AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಗೃಹಿಣಿಯಾಗಿರುವ ತನ್ನ ಪತ್ನಿಗೆ ಪ್ರತಿ ತಿಂಗಳು ಸಂಬಳ ನೀಡುವ ಸರ್ಕಾರಿ ಉದ್ಯೋಗಿ

ಗೃಹಿಣಿಯಾಗಿ ಬಿಟ್ಟರೆ ಪ್ರತಿಯೊಂದು ವಿಷ್ಯಕ್ಕೂ ಗಂಡನನ್ನೇ ಅವಲಂಬಿಸಬೇಕು, ದುಡ್ಡು ಬೇಕಾದ್ರು ಪತಿಯ ಬಳಿ ಕೇಳಲೇಬೇಕು. ಹೀಗಿರುವಾಗ ಇಲ್ಲೊಬ್ಬ ವ್ಯಕ್ತಿ ಗೃಹಿಣಿಯಾಗಿರುವ ತನ್ನ ಪತ್ನಿಯ ಶ್ರಮವನ್ನು ಅರಿತು ಆಕೆಗೆ ತಿಂಗಳಿಗೆ ವೇತನ ನೀಡುತ್ತಿದ್ದಾರೆ. ದೈನಂದಿನ ವೆಚ್ಚ, ಇತರ ವೆಚ್ಚಗಳನ್ನು ತಾವೇ ನೋಡಿಕೊಂಡು ಪತ್ನಿಯ ಕೆಲಸಕ್ಕೆ ಇಂತಿಷ್ಟು ಹಣ ಕೊಡುತ್ತಾರಂತೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಗೃಹಿಣಿಯಾಗಿರುವ ತನ್ನ ಪತ್ನಿಗೆ ಪ್ರತಿ ತಿಂಗಳು ಸಂಬಳ ನೀಡುವ ಸರ್ಕಾರಿ ಉದ್ಯೋಗಿ
ಸಾಂದರ್ಭಿಕ ಚಿತ್ರImage Credit source: Getty Images
ಸಾಯಿನಂದಾ
|

Updated on:Sep 04, 2026 | 1:48 PM

Share

ಮನೆಯನ್ನು ನಿಭಾಯಿಸುವ ಗೃಹಿಣಿಯರಿಗೆ (housewife) ರಜೆ, ವೇತನ ಅನ್ನೋದು ಇರೋದೇ ಇಲ್ಲ. ತನ್ನ ಜೀವನವನ್ನು ಮನೆ ಕೆಲಸ, ಅಡುಗೆ, ಮಕ್ಕಳ ಆರೈಕೆಯಲ್ಲೇ ಕಳೆದುಬಿಡುತ್ತಾಳೆ. ತನ್ನ ಪುಟ್ಟ ಪ್ರಪಂಚವನ್ನು ಮನೆ ಮಕ್ಕಳು ಸಂಸಾರದಲ್ಲೇ ಕಟ್ಟಿಕೊಂಡಿರುತ್ತಾಳೆ. ಇದೀಗ ಸರ್ಕಾರಿ ಉದ್ಯೋಗಿಯೊಬ್ಬರು ಮನೆಯನ್ನು ಅಚ್ಚು ಕಟ್ಟಾಗಿ ನಿಭಾಯಿಸುವ ಪತ್ನಿಗೆ ತಿಂಗಳಿಗೆ ಇಂತಿಷ್ಟು ವೇತನ ನೀಡುತ್ತಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದ್ದು, ಪತಿಯ ಈ ನಡೆ ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.

