
ಸೈಕ್ಲಿಸ್ಟ್ (cyclist) ಒಬ್ಬರು ಗುರಿ ತಲುಪಿದ ವೇಳೆ ವಿಜಯದ ಸಂಭ್ರಮಾಚರಣೆ ನಡೆಸಿದ್ದಾರೆ. ಈ ಸಂಭ್ರಮಾಚರಣೆ ಅವರ ಪಾಲಿಗೆ ಕ್ಷಣಿಕವಾಗಿ ಪರಿಣಮಿಸಿತು. ಏಕೆಂದರೆ ಸಂಭ್ರಮಾಚರಣೆ ಮಾಡುತ್ತಾ ಸೈಕಲ್ನಲ್ಲಿ ಬಂದು ಎದುರು ನಿಂತಿದ್ದ ತನ್ನ ಪತ್ನಿಗೆ ಆಕಸ್ಮಿಕವಾಗಿ ಡಿಕ್ಕಿ ಹೊಡೆದಿದ್ದಾನೆ. ಇದರಿಂದಾಗಿ ಆಕೆ ಪ್ರಜ್ಞಾಹೀನಳಾಗಿದ್ದಾಳೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್(Video Viral) ಆಗುತ್ತಿದೆ.
ಇದನ್ನೂ ಓದಿ: Trending: ರಂಗಪ್ರವೇಶ ಮಾಡಿದ ಅಂಬಾನಿ ಭಾವಿ ಸೊಸೆ ರಾಧಿಕಾ ಮರ್ಚೆಂಟ್, ಭರತನಾಟ್ಯ ವಿಡಿಯೋ ವೈರಲ್
ಲೂಯಿಸ್ ಕಾರ್ಲೋಸ್ ಚಿಯಾ ವಾರ್ಷಿಕ ಸೈಕ್ಲಿಂಗ್ ರೇಸ್ ವುಲ್ಟಾ ಎ ಕೊಲಂಬಿಯಾದಲ್ಲಿ ಉತ್ತಮ ಪ್ರದರ್ಶನದೊಂದಿಗೆ ಮೊದಲ ಸ್ಥಾನವನ್ನು ಪಡೆಯಲು ಯಶಸ್ವಿಯಾದರು. ಇದರ ಸಂತಸದಲ್ಲಿ ಅವರು ಸೈಕಲ್ನಲ್ಲೇ ಕುಳಿತುಕೊಂಡು ತನ್ನ ಎರಡೂ ಕೈಗಳಿಂದ ಎದೆಗೆ ಹೊಡೆಯುತ್ತಾ ಬಂದಿದ್ದಾರೆ. ಈ ವೇಳೆ ಸೈಕಲ್ ಛಾಯಾಗ್ರಾಹಕರಿದ್ದ ಗುಂಪಿನ ಕಡೆಗೆ ನುಗ್ಗಿದೆ. ಈ ಗುಂಪಿನಲ್ಲಿ ಸೈಕ್ಲಿಸ್ಟ್ ಪತ್ನಿಯೂ ಇದ್ದರು. ಅದರಂತೆ ಸೈಕಲ್ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದು, ಆಕೆ ಪ್ರಜ್ಞಾಹೀನಳಾಗಿದ್ದಾಳೆ.
ಇದನ್ನೂ ಓದಿ: Trending: ಯುಜ್ವೇಂದ್ರ ಚಹಾಲ್ ಪತ್ನಿ ಧನಶ್ರೀ ವಿಡಿಯೋ ವೈರಲ್
ಸ್ಥಳೀಯ ವರದಿಗಳ ಪ್ರಕಾರ, ಆಕೆ ವೈದ್ಯಕೀಯ ನಿಗಾದಲ್ಲಿದ್ದು, ತಲೆಯ ಗಾಯಕ್ಕೆ ಹೊಲಿಗೆ ಹಾಕಬೇಕಾಗಿದೆ. ಜಿಯಾ ಕೊಲಂಬಿಯಾ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ಲೂಯಿಸ್, “ನಾನು ಬ್ರೇಕ್ ಹಾಕಲು ಯತ್ನಿಸಿದೆ, ಆದರೂ ಸೈಕಲ್ ನಿಂತಿಲ್ಲ. ಆರಂಭದಲ್ಲಿ ನಾನು ಆಕೆ ಇನ್ನೊಬ್ಬ ವ್ಯಕ್ತಿಯಾಗಿರಬಹುದು ಎಂದು ಅಂದುಕೊಂಡಿದ್ದೆ. ನಂತರವೇ ಆಕೆ ನನ್ನ ಪತ್ನಿ ಎಂದು ತಿಳಿಯಿತು. ಅವಳು ಯಾಕೆ ದಾರಿಯಿಂದ ಹೊರಬರಲಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ” ಎಂದರು.
ಈ ಹಿಂದೆ ಯುಎಸ್ನ ಕ್ಯಾಲಿಫೋರ್ನಿಯಾದಲ್ಲಿ ಆಫ್-ರೋಡ್ ರೇಸ್ ಈವೆಂಟ್ ನಡೆದಿತ್ತು. ಈ ಸೈಕ್ಲಿಂಗ್ ಸ್ಪರ್ಧೆ ವೇಳೆ ಕೋಪಗೊಂಡ ಗೂಳಿಯೊಂದು ಸೈಕ್ಲಿಸ್ಟ್ನನ್ನು ಸೈಕಲ್ ಸಹಿತ ಎಸೆದಿದೆ. ಇದು ನಂತರ ಗೊಂದಲಕ್ಕೂ ಕಾರಣವಾಗಿತ್ತು. ಟೋನಿ ಇಂದರ್ಬಿಟ್ಜಿನ್ ಎಂಬ ಸೈಕ್ಲಿಸ್ಟ್ ಆರಂಭದಲ್ಲಿ ಗೂಳಿಯನ್ನು ಹಸು ಎಂದು ತಪ್ಪಾಗಿ ಗ್ರಹಿಸಿದ್ದನು. ಹತ್ತಿರ ಹೋಗುತ್ತಿದ್ದಂತೆ ಗೂಳಿ ಕೋಪಗೊಂಡು ದಾಳಿ ನಡೆಸಿದೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:42 pm, Tue, 7 June 22