Viral Video: ಹೊಸ ಬಾಸ್! ಶಾಲೆಯೊಳಗೆ ನುಗ್ಗಿ ಪ್ರಿನ್ಸಿಪಾಲ್ ಕುರ್ಚಿಯೇರಿ ಕುಳಿತ ತುಂಟ ಕೋತಿಯ ವಿಡಿಯೋ ವೈರಲ್

Monkey Video: ಆ ಚೇಂಬರ್​ನೊಳಗೆ ಬಂದ ಬೇರೆ ಶಿಕ್ಷಕರು ಕಿಟಕಿಯಿಂದ ಒಳಗೆ ಬಂದು ಪ್ರಿನ್ಸಿಪಾಲ್ ಚೇರ್​ನಲ್ಲಿ ಕುಳಿತಿದ್ದ ಕೋತಿಯನ್ನು ಓಡಿಸಲು ಪ್ರಯತ್ನಿಸಿದರು. ಆದರೆ, ಏನೇ ಮಾಡಿದರೂ ಆ ಮಂಗಣ್ಣ ಚೇರ್ ಬಿಟ್ಟು ಹೋಗಲು ಒಪ್ಪಲೇ ಇಲ್ಲ.

Viral Video: ಹೊಸ ಬಾಸ್! ಶಾಲೆಯೊಳಗೆ ನುಗ್ಗಿ ಪ್ರಿನ್ಸಿಪಾಲ್ ಕುರ್ಚಿಯೇರಿ ಕುಳಿತ ತುಂಟ ಕೋತಿಯ ವಿಡಿಯೋ ವೈರಲ್
ಪ್ರಿನ್ಸಿಪಾಲ್ ಕುರ್ಚಿಯಲ್ಲಿ ಕೋತಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jul 30, 2021 | 6:44 PM

ತುಂಟಾಟಕ್ಕೆ ಹೆಸರಾಗಿರುವ ಕೋತಿಗಳು ಕೆಲವೊಮ್ಮೆ ಮಾಡುವ ತಲೆಹರಟೆಗಳು ಒಂದೆರಡಲ್ಲ. ದಂಡು ಕಟ್ಟಿಕೊಂಡು ಬಂದು ಮನೆಯ ಮೇಲೆಲ್ಲ ಸರ್ಕಸ್ ಮಾಡುವ, ತೋಟಕ್ಕೆ ನುಗ್ಗಿ ಅಡಿಕೆ, ಹಣ್ಣುಗಳು, ತೆಂಗಿನಕಾಯಿಯನ್ನೆಲ್ಲ ಒಡೆದು ಹಾಕುವ, ಕೈಯಲ್ಲಿ ಕವರ್ ಹಿಡಿದುಕೊಂಡು ಹೋಗುತ್ತಿದ್ದವರ ಮೇಲೆ ಏಕಾಏಕಿ ದಾಳಿ ಮಾಡಿ ಅವರ ಕೈಯಲ್ಲಿದ್ದ ತಿಂಡಿಗಳನ್ನೆಲ್ಲ ಸ್ವಾಹಾ ಮಾಡುವ ಮಂಗಗಳ ಮಂಗಾಟವನ್ನು ನೋಡದವರಾರು? ಆದರೆ, ಇಲ್ಲೊಂದು ಕೋತಿ ಸೀದಾ ಶಾಲೆಯೊಳಗೆ ಹೋಗಿ ಪ್ರಿನ್ಸಿಪಾಲ್ ಕುರ್ಚಿಯ ಮೇಲೇ ಕಣ್ಣಿಟ್ಟಿದೆ! ಚೇಂಬರ್​ನೊಳಗೆ ಬಂದ ಟೀಚರ್​ಗಳು ತಮ್ಮ ಶಾಲೆಗೆ ಬಂದ ಹೊಸ ಪ್ರಾಂಶುಪಾಲರನ್ನು ನೋಡಿ ಕಂಗಾಲಾಗಿದ್ದಾರೆ!

ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ಈ ತಮಾಷೆಯ ಘಟನೆ ನಡೆದಿದೆ. ಇಲ್ಲಿನ ಸರ್ಕಾರಿ ಶಾಲೆಯ ಸುತ್ತಮುತ್ತಲೂ ದಟ್ಟವಾದ ಅರಣ್ಯ ಇರುವುದರಿಂದ ಶಾಲೆಗೆ ಆಗಾಗ ಮಂಗಗಳ ದಂಡು ಮುತ್ತಿಗೆ ಹಾಕುತ್ತಿತ್ತು. ಕಾಡಿನಲ್ಲಿ ತಿನ್ನಲು ಏನೂ ಸಿಗದಿದ್ದಾಗ ಕೋತಿಗಳು ಶಾಲೆಯತ್ತ ಬರುತ್ತಿದ್ದವು. ಅದೇ ರೀತಿ ಈ ಬಾರಿಯೂ ಬಂದ ಮಂಗಗಳ ಗುಂಪಿನಲ್ಲಿದ್ದ ಒಂದು ಮಂಗ ಸೀದಾ ಪ್ರಿನ್ಸಿಪಾಲ್ ಚೇಂಬರ್​ನತ್ತ ಹೋಗಿತ್ತು.