ಗೃಹಿಣಿ ಪತ್ನಿಗೆ ಪ್ರತಿ ತಿಂಗಳು ಸಂಬಳ ನೀಡುವ ಪತಿ

ಆರ್ ಟ್ವೆಂಟಿಸ್ ಇಂಡಿಯಾ (r/TwentiesIndia) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ವ್ಯಕ್ತಿಯೊಬ್ಬರು ಪೋಸ್ಟ್ ಹಂಚಿಕೊಂಡಿದ್ದಾರೆ. ಸರ್ಕಾರಿ ಉದ್ಯೋಗದಲ್ಲಿರುವ ನನ್ನ ಹಿರಿಯ ಸಹೋದರ ಗೃಹಿಣಿಯಾಗಿ ಮನೆಯನ್ನು ಅಚ್ಚುಕಟ್ಟಾಗಿ ಮುನ್ನಡೆಸುವ ಪತ್ನಿಗೆ ಪ್ರತಿ ತಿಂಗಳು ವೇತನ ನೀಡುವ ಬಗ್ಗೆ ಹೇಳಿಕೊಂಡಿದ್ದಾರೆ. ದೈನಂದಿನ ವೆಚ್ಚ, ದಿನಸಿ  ಸಾಮಗ್ರಿಗಳ ಬಿಲ್ ಹಾಗೂ ಇತರ ವೆಚ್ಚಗಳನ್ನು ಸಹೋದರನೇ ನೋಡಿಕೊಳ್ಳುತ್ತಾರೆ. ಮನೆ ಕೆಲಸ, ಅಡುಗೆ ಕೆಲಸ ಹಾಗೂ ಮನೆಯನ್ನು ನಿಭಾಯಿಸುವ ಮಡದಿಗೆ ತಿಂಗಳಿಗೆ ಹಣವನ್ನು ಸಂಬಳವಾಗಿ ನೀಡುತ್ತಾರೆ ಎಂದಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

My brother pays his housewife wife a monthly “salary” for household work. What do you think about this? by u/bait_rage in TwentiesIndia

ಗೃಹಿಣಿಯಾಗಿದ್ರು ಆರ್ಥಿಕ ಸ್ವಾತಂತ್ರ್ಯ ಮುಖ್ಯ ಎಂದ ವ್ಯಕ್ತಿ

ಗೃಹಿಣಿಯಾಗಿ ಬಿಡುವಿಲ್ಲದೆ ದುಡಿಯುವ ಹೆಣ್ಣು ಜೀವಕ್ಕೆ ಹಾಗೂ ಅವರ ಶ್ರಮಕ್ಕೆ ಬೆಲೆ ಬೇಕಲ್ಲವೇ. ಭಾರತೀಯ ದಂಪತಿಗಳು ಈ ರೀತಿ ಹಣಕಾಸನ್ನು ನಿರ್ವಹಿಸುವುದನ್ನು ನಾನು ಹಿಂದೆಂದೂ ನೋಡಿಲ್ಲ. ಹೆಂಡತಿ ಖರ್ಚಿಗೆ ಕೇಳಿದಾಗಲೆಲ್ಲಾ ಗಂಡ ಹಣ ನೀಡುತ್ತಾನೆ ಎಂದು ಬರೆದುಕೊಂಡಿದ್ದಾರೆ. ಮನೆಯಲ್ಲಿಯೇ ಇರುವ ಹೆಂಡತಿಗೆ ಆರ್ಥಿಕ ಸ್ವಾತಂತ್ರ್ಯ ನೀಡಲು ಹಾಗೂ ಅವಳ ಶ್ರಮವನ್ನು ಮೌಲ್ಯೀಕರಿಸಲು ಇದು ಆರೋಗ್ಯಕರ ಮಾರ್ಗವೆಂದು ನೀವು ಭಾವಿಸುತ್ತೀರಾ? ಅಥವಾ ಈ ರೀತಿಯ ನಡೆಯೂ ಮದುವೆ ಎಂಬ ಬಂಧನವನ್ನು ಉದ್ಯೋಗದಂತೆ ತುಂಬಾ ವಹಿವಾಟಿನ ಭಾವನೆ ಮೂಡಿಸುತ್ತದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಮಹಿಳೆಯರಿಂದ ವಿಭಿನ್ನ ದೃಷ್ಟಿಕೋನಗಳನ್ನು ಕೇಳಲು ನನಗೆ ನಿಜವಾಗಿಯೂ ಕುತೂಹಲವಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹುಡ್ಗ ಒಳ್ಳೆಯವನೇ, ಆದ್ರೆ ಹೈಟ್ ಕಡಿಮೆ; ಪ್ರಪೋಸಲ್ ರಿಜೆಕ್ಟ್ ಮಾಡಿದ ಯುವತಿ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ರೀತಿ ಯೋಚಿಸುವ ಮನಸ್ಥಿತಿಗಳು ಬೇಕು ಎಂದಿದ್ದಾರೆ. ಇನ್ನೊಬ್ಬರು, ನನ್ನ ಹೆಂಡತಿ ನನ್ನ ಖರ್ಚುಗಳನ್ನು ಬರಿಸುತ್ತಾಳೆ. ಆಕೆ ನನಗಿಂತ ಹೆಚ್ಚಿ ಸಂಪಾದನೆ ಮಾಡುತ್ತಾಳೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ನೀವು ಹೇಳಿದ್ದಂತೆ ಆರ್ಥಿಕ ಸ್ವಾತಂತ್ರ್ಯ ಬಹಳ ಮುಖ್ಯ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:44 pm, Fri, 4 September 26

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!