Trending: ನಾಯಿ ಮೇಲೆ ಚಿರತೆ ದಾಳಿ, ಭಯಾನಕ ವಿಡಿಯೋ ವೈರಲ್
ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಾಯಿ ಮೇಲೆ ಚಿರತೆ ನಡೆಸಿದ ಭಯಾನಕ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅರಣ್ಯ ಸಂರಕ್ಷಣಾಧಿಕಾರಿಯವರು ಗ್ರಾಮದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.
ಹುಲಿ, ಚಿರತೆಗಳು ಕಾಡು ಬಿಟ್ಟು ಗ್ರಾಮಗಳಿಗೆ ನುಗ್ಗಿ ದಾಳಿ ಮಾಡುತ್ತಿವೆ. ಅದೇ ರೀತಿ ಗ್ರಾಮವೊಂದಕ್ಕೆ ಎಂಟ್ರಿಕೊಟ್ಟ ಚಿರತೆ (Leopard) ನಾಯಿ ಮೇಲೆ ದಾಳಿ (Attack) ನಡೆಸಿದೆ. ಮಹಾರಾಷ್ಟ್ರದ ನಾಸಿಕ್‌ನ ಭಯಾನಕ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದ್ದು, ಅರಣ್ಯ ಸಂರಕ್ಷಣಾಧಿಕಾರಿಯವರು ಗ್ರಾಮದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ: Trending: ”ಯಾ.. ನಾನು ಹಾರ್ನ್ ಹಾಕಿಸಿದೆ” ವಿಡಿಯೋ ವೈರಲ್
ವಿಡಿಯೋದಲ್ಲಿರುವಂತೆ, ಕೆಂಪು ಕಾಲರ್ ಪಟ್ಟಿ ಧರಿಸಿರುವ ಕಪ್ಪು ನಾಯಿಯು ತಗ್ಗು ಗೋಡೆಯ ಮೇಲೆ ಕುಳಿತುಕೊಂಡಿರುತ್ತದೆ. ಕೆಲವು ಸೆಕೆಂಡುಗಳ ನಂತರ ನಾಯಿಗೆ ಚಿರತೆ ಕಾಣಿಸಿಕೊಳ್ಳುತ್ತದೆ. ಆರಂಭದಲ್ಲಿ ಚಿರತೆಯ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದೆ. ನಂತರ ಮತ್ತೆ ನಾಯಿ ಗೋಡೆ ಮೇಲೆ ಹಾರಿದಾಗ ನಿಯಂತ್ರಣ ತಪ್ಪಿ ಹೊರಗೆ ಬಿದ್ದಿದೆ. ಕೂಡಲೇ ಚಿರತೆ ನಾಯಿಯನ್ನು ಹಿಡಿದು ಕೊಂಡೊಯ್ದಿದೆ.
ನಾಯಿ ಮೇಲಿನ ಚಿರತೆಯ ದಾಳಿಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದನ್ನು ಸುದ್ದಿ ಸಂಸ್ಥೆ ಎಎನ್ಐ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, 85k ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದನ್ನೂ ಓದಿ: Trending: ಮಹಿಳೆಯ ತಲೆಕೂದಲಿಗೆ ಸಿಲುಕಿಕೊಂಡ ಮರಕುಟಿಗ! ಮುಂದೇನಾಯ್ತು ಗೊತ್ತಾ?
ವಿಡಿಯೋ ವೀಕ್ಷಿಸಿ:
#WATCH | Leopard entered a residential area in Mungsare village of Nashik, attacked a pet dog yesterday
(Source: CCTV) pic.twitter.com/OznDoeQvHR
— ANI (@ANI) June 6, 2022
ಈ ಬಗ್ಗೆ ANI ಜೊತೆ ಮಾತನಾಡಿದ ನಾಸಿಕ್ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಂಕಜ್ ಗಾರ್ಗ್, “ಚಿರತೆ ಚಟುವಟಿಕೆಯು ಮುಂಗ್ಸಾರೆ ಪ್ರದೇಶದಲ್ಲಿ ಹೆಚ್ಚಿರುವುದರಿಂದ ರಾತ್ರಿಯಲ್ಲಿ ಮನೆಯೊಳಗೆ ಇರುವಂತೆ ನಾವು ಗ್ರಾಮದ ಜನರಿಗೆ ಮನವಿ ಮಾಡುತ್ತೇವೆ. ಜನರು ಎಚ್ಚರದಿಂದಿರಬೇಕು” ಎಂದಿದ್ದಾರೆ.
Maharashtra | We appeal to the people of Mungsare village to remain indoors at night as leopard activity has increased in this area. People must remain alert: Pankaj Garg, Deputy Conservator of Forest, Nashik pic.twitter.com/2nPNepXCQi
— ANI (@ANI) June 6, 2022
ವಿಡಿಯೋ ವೀಕ್ಷಿಸಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದು, ಓರ್ವ ನೆಟ್ಟಿಗ, ಚಿರತೆ ದಾಳಿ ಮಾಡಬಹುದೆಂದು ತಿಳಿದಾಗ ಅವರು ತಮ್ಮ ಸಾಕು ನಾಯಿಗಳನ್ನು ಹೊರಗೆ ಏಕೆ ಇಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬ ನೆಟ್ಟಿಗ, ಅದು ಚಿರತೆಗೆ ಆಹಾರವಾಗಿದೆ ಎಂದಿದ್ದಾರೆ. ಇದನ್ನೂ ಓದಿ: Trending: ಗೆಳತಿಯ ಮೇಲಿನ ಕೋಪಕ್ಕೆ 40 ಕೋಟಿ ಮೌಲ್ಯದ ವಸ್ತುಗಳು ಢಮಾರ್!
ನಾಸಿಕ್‌ನಲ್ಲಿ ಚಿರತೆಗಳು ಜನವಸತಿ ಪ್ರದೇಶಗಳಿಗೆ ಪ್ರವೇಶಿಸುತ್ತಿರುವುದು ಸಾಮಾನ್ಯವಾಗಿದೆ. ಜನವರಿಯಲ್ಲಿ ನಾಸಿಕ್ ನಗರದ ವಸತಿ ಪ್ರದೇಶದಿಂದ ಎಂಟು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಚಿರತೆಯನ್ನು ರಕ್ಷಿಸಲಾಗಿತ್ತು. ಘಟನೆಯಲ್ಲಿ ಓರ್ವನ ಮೇಲೆ ಹಲ್ಲೆ ನಡೆದಿತ್ತು.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:13 am, Tue, 7 June 22