AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಡ್ಗ ಒಳ್ಳೆಯವನೇ, ಆದ್ರೆ ಹೈಟ್ ಕಡಿಮೆ; ಪ್ರಪೋಸಲ್ ರಿಜೆಕ್ಟ್ ಮಾಡಿದ ಯುವತಿ

ಈಗಿನ ಕಾಲದಲ್ಲಿ ಮದ್ವೆಯಾಗಲು ಹುಡುಗಿ ಸಿಗುವುದೇ ಕಷ್ಟ. ಈ ಹುಡುಗಿಯರ ಡಿಮ್ಯಾಂಡ್ ನಿಂದಾಗಿ ಮದ್ವೆ ಬೇಡ್ವೇ ಬೇಡ ಎನ್ನುವ ಮಟ್ಟಿಗೆ ಗಂಡು ಮಕ್ಕಳು ಬಂದು ಬಿಟ್ಟಿದ್ದಾರೆ. ಆದರೆ ಇಲ್ಲೊಬ್ಬಳು ಯುವತಿ, ಹುಡುಗನ ಎತ್ತರ ಕಡಿಮೆ ಎನ್ನುವ ಕಾರಣಕ್ಕೆ ಆ ಹುಡುಗನನ್ನೇ ತಿರಸ್ಕರಿಸಿದ್ದಾಳೆ. ಉತ್ತಮ ಗುಣಗಳ ಜತೆಗೆ ಅಂದ ಚಂದ ಕೂಡ ಮುಖ್ಯನೇ ಅಲ್ವಾ ಎಂದು ನೆಟ್ಟಿಗರಲ್ಲಿ ಪ್ರಶ್ನೆ ಕೇಳಿದ್ದು, ಸದ್ಯಕ್ಕೆ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಹುಡ್ಗ ಒಳ್ಳೆಯವನೇ, ಆದ್ರೆ ಹೈಟ್ ಕಡಿಮೆ; ಪ್ರಪೋಸಲ್ ರಿಜೆಕ್ಟ್ ಮಾಡಿದ ಯುವತಿ
ಸಾಂದರ್ಭಿಕ ಚಿತ್ರImage Credit source: Getty Images
ಸಾಯಿನಂದಾ
| Edited By: |

Updated on:Sep 02, 2026 | 3:10 PM

Share

ಮದುವೆಯಾಗುವ ಪ್ರತಿಯೊಬ್ಬ ಹೆಣ್ಣು ಗಂಡಿಗೂ ಒಂದಷ್ಟು ಆಸೆಗಳಿರುತ್ತವೆ. ಹೀಗಾಗಿ ಹುಡುಗ ಅಥವಾ ಹುಡ್ಗಿಯ ಮುಂದೆ ಒಂದಷ್ಟು ಬೇಡಿಕೆಯಿಡುವುದು ಸಹಜ. ಇನ್ನು, ಆಂತರಿಕ ಸೌಂದರ್ಯಕ್ಕಿಂತ ಬಾಹ್ಯ ಸೌಂದರ್ಯ ನೋಡಿ ಮದ್ವೆಯಾಗುವವರೇ ಹೆಚ್ಚು. ಇಲ್ಲೊಬ್ಬಳು ಯುವತಿಯದ್ದು ಅದೇ ಕಥೆ. ಹೌದು, ಉತ್ತಮ ಗುಣ ಸ್ವಭಾವದ ಹುಡುಗ ಸಿಕ್ಕಿದ್ರೂ ಎತ್ತರ ಕಡಿಮೆ ಎನ್ನುವ ಒಂದೇ ಕಾರಣಕ್ಕೆ ರಿಜೆಕ್ಟ್ ಮಾಡಿದ್ದಾಳೆ. ತನ್ನ ಸಂಗಾತಿಯ ಆಯ್ಕೆ ವಿಚಾರದಲ್ಲಿ ತಾನು ಮಾಡಿದ ನಿರ್ಧಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಚರ್ಚೆಗೆ ಕಾರಣವಾಗಿದೆ.

