ಆನ್‌ಲೈನ್ ಗೇಮಿಂಗ್ ಆ್ಯಪ್(Online Gaming App) ನಲ್ಲಿ 49 ರೂಪಾಯಿ ಹೂಡಿಕೆ ಮಾಡಿದ ವ್ಯಕ್ತಿ, ರಾತ್ರೋರಾತ್ರಿ 1.5 ಕೋಟಿಗೆ ಒಡೆಯನಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಐಪಿಎಲ್ ಪ್ರಾರಂಭವಾಗುತ್ತಿದ್ದಂತೆ ಕ್ರಿಕೆಟ್ ಬೆಟ್ಟಿಂಗ್ ಕೂಡ ಪ್ರಾರಂಭವಾಗಿದೆ. ಇದರಲ್ಲಿ ಸಾಕಷ್ಟು ದುಡ್ಡು ಹಾಕಿ ಕೈ ಸುಟ್ಟುಕೊಳ್ಳುವವರೇ ಹೆಚ್ಚು. ಆದರೆ ಇಲ್ಲೊಬ್ಬ ಆನ್‌ಲೈನ್ ಗೇಮಿಂಗ್ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗುರುವ ಸುದ್ದಿ ಇದೀಗಾ ಭಾರೀ ವೈರಲ್ ಆಗಿದೆ.
ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಚಾಲಕನಾಗಿರುವ ಈತ ಭಾನುವಾರ ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್‌ನಲ್ಲಿ 49 ರೂಪಾಯಿ ಹೂಡಿಕೆ ಮಾಡಿದ್ದಾನೆ. ಇದರಲ್ಲಿ ಈತ ವರ್ಚುವಲ್ ಕ್ರಿಕೆಟ್ ತಂಡವನ್ನು ರಚಿಸಿ ಮೊದಲ ಸ್ಥಾನವನ್ನು ಪಡೆಯುವ ಮೂಲಕ 1.5 ಕೋಟಿ ರೂಪಾಯಿ ಗೆದ್ದಿದ್ದಾನೆ.
ಇದನ್ನೂ ಓದಿ: ಪಿಸ್ತೂಲಿನಿಂದ ಕೇಕ್ ಕಟ್ ಮಾಡಿ ಹುಟ್ಟು ಹಬ್ಬದಂದೇ ಜೈಲು ಸೇರಿದ ವ್ಯಕ್ತಿ
ಶಹಾಬುದ್ದೀನ್ ಮನ್ಸೂರಿ ಎಂದು ಗುರುತಿಸಲಾದ ವ್ಯಕ್ತಿ ಕಳೆದ ಎರಡು ವರ್ಷಗಳಿಂದ ಇಂತಹ ಆನ್‌ಲೈನ್ ಕ್ರಿಕೆಟ್ ಆಟಗಳಲ್ಲಿ ತಂಡಗಳನ್ನು ಕಟ್ಟುತ್ತಿದ್ದರೂ ಕೂಡ ಅದೃಷ್ಟ ಕುಲಾಯಿಸಿರಲ್ಲಿಲ್ಲ. ಆದರೆ ಭಾನುವಾರ ನಡೆದ ಕೋಲ್ಕತ್ತಾ ಮತ್ತು ಪಂಜಾಬ್ ನಡುವಿನ ಪಂದ್ಯ ಈತನ ಅದೃಷ್ಟವನ್ನೇ ಬದಲಾಯಿಸಿದೆ. ಪ್ರಸ್ತುತ, ಶಹಾಬುದ್ದೀನ್ ತನ್ನ ಆ್ಯಪ್ ವ್ಯಾಲೆಟ್‌ನಿಂದ ರೂ 20 ಲಕ್ಷವನ್ನು ಹಿಂಪಡೆದಿದ್ದಾರೆ, ವಿಜೇತ ಮೊತ್ತದ 1.5 ಕೋಟಿ ರೂ. ಒಟ್ಟು ರೂ.6 ಲಕ್ಷ ತೆರಿಗೆ ಕಡಿತಗೊಳ್ಳಲಿದೆ.
ಮಧ್ಯಪ್ರದೇಶದ ಸೆಂಧ್ವಾದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಶಹಬುದ್ದೀನ್ ಗೆದ್ದ ಹಣದಲ್ಲಿ ಸ್ವಂತ ಮನೆ ಕಟ್ಟುವ ಯೋಜನೆ ಹಾಕಿಕೊಂಡಿದ್ದಾರೆ. ಉಳಿದ ಮೊತ್ತದಲ್ಲಿ ಸ್ವಂತ ಉದ್ಯಮ ಆರಂಭಿಸುವ ಗುರಿಯನ್ನೂ ಹೊಂದಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 1:32 pm, Tue, 4 April 23