Viral Video: ಅಬ್ಬಬ್ಬಾ ಚಿರತೆಯ ದಾಳಿಯಿಂದ ಸ್ವಲ್ಪದರಲ್ಲಿಯೇ  ಪಾರಾದ ಶ್ವಾನ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 26, 2024 | 6:07 PM

ಕಾಡು ಪ್ರಾಣಿಗಳು ಆಹಾರವನ್ನರಸುತ್ತಾ, ಜನವಸತಿ ಪ್ರದೇಶಕ್ಕೆ ಬಂದು, ಶ್ವಾನಗಳ ಮೇಲೆ, ದನ ಕರುಗಳ ಮೇಲೆ ಮತ್ತು ಜನರ ಮೇಲೆ ದಾಳಿ ಮಾಡುವಂತಹ ಸುದ್ದಿಗಳು ಆಗಾಗ್ಗೆ ಕೇಳಿಬರುತ್ತಿರುತ್ತವೆ. ಈಗ ಅದೇ ಘಟನೆಯೊಂದು ನಡೆದಿದ್ದು, ಹಾಡು ಹಗಲೇ ಆಹಾರವನ್ನರಸುತ್ತಾ ಜನವಸತಿ ಪ್ರದೇಶಕ್ಕೆ ಬಂದಂತಹ ಚಿರತೆಯೊಂದು ಮನೆಯ ವರಾಂಡದಲ್ಲಿ ಮಲಗಿದ್ದಂತಹ ಶ್ವಾನವನ್ನು ಹೊತ್ತೊಯ್ಯಲು ಪ್ರಯತ್ನಿಸಿದೆ. ಅದೃಷ್ಟವಶಾತ್ ಕೂದಲೆಳೆಯುವ ಅಂತರದಲ್ಲಿ ಶ್ವಾನವು ಚಿರತೆಯ ಬಲೆಯಿಂದ ತಪ್ಪಿಸಿಕೊಂಡು ಪ್ರಾಣವನ್ನು ಉಳಿಸಿಕೊಂಡಿದೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Viral Video: ಅಬ್ಬಬ್ಬಾ ಚಿರತೆಯ ದಾಳಿಯಿಂದ ಸ್ವಲ್ಪದರಲ್ಲಿಯೇ  ಪಾರಾದ ಶ್ವಾನ
Follow us on

ಚಿರತೆ ಬೇಟೆಗಾರ ಪ್ರಾಣಿ. ಅವುಗಳು  ಕಾಡಿನಲ್ಲಿರುವ ಇತರೆ  ದುರ್ಬಲ ಪ್ರಾಣಿಗಳನ್ನು ಬೇಟೆಯಾಡುತ್ತವೆ.  ಅಷ್ಟೇ ಅಲ್ಲದೆ ಈ ಬೇಟೆಗಾರ ಪ್ರಾಣಿಗಳಾದ ಹುಲಿ,ಚಿರತೆಗಳು ಆಹಾರವನ್ನರಸುತ್ತಾ ಜನವಸತಿ ಪ್ರದೇಶಕ್ಕೆ ಬರುವುದು ಕೂಡಾ ಹೊಸದೇನು ಅಲ್ಲ. ಹೀಗೆ ಈ ಕಾಡು ಮೃಗಗಳು ಮನೆಯ ಬಳಿ ಇದ್ದ ಶ್ವಾನಗಳ ಮೇಲೆ, ದರನ ಕರುಗಳ ಮೇಲೆ, ಜನರ ಮೇಲೆ ದಾಳಿ ಮಾಡುವಂತಹ ಸುದ್ದಿಗಳು ಆಗಾಗ್ಗೆ ಕೇಳಿಬರುತ್ತಿರುತ್ತವೆ.   ಅದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, ಹಾಡುಹಗಲೇ  ಆಹಾರವನ್ನರಸುತ್ತಾ, ಜನವಸತಿ ಪ್ರದೇಶದತ್ತ ಬಂದಂತಹ ಚಿರತೆಯೊಂದು ಮನೆಯ ವರಾಂಡದಲ್ಲಿ ಮಲಗಿದ್ದಂತ ಸಾಕು ನಾಯಿಯನ್ನು ಹೊತ್ತೊಯ್ಯಲು ಪ್ರಯತ್ನಿಸಿದೆ. ಅದೃಷ್ಟವಶಾತ್ ಶ್ವಾನವು ಕೂದಲೆಳೆಯುವ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದೆ.  ಈ ಭಯಾನಕ ದೃಶ್ಯ ಸಿಸಿ ಟಿಯಲ್ಲಿ ಸೆರೆಯಾಗಿದ್ದು, ಈ ಘಟನೆ ಕೇರಳದಲ್ಲಿ ನಡೆದಿದ್ದು ಎಂದು ಹೇಳಲಾಗುತ್ತಿದೆ.

