Video: ತನ್ನ ದುಡಿಮೆಯ ಹಣದಲ್ಲಿ ತಾಯಿಯನ್ನು ಮೊದಲ ಬಾರಿಗೆ ಥಿಯೇಟರ್‌ಗೆ ಕರೆದೊಯ್ದ ಮಗಳು
ಮಕ್ಕಳ ಭವಿಷ್ಯಕ್ಕಾಗಿ, ಖುಷಿಗಾಗಿ ಹಗಲಿರುಳು ದುಡಿಯುವ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ. ಇದೀಗ ಮಗಳೊಬ್ಬಳು ತನ್ನ ಸ್ವಂತ ದುಡಿಮೆಯ ಹಣದಲ್ಲಿ ಮೊದಲ ಬಾರಿಗೆ ತಾಯಿಯನ್ನು ಸಿನಿಮಾ ನೋಡಲು ಕರೆದುಕೊಂಡು ಹೋದ ವಿಡಿಯೋ ವೈರಲ್ ಆಗಿದೆ. ಈ ಹೃದಯ ಸ್ಪರ್ಶಿ ದೃಶ್ಯವೂ ನೆಟ್ಟಿಗರ ಹೃದಯ ಗೆದ್ದಿದೆ.

ಚೆನ್ನಾಗಿ ಓದಿ ಕೆಲಸ ಗಿಟ್ಟಿಸಿಕೊಂಡು ತಂದೆ ತಾಯಿಯನ್ನು (parents ) ಚೆನ್ನಾಗಿ ನೋಡಿಕೊಳ್ಳಬೇಕೆನ್ನುವುದು ಪ್ರತಿಯೊಬ್ಬರಲ್ಲೂ ಇರುತ್ತದೆ. ಇದಕ್ಕೆ ಈ ವಿಡಿಯೋನೇ ಸಾಕ್ಷಿ. ಮಗಳೊಬ್ಬಳು ತಾನು ಕಷ್ಟಪಟ್ಟು ದುಡಿದ ಹಣದಲ್ಲಿ ತನ್ನ ತಾಯಿಯನ್ನು ಮೊದಲ ಬಾರಿಗೆ ಥಿಯೇಟರ್‌ಗೆ ಕರೆದುಕೊಂಡು ಸಿನಿಮಾ ತೋರಿಸಿ ಖುಷಿ ಪಡಿಸಿದ್ದಾಳೆ. ತಾಯಿಯ ಮೊಗದಲ್ಲಿ ನಗು ಮೂಡಿಸಿದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಾಯಿಯನ್ನು ಥಿಯೇಟರ್‌ಗೆ ಕರೆದೊಯ್ದ ಮಗಳು
ಅನಾಮಿಕ ಬಜ್ಪೆ (Anamika Bajpai) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಾಯಿಯ ಸಣ್ಣಪುಟ್ಟ ಆಸೆಯನ್ನು ಈಡೇರಿಸುವ ಮಗಳನ್ನು ಕಾಣಬಹುದು. ಈ ವಿಡಿಯೋದಲ್ಲಿ ತನ್ನ ಕಾಲ ಮೇಲೆ ನಿಂತು ಸಂಪಾದನೆ ಮಾಡುವ ಮಗಳು ತನ್ನ ಹೆತ್ತಮ್ಮನನ್ನು ಮೊದಲ ಬಾರಿಗೆ ಚಿತ್ರಮಂದಿರಕ್ಕೆ ಕರೆದೊಯ್ದ ದೃಶ್ಯವನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಮಗಳ ಜತೆಗೆ ಚಿತ್ರಮಂದಿರಕ್ಕೆ ಹೋದ ತಾಯಿಯ ಖುಷಿಯೂ ಆಕೆಯ ಮೊಗದಲ್ಲಿ ವ್ಯಕ್ತವಾಗಿದೆ. ಸಿನಿಮಾ ಮುಗಿದ ಬಳಿಕ ಇಬ್ಬರೂ ಜತೆಯಾಗಿ ಶಾಪಿಂಗ್ ಗೆ ತೆರಳಿ ಮನೆಗೆ ಬೇಕಾದ ದಿನಸಿ ಐಟಂಗಳನ್ನು ಖರೀದಿ ಮಾಡಿದ್ದಾರೆ. ಅದರ ಫುಡ್ ಕೋರ್ಟ್ ನಲ್ಲಿ ಮಗಳ ಜತೆಗೆ ಆಹಾರ ಸವಿದು ಖುಷಿ ಪಟ್ಟಿದ್ದಾಳೆ. ಮಗಳ ಜತೆಗೆ ಪ್ರತಿಯೊಂದು ಕ್ಷಣವನ್ನು ಎಂಜಾಯ್ ಮಾಡುವುದನ್ನು ನೀವು ನೋಡಬಹುದು.
ಇದನ್ನೂ ಓದಿ: ಇದು ನಿನ್ನ ಮುದ್ದಿನ ಮಗನ ಸರ್ಪ್ರೈಸ್ ಗಿಫ್ಟ್; ತಾಯಿಯ ಹುಟ್ಟುಹಬ್ಬಕ್ಕೆ ಚಿನ್ನದ ಕಿವಿಯೋಲೆ ನೀಡಿದ ಮಗ
ಈ ವಿಡಿಯೋ ಒಂಭತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇದು ಆಕೆಯ ಕನಸಾಗಿರಬೇಕು ಎಂದು ಹೇಳಿದ್ದಾರೆ. ಮತ್ತೊಬ್ಬರು, ಮುಗ್ಧ ಅಮ್ಮಂದಿರನ್ನು ನೋಡುವ ಕೊನೆಯ ಜನರೇಷನ್ ನಮ್ಮದು ಮಾತ್ರ ಎಂದಿದ್ದಾರೆ. ಇನ್ನೊಬ್ಬರು, ಅದೃಷ್ಟವಂತೆ ತಾಯಿ, ನಿಮ್ಮ ಬಗ್ಗೆ ಹೆಮ್ಮೆ ಅನಿಸುತ್ತದೆ ಎಂದು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




