Viral Video: ಸ್ವಾಮಿ ನಿಷ್ಠೆ ಶ್ವಾನ: ಮಾಲೀಕನಿಗಾಗಿ ಪ್ರಾಣ ನೀಡಲು ಸಿದ್ಧ  

ಶ್ವಾನಗಳು ಅತ್ಯಂತ ನಂಬಿಕೆಯ ಪ್ರಾಣಿಗಳಾಗಿವೆ. ಇದೀಗ ಅದು ಮತ್ತೊಮ್ಮೆ ಸಾಬೀದಾಗಿದೆ. ಹೌದು ಮಾಲೀಕನು ನೀರಿನಲ್ಲಿ ಮುಳುಗುತ್ತಿದ್ದಂತ ದೃಶ್ಯವನ್ನು ಕಂಡು ಶ್ವಾನವೊಂದು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಮಾಲೀಕನ ಜೀವವನ್ನು ರಕ್ಷಣೆ ಮಾಡಿದೆ.  ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು,  ನಿಜವಾಗಿಯೂ ಗುಣದಲಿ ಪ್ರಾಣಿಗಳೇ ಮೇಲು ಅನ್ನುತ್ತಿದ್ದಾರೆ ನೆಟ್ಟಿಗರು. 

Viral Video: ಸ್ವಾಮಿ ನಿಷ್ಠೆ ಶ್ವಾನ: ಮಾಲೀಕನಿಗಾಗಿ ಪ್ರಾಣ ನೀಡಲು ಸಿದ್ಧ  
Edited By:

Updated on: Jan 22, 2024 | 5:20 PM

ನಿಷ್ಠೆ, ನಿಯತ್ತು, ನಿಷ್ಕಲ್ಮಶ ಪ್ರೀತಿ  ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ಶ್ವಾನಗಳು. ಹೌದು ಶ್ವಾನಗಳು ಸ್ವಾಮಿ ನಿಷ್ಠೆಗೆ ಹರುವಾಸಿಯಾದ ಪ್ರಾಣಿ. ಮನುಷ್ಯನ ಉತ್ತಮ ಸ್ನೇಹಿತನಾಗಿರುವ ನಾಯಿಗಳು ಎಷ್ಟೋ ಬಾರಿ ತನ್ನ ಪ್ರಾಣವನ್ನೇ ಒತ್ತೆಯಿಟ್ಟು ತನ್ನ ಮಾಲೀಕನ, ಮಕ್ಕಳ ಪ್ರಾಣವನ್ನು ರಕ್ಷಿಸಿದ ಉದಾಹರಣೆಗಳಿವೆ. ಇನ್ನೂ ಕೆಲವರು ನಿಜವಾಗಿಯೂ ಶ್ವಾನಗಳು ನಮ್ಮನ್ನು  ರಕ್ಷಿಸುತ್ತವೆಯೇ ಎಂದು ತಿಳಿಯಲು ಶ್ವಾನಗಳ ಮುಂದೆ  ಅಪಾಯದಲ್ಲಿ ಸಿಳುಕಿರುವಂತೆ  ನಾಟಕವಾಡುತ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಸಾಕು ಶ್ವಾನದ ಎದುರು ನೀರಿನಲ್ಲಿ ಮುಳುಗುತ್ತಿರುವಂತೆ ನಾಟಕವಾಡಿದ್ದಾನೆ. ಈ ದೃಶ್ಯವನ್ನು ಕಂಡ ಶ್ವಾನ  ತನ್ನ ಮಾಲೀಕ  ನಿಜವಾಗಿಯು ಅಪಾಯದಲ್ಲಿ ಸಿಳುಕಿದ್ದಾನೆ ಎಂದು ತಿಳಿದು, ತನ್ನ ಪ್ರಾಣವನ್ನೇ ಒತ್ತೆಯಿಟ್ಟು, ಮಾಲೀಕನ್ನು ನೀರಿನಿಂದ ಎಳೆದುಕೊಂಡು ಬಂದು, ರಕ್ಷಿಸಿದೆ.  ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು, ನಿಜವಾಗಿಯೂ ಗುಣದಲಿ ಪ್ರಾಣಿಗಳೆ ಮೇಲು ಎನ್ನುತ್ತಿದ್ದಾರೆ ನೆಟ್ಟಿಗರು.

ಮಾನ್ ದಾಮೋರ್ (@maamdamor) ಎಂಬವರು ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದುವೇ ನಿಷ್ಕಲ್ಮಶ ಪ್ರೀತಿ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಶ್ವಾನವೊಂದು ನೀರಿನಲ್ಲಿ ಮುಳುಗುತ್ತಿದ್ದಂತಹ ತನ್ನ ಮಾಲೀಕನ ಪ್ರಾಣ ರಕ್ಷಣೆಯನ್ನು ಮಾಡುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋದಲ್ಲಿ ವ್ಯಕ್ತಿಗಳಿಬ್ಬರು ನದಿ ನೀರಿನಲ್ಲಿ ಆಟವಾಡುತ್ತಿರುತ್ತಾರೆ, ಮತ್ತು ಅಲ್ಲೇ ದಡದ ಬದಿಯಲ್ಲಿ ನಿಂತಿದ್ದ ಸಾಕು ನಾಯಿಯ ಜೊತೆ ಸ್ವಲ್ಪ ತಮಾಷೆ ಮಾಡೋಣ, ಆ ಶ್ವಾನ ಹೇಗೆ ಪ್ರತಿಕ್ರಿಯಿಸುತ್ತೆ ನೋಡೋಣ ಅಂತ ಹೇಳಿ, ಆ ವ್ಯಕ್ತಿ ನೀರಿನಲ್ಲಿ ಮುಳುಗಿ ಹೋದಂತೆ ನಾಟಕವಾಡುತ್ತಾನೆ. ಇದರಿಂದ ಗಾಬರಿಗೊಂಡ ಶ್ವಾನ, ನನ್ನ ಮಾಲೀಕನನ್ನು ಹೇಗಾದರೂ ಮಾಡಿ ರಕ್ಷಿಸಲೇಬೇಕು ಅಂತ ಬೌ ಬೌ ಎಂದು ಬೊಗಳುತ್ತಾ, ತನ್ನ ಪ್ರಾಣವನ್ನು ಲೆಕ್ಕಿಸದೆ ನೀರಿಗೆ ಹಾರಿ, ಮಾಲೀಕನ್ನು ಎಳೆದುಕೊಂಡು ಬರುವ ಭಾವನಾತ್ಮಕ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಅಕ್ಕಿಯಲ್ಲಿ ಅರಳಿದ ಸೀತಾ ರಾಮ

ಡಿಸೆಂಬರ್ 21 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಒಂದು ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದುಬಂದಿವೆ.  ಒಬ್ಬ ಬಳಕೆದಾರರು ʼನಿಜವಾಗಿಯೂ ಮಾನವನಿಗಿಂತ ಶ್ವಾನಗಳೇ ಮೇಲುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಪ್ರಾಣಿಗಳಲ್ಲಿರುವ ಮಾನವೀಯ ಗುಣ ಮನುಷ್ಯರಲ್ಲಿ ಯಾಕಿಲ್ಲʼ ಅಂತ ಕೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ಪ್ರಾಣಿಗಳೇ ಗುಣದಲಿ ಮೇಲು ಅಂತ ಕಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಈ ಭಾವನಾತ್ಮಕ ವಿಡಿಯೋಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