ದೈತ್ಯಾಕಾರದ ಹೆಬ್ಬಾವಿನ ಮೇಲೆ ಮಲಗಿ ಆಟವಾಡಿದ ಪುಟ್ಟ ಬಾಲಕಿ; ವಿಡಿಯೋ ವೈರಲ್

ಈ ವಿಡಿಯೋವನ್ನು ಸ್ನೇಕ್ ವರ್ಡ್ ಕೂಡಾ ತನ್ನ ಇನ್​ಸ್ಟಾಗ್ರಾಮ್ ಪೇಜ್​ನಲ್ಲಿ ಹಂಚಿಕೊಂಡಿದೆ. ನಾಲ್ಕು ಸಾವಿರಕ್ಕೂ ಹೆಚ್ಚು ಲೈಕ್ಸ್ಗಳು ಬಂದಿದ್ದು, ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗುತ್ತಿದ್ದಂತೆ ವೈರಲ್ ಆಗಿದೆ.

ದೈತ್ಯಾಕಾರದ ಹೆಬ್ಬಾವಿನ ಮೇಲೆ ಮಲಗಿ ಆಟವಾಡಿದ ಪುಟ್ಟ ಬಾಲಕಿ; ವಿಡಿಯೋ ವೈರಲ್
ಹೆಬ್ಬಾವಿನೊಂದಿಗೆ ಆಟವಾಡುತ್ತಿರುವ ಪುಟ್ಟ ಬಾಲಕಿ
Edited By:

Updated on: Dec 13, 2021 | 9:31 AM

ನವದೆಹಲಿ: ಹಾವು ಎಂದರೆ ಒಂದು ಕ್ಷಣ ಮೈ ನಡುಗುತ್ತೆ. ಹಾವಿನ ಹೆಸರು ಹೇಳುತ್ತಿದ್ದಂತೆ ರೋಮಗಳು ನೆಟ್ಟಗಾಗುತ್ತವೆ. ಮುಖ ಬೆವರುವುದಕ್ಕೆ ಶುರುವಾಗುತ್ತೆ. ಇದಕ್ಕೆ ಕಾರಣ ಭಯ. ದೂರದಿಂದಲೇ ಹಾವು ಕಣ್ಣಿಗೆ ಬಿದ್ದರೆ ಸಾಕು ಭಯಕ್ಕೆ ಓಡುವುದು ಸಹಜ. ಆದರೆ ಚಿಕ್ಕ ಬಾಲಕಿಯೊಬ್ಬಳು ದೈತ್ಯಾಕಾರದ ಹಾವಿನೊಂದಿಗೆ ಆಟವಾಡಿದ್ದಾಳೆ. ಹಾವಿನ ಮೇಲೆ ಮಲಗಿ ಆಟವಾಡುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೆಂಪು ಟಿ-ಶರ್ಟ್, ಪ್ಯಾಂಟ್ ಮತ್ತು ನೀಲಿ ಬಣ್ಣದ ಚಪ್ಪಲಿ ಧರಿಸಿರುವ ಮುದ್ದಾದ ಪುಟ್ಟ ಬಾಲಕಿ ದೈತ್ಯಾಕಾರದ ಹಾವಿನೊಂದಿಗೆ ಆಟವಾಡಿದ್ದಾಳೆ. ಹೆಬ್ಬಾವು ಕೂಡಾ ಆ ಬಾಲಕಿಗೆ ಏನು ಮಾಡದೇ ಆಟವಾಡಿದೆ. ಬಾಲಕಿ ಮತ್ತು ಹೆಬ್ಬಾವು ಆಟದ ದೃಶ್ಯವನ್ನು ಆಕೆಯ ಮನೆಯ ಹೊರಗೆ ಚಿತ್ರೀಕರಿಸಲಾಗಿದೆ ಎಂದು ತಿಳಿದುಬಂದಿದೆ.

ಈ ವಿಡಿಯೋವನ್ನು ಸ್ನೇಕ್ ವರ್ಡ್ ಕೂಡಾ ತನ್ನ ಇನ್​ಸ್ಟಾಗ್ರಾಮ್ ಪೇಜ್​ನಲ್ಲಿ ಹಂಚಿಕೊಂಡಿದೆ. ನಾಲ್ಕು ಸಾವಿರಕ್ಕೂ ಹೆಚ್ಚು ಲೈಕ್ಸ್ಗಳು ಬಂದಿದ್ದು, ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗುತ್ತಿದ್ದಂತೆ ವೈರಲ್ ಆಗಿದೆ. ಅಲ್ಲದೇ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಹೆಬ್ಬಾವಿನ ಜೊತೆ ಅಂಬೆಗಾಲಿಡುವ ಮಗು ಎಷ್ಟು ನಿರ್ಭಯವಾಗಿ ಆಟವಾಡಿದೆ ಎಂದು ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.

ಈ ವಿಡಿಯೋಗೆ ಪ್ರತಿಕ್ರಿಯಿಸಿದವರಲ್ಲಿ ಕೆಲವರು ಆಕೆಯ ಧೈರ್ಯಶಾಲಿ ಬಗ್ಗೆ ಹೊಗಳಿದ್ದಾರೆ ಮತ್ತು ಪ್ರಶಂಸಿಸಿದ್ದಾರೆ. ಇನ್ನೊಬ್ಬರು ವಾವ್ ಗ್ರೇಟ್, ಭಾರತದ ಬೆಂಬಲದಿಂದ ಪ್ರಭಾವಶಾಲಿಯಾಗಿದೆ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ

Kashi Vishwanath Corridor: ವಿಶ್ವ ಖ್ಯಾತ ಪ್ರವಾಸಿ ತಾಣ ಕಾಶಿ ಈಗ ಮತ್ತಷ್ಟು ಹೈಟೆಕ್; ಏನಿದರ ವಿನ್ಯಾಸ – ವಿಶೇಷತೆ?

ಪುನೀತ್​ ರಾಜ್​ಕುಮಾರ್​ ಭಾವಚಿತ್ರ ಹಿಡಿದುಕೊಂಡು ಶಬರಿಮಲೆ ಯಾತ್ರೆ ಮಾಡಿದ ಅಭಿಮಾನಿಗಳು