತ ನಡೆಯುತ್ತಿರುವ ಟೊಕಿಯೊ ಒಲಂಪಿಕ್ಸ್ ವಿಶ್ವದಾದ್ಯಂತ ಇರುವ ಕ್ರೀಡಾ ಪ್ರಿಯರನ್ನು ಟಿವಿಯ ಮುಂದೆ ಕೂರುವಂತೆ ಮಾಡಿದೆ. ತಮ್ಮ ನೆಚ್ಚಿನ ದೇಶಕ್ಕೆ, ಸ್ಪರ್ಧಿಗಳ ಪ್ರದರ್ಶನಗಳನ್ನು ಟಿವಿಯಲ್ಲೇ ನೋಡುತ್ತಾ, ಗೆಲ್ಲಲೆಂದು ಹಾರೈಸುತ್ತಾರೆ. ಹೀಗೆ ಮನೆಯವರೆಲ್ಲಾ ಟಿವಿಯ ಮುಂದೆ ಕುಳಿತರೆ ಅವರು ಸಾಕಿರುವ ಮುದ್ದಿನ ಪ್ರಾಣಿಗಳು ಏನು ಮಾಡಬೇಕು? ಇಲ್ಲೊಂದು ಬೆಕ್ಕು ನೇರವಾಗಿ ಟಿವಿಯ ದೊಟ್ಟ ಪರದೆಯ ಮುಂದೆ ಕುಳಿತುಕೊಂಡು ಜಿಮ್ನಾಸ್ಟಿಕ್ ಮಾಡುತ್ತಿರುವ ಸ್ಪರ್ಧಿಗಳನ್ನು ತನ್ನ ಕೈಯಿಂದ ಹಿಡಿಯಲು ಪ್ರಯತ್ನಿಸುತ್ತಿದೆ. ಪ್ರಾಣಿ ಪ್ರಿಯರಿಗೆ ಬಹಳ ಮುದ ನೀಡುವ ಈ ವಿಡಿಯೊ ಸದ್ಯ ವೈರಲ್ ಆಗುತ್ತಿದೆ.

ಟಿವಿ ಟೇಬಲ್ ಮೇಲೆ ಕುಳಿತಿರುವ ಬೆಕ್ಕು, ಜಿಮ್ನಾಸ್ಟಿಕ್ ಸ್ಪರ್ಧಿಗಳನ್ನು ತದೇಕ ಚಿತ್ತದಿಂದ ನೋಡುತ್ತಿದೆ. ಕೆಂಪು ಬಣ್ಣದ ಅಂಗಿ ಅಥವಾ ಪ್ಯಾಂಟ್ ಧರಿಸಿದ ಸ್ಪರ್ಧಿಗಳು ಬೆಕ್ಕಿಗೆ ತನ್ನ ಬೇಟೆಯ ವಸ್ತುವಿನಂತೆ ಕಂಡಿದೆ. ಸ್ಪರ್ಧಿಗಳು ಕಸರತ್ತು ನಡೆಸುತ್ತಿರುವಂತೆಯೇ ಇದು ತನ್ನ ಕಾಲುಗಳನ್ನು ಟಿವಿ ಪರದೆಯ ಮೇಲಿಟ್ಟು ಅವರನ್ನು ಹಿಡಿಯಲು ಪ್ರಯತ್ನಿಸಿದೆ. ಪ್ರತೀ ಬಾರಿಯೂ ಜಿಮ್ನಾಸ್ಟಿಕ್ ಸ್ಪರ್ಧಿಗಳು ತಪ್ಪಿ ಹೋಗುವುದು ನೋಡಿದರೂ ಛಲ ಬಿಡದೇ ಹಿಡಿಯಲು ಪ್ರಯತ್ನಿಸಿದೆ. ಮನೆಯವರ ಮುದ್ದು ಬೆಕ್ಕಿನ ಈ ತುಂಟಾಟ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೊ:


ನೆಟ್ಟಿಗರು, ಪ್ರಾಣಿ ಪ್ರಿಯರು ವಿಡಿಯೊವನ್ನು ಬಹಳ ಇಷ್ಟಪಟ್ಟಿದ್ದು ವಿಧವಿಧವಾಗಿ ಬೆಕ್ಕಿನ ಆಟವನ್ನು ಆನಂದಿಸಿದ್ದಾರೆ. ‘ಒಬ್ಬರಂತೂ ಇದು ಇಡೀ ದಿನದಲ್ಲಿ ನಾನು ಕಂಡ ಅದ್ಭುತ ವಿಡಿಯೊ. ದಯವಿಟ್ಟು ವಿಡಿಯೊವನ್ನು ಒಲಂಪಿಕ್ಸ್ ಆಯೋಜಕರಿಗೂ ಕಳುಹಿಸಿ’ ಎಂದು ಮನವಿ ಮಾಡಿದ್ದಾರೆ. ಕೆಲವರು ‘ಬಹಳ ಮುದ್ದಾದ ಬೆಕ್ಕು’ ಎಂದು ಕಾಮೆಂಟ್ ಮಾಡಿದ್ದರೆ ಮತ್ತೆ ಕೆಲವರು ಮಾರ್ಜಾಲದ ತುಂಟತನವನ್ನು ಕೊಂಡಾಡಿದ್ದಾರೆ.

ಈ ಬಾರಿಯ ಒಲಂಪಿಕ್ಸ್ ಜಪಾನ್​ನ ಟೊಕಿಯೊದಲ್ಲಿ ನಡೆಯುತ್ತಿದೆ. ಕೊರೊನಾ ಕಾರಣದಿಂದಾಗಿ ಒಲಂಪಿಕ್ಸ್ ಸ್ಪರ್ಧೆಗಳು ನಡೆಯುವ ಸ್ಥಳದಲ್ಲಿ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗಿಲ್ಲ. ಆದ್ದರಿಂದ ಕ್ರೀಡಾ ಪ್ರೇಮಿಗಳು ಮನೆಯಲ್ಲಿಯೇ ಕುಳಿತು ಸ್ಪರ್ಧೆಗಳನ್ನು ಆನಂದಿಸಬೇಕಾಗಿದೆ. ಇತ್ತೀಚೆಗೆ ಜಪಾನ್​ನಲ್ಲಿ ಕೊರೊನಾ ಪ್ರಕರಣಗಳು ತೀವ್ರತರವಾಗಿ ಏರಿಕೆಯಾಗುತ್ತಿದ್ದರೂ, ಒಲಂಪಿಕ್ಸ್​ಗೆ ಸಮಸ್ಯೆಯಿಲ್ಲ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Tokyo Olympics: ರಿಂಗ್​ನಲ್ಲಿ ಭಾರತದ ಬಾಕ್ಸರ್​ಗಳಿಗೆ ತೀವ್ರತರವಾಗಿ ಏಟು ಬಿದ್ದರೂ ಉಪಚರಿಸಲು ಸ್ಥಳದಲ್ಲಿ ವೈದ್ಯರಿಲ್ಲ!

ಇದನ್ನೂ ಓದಿ: ಲಂಚ ಪಡೆದಿದ್ದೇನೆ ಏನೀಗಾ ? ಸಾರ್ವಜನಿಕರ ಜೊತೆ ನಂಜನಗೂಡು ಪಿಡಿಓ ಪುರುಷೋತ್ತಮ ಮಾತಿನ ಚಕಮಕಿ: ವಿಡಿಯೋ ವೈರಲ್

(A cat tries to catch the Olympic Gymnastic participants in front of TV video goes viral)