Trending: ”ಯಾ.. ನಾನು ಹಾರ್ನ್​ ಹಾಕಿಸಿದೆ” ವಿಡಿಯೋ ವೈರಲ್

ಮುದ್ದಾದ ಬಾಲಕನೊಬ್ಬ ಟ್ರಕ್​ ಚಾಲಕನಿಂದ ಹಾರ್ನ್​ ಮಾಡಿಸಿದ ನಂತರ ಪಡುವ ಸಂತೋಷದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, 4 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

Trending: ಯಾ.. ನಾನು ಹಾರ್ನ್​ ಹಾಕಿಸಿದೆ ವಿಡಿಯೋ ವೈರಲ್
ವೈರಲ್ ಆದ ಬಾಲಕ
Image Credit source: homeportmom
Edited By:

Updated on: Jun 07, 2022 | 7:34 AM

ಸಣ್ಣ ವಯಸ್ಸಿನಲ್ಲಿ ವಾಹನಗಳ ಮೇಲೆ ಎಲ್ಲಿಲ್ಲದ ಪ್ರೀತಿ, ರಸ್ತೆಯಲ್ಲಿ ವಾಹನಗಳು ಹೋಗುವಾಗ ಚಾಲಕನಿಗೆ ಹಾಯ್ ಎಂದು ಹೇಳದಿದ್ದರೆ ಸಮಧಾನವೇ ಆಗಲ್ಲ. ಅದೇ ರೀತಿ ಸಣ್ಣ ಬಾಲಕನೊಬ್ಬ ದೂರದಿಂದ ಬರುವ ದೊಡ್ಡ ಟ್ರಕ್​​ ನೋಡಿ ಹಾಯ್ ಎನ್ನಲು ಹಾತೊರೆಯುವ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ. ಇದನ್ನೂ ಓದಿ: Viral video: ದನದ ಮುಂದೆ ಡಾನ್ಸ್ ಮಾಡಿದ ಯುವತಿ, ಹಾಯಲು ಹೋದ ದನ!

ವೈರಲ್ ವಿಡಿಯೋದಲ್ಲಿ ಇರುವಂತೆ, ಸಣ್ಣ ಬಾಲಕನೊಬ್ಬ ತನ್ನ ಕೈಯಿಂದ ಟ್ರಕ್​ಗೆ ತಾನಿಲ್ಲಿದ್ದೇನೆ ಎಂದು ಸಿಗ್ನಲ್ ಕೊಡುತ್ತಾನೆ. ಆ ಟ್ರಕ್ ಬಾಲಕನ ಹತ್ತಿರ ಬರುತ್ತಿದ್ದಂತೆ ಚಾಲಕ ಹಾರ್ನ್​ ಹಾಕುತ್ತಾನೆ. ಇದರಿಂದಾಗಿ ಬಾಲಕ ತುಂಬಾ ಸಂತೋಷ ಪಡುತ್ತಾನೆ. ಅಲ್ಲದೆ ”ಯಾ.. ನಾನು ಹಾರ್ನ್​​ ಹಾಕಿಸಿದೆ” ಎಂದು ಸಂತೋಷದಿಂದ ಜಿಗಿಯುತ್ತಾನೆ. ಈ ವಿಡಿಯೋವನ್ನು ಟಿಫಾನಿ ಡೇವನ್‌ಪೋರ್ಟ್ ಎಂಬವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಟ್ರಕ್​ಗಳು ಹೋಗುವಾಗ ಹಾರ್ನ್​​ ಮಾಡಿಸಿಕೊಳ್ಳಲು ಇಷ್ಟಪಡುತ್ತಾನೆ. ಇದು ಈತನಿಗೆ ತುಂಬಾ ಸಂತೋಷ ತರುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಶೀರ್ಷಿಕೆ ನೀಡಿದ್ದಾರೆ.

ವಿಡಿಯೋ ವೀಕ್ಷಿಸಿ:

ಈ ವಿಡಿಯೋ ವೈರಲ್ ಆಗುತ್ತಿದ್ದು, 4 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 46,000ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಜನರು ಕಾಮೆಂಟ್ ವಿಭಾಗದಲ್ಲಿ ತಮ್ಮದೇ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಒಬ್ಬಾತ ”ಇದುವರೆಗಿನ ಅತ್ಯುತ್ತಮ ಭಾವನೆಗಳಲ್ಲಿ 1” ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: Viral Video: ಚೀನಾದಲ್ಲಿ ಮಕ್ಕಳಿಗೆ ಕ್ರೀಡಾ ತರಬೇತಿ ಹೇಗಿರುತ್ತದೆ ಗೊತ್ತಾ? ಇಲ್ಲಿ ನೋಡಿ

ಮಕ್ಕಳ ಹಾಗೂ ಮಗುವಿನ ಚಟುವಟಿಕೆಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಹಂಚಿಕೊಳ್ಳಲಾಗುತ್ತದೆ. ಜನರು ಇಂಥ ವಿಡಿಯೋಗಳನ್ನು ಸಾಮಾನ್ಯವಾಗಿ ಇಷ್ಟಪಡುತ್ತಾರೆ. ಯೂಟ್ಯೂಬ್‌ನಲ್ಲಿ ವೈರಲ್‌ಹಾಗ್ ಹಂಚಿಕೊಂಡ ಇತ್ತೀಚಿನ ವೀಡಿಯೊದಲ್ಲಿ ಪುಟ್ಟ ಹುಡುಗಿಯೊಬ್ಬಳು ಆಟಿಕೆ ಪಿಸ್ತೂಲ್ ಹಿಡಿದು ಲಾಲಿಪಾಪ್ ತಿನ್ನುತ್ತಾ ಬೀದಿಯಲ್ಲಿ ನಡೆಯುತ್ತಿದ್ದಳು. ಒಂದು ಪುಟ್ಟ ನಾಯಿಮರಿ ಅವಳನ್ನು ಹಿಂಬಾಲಿಸುತ್ತಾ ಅವಳ ಮೇಲೆ ಹಾರಿ ಲಾಲಿಪಾಪ್ ಕಸಿದುಕೊಂಡು ಹೋಗುತ್ತದೆ. ನಾಯಿ ನನ್ನ ಲಾಲಿಪಪ್ ಕಿತ್ತುಕೊಂಡಿತು ಎಂದು ಅರಿವಾದಾಗ ಆಕೆ ಅಳಲು ಆರಂಭಿಸುತ್ತಾಳೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:31 am, Tue, 7 June 22