AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ತನ್ನ ಕೈಯಾರೆ ಕಾಳು ತಿನಿಸಿ ಹಕ್ಕಿ ಮರಿಗಳ ಹಸಿವು ನೀಗಿಸಿದ ಯುವತಿ

ನಿಸ್ವಾರ್ಥ ಮನೋಭಾವದಿಂದ ಮೂಕ ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡಿ ಅವುಗಳ ಹಸಿವನ್ನು ನೀಗಿಸುವವರನ್ನು ಕಂಡಾಗ ನಿಜಕ್ಕೂ ಖುಷಿಯಾಗುತ್ತದೆ. ಇದೀಗ ಯುವತಿಯೊಬ್ಬಳು ಹಕ್ಕಿ ಮರಿಗಳಿಗೆ ಕಾಳು ನೀಡಿ ಅದರ ಹಸಿವನ್ನು ನೀಗಿಸಿದ್ದಾಳೆ. ಈ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ತನ್ನ ಕೈಯಾರೆ ಕಾಳು ತಿನಿಸಿ ಹಕ್ಕಿ ಮರಿಗಳ ಹಸಿವು ನೀಗಿಸಿದ ಯುವತಿ
ವೈರಲ್‌ ವಿಡಿಯೋImage Credit source: Twitter
ಸಾಯಿನಂದಾ
|

Updated on: Aug 23, 2026 | 6:07 PM

Share

ನಮ್ಮಲ್ಲಿ ಕೆಲವರಿಗೆ ಈ ಪ್ರಾಣಿ (Animal), ಪಕ್ಷಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಅವುಗಳಿಗೆ ಆಹಾರ ಹಾಕುವುದು, ನೀರು ಕುಡಿಯಲು ಇಡುವುದು ಹೀಗೆ ಹಸಿವು ನೀಗಿಸುವ ಕೆಲಸ ಮಾಡುತ್ತಾರೆ. ಇದೀಗ ಈ ಯುವತಿಯದ್ದು ಅಷ್ಟೇ ಒಳ್ಳೆಯ ಗುಣ. ಗೂಡಿನಲ್ಲಿದ್ದ ಪುಟಾಣಿ ಹಕ್ಕಿ ಮರಿಗಳಿಗೆ ಯುವತಿಯೊಬ್ಬಳು ತಿನ್ನಲು ಆಹಾರ ನೀಡಿದ್ದಾಳೆ. ಯುವತಿಯ ಒಳ್ಳೆಯ ಕೆಲಸಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಫ ಕಾಂಟಾ (Fa conta) ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಹಕ್ಕಿಯೊಂದು ಕಬ್ಬಿಣದ ರಾಡ್‌ನಲ್ಲಿ ಗೂಡು ಕಟ್ಟಿದೆ. ಇದರಲ್ಲಿ ಪುಟ್ಟ ಮರಿಗಳು ಆಹಾರ ತರಲು ಹೊರಟ ತಾಯಿಗಾಗಿ  ಕಾಯುತ್ತಿದೆ. ಇದನ್ನರಿತ ಯುವತಿಯೊಬ್ಬಳು ತಾಯಿ ಹಕ್ಕಿಯಂತೆ ಸದ್ದು ಮಾಡುತ್ತಾ, ಈ ಹಕ್ಕಿ ಮರಿಗಳಿಗೆ ಕಾಳುಗಳನ್ನು ನೀಡುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಜಾರು ಬಂಡಿ ಆಟ ಆಡಲು ಕೋತಿಗಳಲ್ಲಿ ಪೈಪೋಟಿ, ವೈರಲ್‌ ಆಯ್ತು ದೃಶ್ಯ