ಹುಡ್ಗನನ್ನು ರಿಜೆಕ್ಟ್ ಮಾಡಲು ಯುವತಿ ನೀಡಿದ ಕಾರಣ ನೋಡಿ

ಚೈಪಗ್ಲೂ (Chaipaglu) ಹೆಸರಿನ ಎಕ್ಸ್ ಖಾತೆಯಲ್ಲಿ ಯುವತಿ ಬಾಳ ಸಂಗಾತಿಯ ಆಯ್ಕೆಯಲ್ಲಿ ತಾನು ತೆಗೆದುಕೊಂಡ ನಿರ್ಧಾರದ ಬಗ್ಗೆ ವಿವರಿಸಿದ್ದಾಳೆ. ಈ ಪೋಸ್ಟ್ ನಲ್ಲಿ ನಿನ್ನೆ ನಾನು ಒಬ್ಬ ವ್ಯಕ್ತಿಯನ್ನು ತಿರಸ್ಕರಿಸಿದೆ, ಏಕೆಂದರೆ ನನ್ನ ಆದ್ಯತೆಗೆ ತಕ್ಕಷ್ಟು ಎತ್ತರ ಅವರು ಇರಲಿಲ್ಲ. ಆದರೆ ಅವರಲ್ಲಿ ಯಾವುದೇ ಕೊರತೆಯಿರಲಿಲ್ಲ.

ವೈರಲ್ ಪೋಸ್ಟ್‌ ಇಲ್ಲಿದೆ

ಆ ವ್ಯಕ್ತಿ ಒಳ್ಳೆಯ ಸ್ವಭಾವದವರು, ಗೌರವಯುತವಾಗಿ ನಡೆದುಕೊಳ್ಳುವವರು ಹಾಗೂ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆದರೆ, ಆ ವ್ಯಕ್ತಿ ಎತ್ತರವನ್ನು ಬದಲಾಯಿಸಲು ನನ್ನಿಂದ ಸಾಧ್ಯವಿಲ್ಲ ಎಂಬುದು ನನಗೆ ಗೊತ್ತು. ಆದರೆ, ಕೇವಲ ಒಬ್ಬ ಒಳ್ಳೆಯ ವ್ಯಕ್ತಿ ಎಂಬ ಕಾರಣಕ್ಕಾಗಿಯೇ, ದೈಹಿಕವಾಗಿ ಸಾಕಷ್ಟು ಎತ್ತರವಿಲ್ಲದವರನ್ನು ನಾನು ಏಕೆ ಮದುವೆಯಾಗಬೇಕು? ದೈಹಿಕ ಆಕರ್ಷಣೆಯೂ ಮುಖ್ಯವಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ತನ್ನ ಕೈಯಾರೆ ಕಾಳು ತಿನಿಸಿ ಹಕ್ಕಿ ಮರಿಗಳ ಹಸಿವು ನೀಗಿಸಿದ ಯುವತಿ

ಯುವತಿಗೆ ಸಲಹೆ ನೀಡಿದ ನೆಟ್ಟಿಗರು

ಈ ಪೋಸ್ಟ್ ಏಳು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ದೈಹಿಕ ಸೌಂದರ್ಯ ಮುಖ್ಯ ಎಂದು ಹೇಳಿದ್ದಾರೆ. ಇನ್ನೊಬ್ಬರು, ಎತ್ತರಕ್ಕಿಂತ ಒಳ್ಳೆಯ ಗುಣವುಳ್ಳ ವ್ಯಕ್ತಿ ಸಿಗುವುದು ಅಪರೂಪ ಎಂದು ಹೇಳಿದ್ದಾರೆ. ಮತ್ತೊಬ್ಬರು, ಕೊರತೆಯನ್ನು ಹುಡುಕುತ್ತಾ ಕುಳಿತರೆ ಮದ್ವೆ ಆಗಲ್ಲ, ಒಳ್ಳೆಯ ಹುಡ್ಗ ಸಿಕ್ಕರೆ ಒಪ್ಪಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:12 pm, Wed, 2 September 26