@wayanad_today ಎಂಬ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೊದಲ್ಲಿ ಮನೆಯ ವರಾಂಡದಲ್ಲಿ ನೆಮ್ಮದಿಯಾಗಿ ಮಲಗಿದ್ದಂತಹ ಶ್ವಾನವನ್ನು ಚಿರತೆಯೊಂದು ಹೊತ್ತೊಯ್ಯುತ್ತಿರುವಂತಹ   ಭಯಾನಕ  ದೃಶ್ಯವನ್ನು ಕಾಣಬಹುದು.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:


ವೈರಲ್ ವಿಡಿಯೋದಲ್ಲಿ ಮನೆಯ ವರಾಂಡಲ್ಲಿ ಶ್ವಾನವೊಂದು ನೆಮ್ಮದಿಯಾಗಿ ಮಲಗಿರುತ್ತದೆ. ಅತ್ತ ಹಾಡು ಹಗಲೇ ಕಾಡು ಪ್ರದೇಶದಿಂದ  ಆಹಾರವನ್ನರಸುತ್ತಾ ಜನವಸತಿ ಪ್ರದೇಶಕ್ಕೆ ಬಂದಂತಹ  ಚಿರತೆಯೊಂದು, ಮನೆಯ ವರಾಂಡದಲ್ಲಿ ಮಲಗಿದ್ದಂತಹ ಶ್ವಾನವನ್ನು ಕಂಡು  ಇವತ್ತಿನ ಊಟಕ್ಕೆ  ಒಳ್ಳೆಯ ಬೇಟೆ ಸಿಕ್ಕಿತು ಎನ್ನುತ್ತಾ, ಓಡೋಡಿ ಬಂದು ಮಲಗಿದ್ದಂತಹ ನಾಯಿಯ ಕುತ್ತಿಗೆಯನ್ನು  ಕಚ್ಚಿ ಹಿಡಿದು ಹೊತ್ತೊಯ್ಯಲು ಪ್ರಯತ್ನಿಸುತ್ತದೆ. ಅಷ್ಟರಲ್ಲಿ ಮನೆಯ ಮಾಲೀಕ ಹೊರ ಬರುತ್ತಿದ್ದಂತೆ, ಚಿರತೆಯು ಶ್ವಾನವನ್ನು ಹೊತ್ತೊಯ್ದು ಹೋಗೇ ಬಿಡುತ್ತೆ, ಆದರೆ ಅದೃಷ್ಟವಶಾತ್ ಶ್ವಾನವು ಹೇಗೋ ಚಿರತೆಯ ಬಲೆಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಇತ್ತಕಡೆ ನಮ್ಮ ಮುದ್ದಿನ ನಾಯಿಯನ್ನೇ ಬೇಟೆಯಾಡಲು ಬರುತ್ತೀಯಾ ಎನ್ನುತ್ತಾ ಮನೆಯ ಮಾಲೀಕ ಕೋಪದಿಂದ ಚಿರತೆಯನ್ನು ಅಟ್ಟಾಡಿಸಿಕೊಂಡು ಹೋಗುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ:  ವೈದ್ಯರ ಬರಹ ಸುಲಭವಾಗಿ ಸಾಮಾನ್ಯ ಜನರಿಗೆ ಅರ್ಥ ಆಗೋಲ್ಲ ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ 

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ  72 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಚಿರತೆಯಿಂದ ಓಡಿದ ವ್ಯಕ್ತಿಯ ಧೈರ್ಯಕ್ಕೆ ಮೆಚ್ಚಲೇಬೇಕುʼ ಅಂತ ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಚಿರತೆಯನ್ನು ಅಟ್ಟಾಡಿಸಿಕೊಂಡು ಹೋದದಂತಹ ವ್ಯಕ್ತಿ ಮರಳಿ ಬಂದಿದ್ದಾನೆಯೇʼ ಅಂತ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ.  ಮತ್ತೊಬ್ಬ ಬಳಕೆದಾರರು ʼಅಲ್ಲಾ ಆ ವ್ಯಕ್ತಿ ಚಿರತೆಯ ಹಿಂದೆ ಓಡಿ ಹೋಗುವಂತಹ ಅಗತ್ಯವೇನಿತ್ತುʼ ಎಂದು ಕೇಳಿದ್ದಾರೆ. ಇನ್ನೂ ಅನೇಕರು ಅಬ್ಬಾಬ್ಬ ಈ ದೃಶ್ಯ ತುಂಬಾ ಭಯಾನಕವಾಗಿದೆ ಅಂತ ಕಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