ಈ ವಿಡಿಯೋ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ದೃಶ್ಯ ನೋಡಿ ಖುಷಿಯಾಯ್ತು ಎಂದಿದ್ದಾರೆ. ಇನ್ನೊಬ್ಬರು, ಈ ಮರಿಗಳು ತನ್ನ ತಾಯಿಯೇ ಆಹಾರ ನೀಡುತ್ತಿದೆ ಎಂದು ಭಾವಿಸಿರಬಹುದು ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ಸಣ್ಣ ಕೆಲಸದಲ್ಲಿ ಇರುವ ಖುಷಿ ಬೇರೆಲ್ಲೂ ಸಿಗಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬಿಗ್​​ಬಾಸ್ ಕೊಟ್ಟ ಶಿಕ್ಷೆಗೆ ಗಳ-ಗಳನೆ ಅತ್ತ ಕಿರಣ್ ಶಾಸ್ತ್ರಿ: ವಿಡಿಯೋ
ಬಿಗ್​​ಬಾಸ್ ಕೊಟ್ಟ ಶಿಕ್ಷೆಗೆ ಗಳ-ಗಳನೆ ಅತ್ತ ಕಿರಣ್ ಶಾಸ್ತ್ರಿ: ವಿಡಿಯೋ
ಫಾಲ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ಅನಂತ್‌ನಾಗ್‌ ಫಸ್ಟ್ ರಿಯಾಕ್ಷನ್
ಫಾಲ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ಅನಂತ್‌ನಾಗ್‌ ಫಸ್ಟ್ ರಿಯಾಕ್ಷನ್
ಟಿವಿ9 ಕಚೇರಿಯಲ್ಲಿ ಗಣೇಶೋತ್ಸವ: ಅದ್ಧೂರಿ ಮೆರವಣಿಗೆಯೊಂದಿಗೆ ಗಣೇಶ ವಿಸರ್ಜನೆ
ಟಿವಿ9 ಕಚೇರಿಯಲ್ಲಿ ಗಣೇಶೋತ್ಸವ: ಅದ್ಧೂರಿ ಮೆರವಣಿಗೆಯೊಂದಿಗೆ ಗಣೇಶ ವಿಸರ್ಜನೆ
ಬಿಕೆ ಹರಿಪ್ರಸಾದ್ ಕೈಗೆ ಬಲ ತುಂಬಿದ ಸುರ್ಜೆವಾಲಾ, ವೇಣುಗೋಪಾಲ್
ಬಿಕೆ ಹರಿಪ್ರಸಾದ್ ಕೈಗೆ ಬಲ ತುಂಬಿದ ಸುರ್ಜೆವಾಲಾ, ವೇಣುಗೋಪಾಲ್
ಯುಪಿಐ ವಹಿವಾಟುಗಳಿಗೆ ಹೊಸ ಶುಲ್ಕ: ಯಾರು ಶುಲ್ಕ ಕಟ್ಟಬೇಕು? ಇಲ್ಲಿದೆ ಉತ್ತರ
ಯುಪಿಐ ವಹಿವಾಟುಗಳಿಗೆ ಹೊಸ ಶುಲ್ಕ: ಯಾರು ಶುಲ್ಕ ಕಟ್ಟಬೇಕು? ಇಲ್ಲಿದೆ ಉತ್ತರ
ಬೀದರ್​ನ ಪ್ರವಾಸಿ ತಾಣಗಳಲ್ಲಿ ಇರುವ ಕುಂದು ಕೊರತೆಗಳು ಒಂದಾ, ಎರಡಾ? ವಿಡಿಯೋ
ಬೀದರ್​ನ ಪ್ರವಾಸಿ ತಾಣಗಳಲ್ಲಿ ಇರುವ ಕುಂದು ಕೊರತೆಗಳು ಒಂದಾ, ಎರಡಾ? ವಿಡಿಯೋ
ಮೈಸೂರು ಹೊಸ ಮನೆ ಹಿಂದಿನ ರಹಸ್ಯ ಬಿಚ್ಚಿಟ್ಟ ಯತೀಂದ್ರ ಸಿದ್ದರಾಮಯ್ಯ
ಮೈಸೂರು ಹೊಸ ಮನೆ ಹಿಂದಿನ ರಹಸ್ಯ ಬಿಚ್ಚಿಟ್ಟ ಯತೀಂದ್ರ ಸಿದ್ದರಾಮಯ್ಯ
ಪಿಎಂ ಕಿಸಾನ್ ಸಮ್ಮಾನ್ ನಿಧಿ: ಇ-ಕೆವೈಸಿ ಮಾಡಿಸೋದೇಗೆ?; ಇಲ್ಲಿದೆ ಮಾಹಿತಿ
ಪಿಎಂ ಕಿಸಾನ್ ಸಮ್ಮಾನ್ ನಿಧಿ: ಇ-ಕೆವೈಸಿ ಮಾಡಿಸೋದೇಗೆ?; ಇಲ್ಲಿದೆ ಮಾಹಿತಿ
ಗಣೇಶ ಹಬ್ಬಕ್ಕೆ ಡಿಪೋ, ಬಸ್ ನಿಲ್ದಾಣದಲ್ಲಿ ಪ್ರಸಾದ ಸಿದ್ದಗೊಳಿಸದಂತೆ ಆದೇಶ
ಗಣೇಶ ಹಬ್ಬಕ್ಕೆ ಡಿಪೋ, ಬಸ್ ನಿಲ್ದಾಣದಲ್ಲಿ ಪ್ರಸಾದ ಸಿದ್ದಗೊಳಿಸದಂತೆ ಆದೇಶ
ತಾವರೆಕೆರೆ ಮೆಟ್ರೋ ಸ್ಟೇಷನ್ ಹೆಸರು ಬದಲಿಸದಂತೆ ಸ್ಥಳೀಯರು ಬಿಗಿಪಟ್ಟು
ತಾವರೆಕೆರೆ ಮೆಟ್ರೋ ಸ್ಟೇಷನ್ ಹೆಸರು ಬದಲಿಸದಂತೆ ಸ್ಥಳೀಯರು ಬಿಗಿಪಟ್ಟು