Follow Us
ನೀವಿರುವಲ್ಲೇ ಇ ಖಾತಾ ಪಡೆಯಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ
ನೀವಿರುವಲ್ಲೇ ಇ ಖಾತಾ ಪಡೆಯಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ
ದೇವರಿಗೆ ಹಾಡು ಹಾಡಿ ಪ್ರಾರ್ಥಿಸಿದ ಕಿರಣ್ ಶಾಸ್ತ್ರಿ; ಬೀಳಲಿಲ್ಲ ಹೂವು
ದೇವರಿಗೆ ಹಾಡು ಹಾಡಿ ಪ್ರಾರ್ಥಿಸಿದ ಕಿರಣ್ ಶಾಸ್ತ್ರಿ; ಬೀಳಲಿಲ್ಲ ಹೂವು
ಜಾತಿನಿಂದನೆ ಆರೋಪ; ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮತ್ತೊಂದು ಎಫ್​ಐಆರ್
ಜಾತಿನಿಂದನೆ ಆರೋಪ; ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮತ್ತೊಂದು ಎಫ್​ಐಆರ್
ಕಾವೇರಿ ನೀರು ಹಂಚಿಕೆ: ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆ
ಕಾವೇರಿ ನೀರು ಹಂಚಿಕೆ: ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆ
ಇಂದು ಶ್ರವಣ ದ್ವಾದಶಿ: ಮೇಷಾದಿ 12 ರಾಶಿಗಳ ಜನರ ದಿನ ಭವಿಷ್ಯ ಇಲ್ಲಿದೆ
ಇಂದು ಶ್ರವಣ ದ್ವಾದಶಿ: ಮೇಷಾದಿ 12 ರಾಶಿಗಳ ಜನರ ದಿನ ಭವಿಷ್ಯ ಇಲ್ಲಿದೆ
'ನಮ್ಮ ಉಗ್ರರು ನಿಯಂತ್ರಣದಲ್ಲಿದ್ದಾರೆ'; ಮಾನ ಹರಾಜು ಹಾಕಿಕೊಂಡ ಪಾಕಿಸ್ತಾನ
'ನಮ್ಮ ಉಗ್ರರು ನಿಯಂತ್ರಣದಲ್ಲಿದ್ದಾರೆ'; ಮಾನ ಹರಾಜು ಹಾಕಿಕೊಂಡ ಪಾಕಿಸ್ತಾನ
: ಟಿವಿ9 ವರದಿಯ ಸಕಾರಾತ್ಮಕ ಪರಿಣಾಮಕ್ಕೆ ಗದಗ ಪೋಷಕರ ಧನ್ಯವಾದ
: ಟಿವಿ9 ವರದಿಯ ಸಕಾರಾತ್ಮಕ ಪರಿಣಾಮಕ್ಕೆ ಗದಗ ಪೋಷಕರ ಧನ್ಯವಾದ
‘ಭಾರತ-ಪಾಕ್ ಯುದ್ಧ ತಡೆದು, 3 ಕೋಟಿ ಜನರ ಜೀವ ಉಳಿಸಿದೆ’; ಟ್ರಂಪ್ ಹಳೇ ರಾಗ
‘ಭಾರತ-ಪಾಕ್ ಯುದ್ಧ ತಡೆದು, 3 ಕೋಟಿ ಜನರ ಜೀವ ಉಳಿಸಿದೆ’; ಟ್ರಂಪ್ ಹಳೇ ರಾಗ
ಸಿದ್ದರಾಮಯ್ಯ ಪ್ಯಾಲೇಸ್ ಕಟ್ಟಿಲ್ಲ: ಹೊಸ ಮನೆ ಬಗ್ಗೆ ಜಮೀರ್ ಹೇಳಿದ್ದಿಷ್ಟು
ಸಿದ್ದರಾಮಯ್ಯ ಪ್ಯಾಲೇಸ್ ಕಟ್ಟಿಲ್ಲ: ಹೊಸ ಮನೆ ಬಗ್ಗೆ ಜಮೀರ್ ಹೇಳಿದ್ದಿಷ್ಟು
ಗುಲ್ಮಾರ್ಗ್‌ನಲ್ಲಿ ಹಿಮಪಾತ; ಶ್ವೇತವರ್ಣಕ್ಕೆ ತಿರುಗಿದ ಪರ್ವತಗಳು
ಗುಲ್ಮಾರ್ಗ್‌ನಲ್ಲಿ ಹಿಮಪಾತ; ಶ್ವೇತವರ್ಣಕ್ಕೆ ತಿರುಗಿದ ಪರ್ವತಗಳು