ಪ್ರಿನ್ಸಿಪಾಲ್ ಕುಳಿತುಕೊಳ್ಳುವ ಚೇಂಬರ್​ನಲ್ಲಿದ್ದ ಮೇಜಿನ ಮೇಲೆ ಹತ್ತಿದ ಕೋತಿ ಅಲ್ಲಿದ್ದ ವಸ್ತುಗಳನ್ನೆಲ್ಲ ಎಸೆದು ಕೆಳಗೆ ಹಾಕಿತು. ಹಾಗೇ ಆಟವಾಡುತ್ತಾ ಪಕ್ಕದಲ್ಲಿದ್ದ ಕುರ್ಚಿಯ ಮೇಲೆ ಕುಳಿತುಕೊಂಡಿತು. ಪ್ರಿನ್ಸಿಪಾಲ್ ಕುಳಿತುಕೊಳ್ಳುವ ವೀಲಿಂಗ್ ಇರುವ ಚೇರ್ ಆಚೀಚೆ ಅಲುಗಾಡುತ್ತಿದ್ದಂತೆ ಇದೇನೋ ಒಂಥರಾ ಸ್ಪೆಷಲ್ ಆಗಿದೆಯಲ್ಲಾ ಎಂದು ಆ ಕೋತಿ ಕುರ್ಚಿಯನ್ನು ಹಿಡಿದುಕೊಂಡು ಅಲುಗಾಡಿಸುತ್ತಾ ತಾನೇ ಆ ಶಾಲೆಯ ಪ್ರಿನ್ಸಿಪಾಲ್ ಎಂಬ ರೀತಿ ಗತ್ತಿನಲ್ಲಿ ಕುಳಿತುಕೊಂಡಿತ್ತು.

ಅಷ್ಟರಲ್ಲಿ ಆ ಚೇಂಬರ್​ನೊಳಗೆ ಬಂದ ಬೇರೆ ಶಿಕ್ಷಕರು ಕಿಟಕಿಯಿಂದ ಒಳಗೆ ಬಂದು ಪ್ರಿನ್ಸಿಪಾಲ್ ಚೇರ್​ನಲ್ಲಿ ಕುಳಿತಿದ್ದ ಕೋತಿಯನ್ನು ಓಡಿಸಲು ಪ್ರಯತ್ನಿಸಿದರು. ಆದರೆ, ಏನೇ ಮಾಡಿದರೂ ಆ ಮಂಗಣ್ಣ ಚೇರ್ ಬಿಟ್ಟು ಹೋಗಲು ಒಪ್ಪಲೇ ಇಲ್ಲ. ಆ ವೀಲಿಂಗ್ ಇರುವ ಕುರ್ಚಿಯ ಸುತ್ತಲೂ ಸುತ್ತಿದ್ದ ಪ್ಲಾಸ್ಟಿಕ್ ಅನ್ನು ಎಳೆದು ಹರಿಯತೊಡಗಿದ ಕೋತಿಯನ್ನು ಅಲ್ಲಿಂದ ಓಡಿಸಲು ಇಡೀ ಶಾಲೆಯವರು ಏನೇನೋ ಸಾಹಸ ಮಾಡಿದರೂ ಉಪಯೋಗವಾಗಲಿಲ್ಲ. ಅಲ್ಲಿದ್ದವರು ಆ ಕೋತಿಯ ತುಂಟಾಟವನ್ನು ವಿಡಿಯೋ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಿದ್ದಾರೆ. ಆ ವಿಡಿಯೋ ನೋಡಿದವರು ನಗದೇ ಇರಲು ಸಾಧ್ಯವೇ ಇಲ್ಲ.

ಕೊನೆಗೆ ಆ ಹೊಸ ಕುರ್ಚಿಯನ್ನು ಕೋತಿ ಹಾಳು ಮಾಡಿಬಿಡಬಹುದು ಎಂಬ ಭಯದಲ್ಲಿ ಶಾಲೆಯ ಶಿಕ್ಷಕರು ಕೋಲನ್ನು ತಂದು ಕೋತಿಗೆ ಒಂದೇಟು ಕೊಟ್ಟು ಹೆದರಿಸಿ ಓಡಿಸಬೇಕಾಯಿತು.

ಇದನ್ನೂ ಓದಿ: Viral Video: 100 ಕೆಜಿ ತೂಕದ ಲೆಹೆಂಗಾ ತೊಟ್ಟು ನಿಂತ ವಧು; ವಿಷ್ ಮಾಡಲು ಜಾಗವಿಲ್ಲದೆ ಅತಿಥಿಗಳು ಕಂಗಾಲು!

Viral Video: ಯುವತಿಯರೂ ನಾಚುವಂತೆ ಡ್ಯಾನ್ಸ್ ಮಾಡುವ 78ರ ಅಜ್ಜಿಯ ವಿಡಿಯೋ ವೈರಲ್; ಈಕೆ ಈಗ ಟಿಕ್ ಟಾಕ್ ಸ್ಟಾರ್!

(Viral Video: Monkey occupies principals chair at Gwalior School Watch Funny video here)

Published On - 6:43 pm, Fri, 30 July 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