AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಅಪ್ಟಿಕಲ್ ಭ್ರಮೆ ಮೂಲಕ ನಿಮ್ಮ ಬುದ್ದಿವಂತಿಕೆಗೆ ಒಂದು ಸವಾಲು, ಏನು ಗೊತ್ತಾ?

ಸಾಮಾಜಿಕ ಜಾಲತಾಣದಲ್ಲಿ  ಹುಲಿಯ ಚಿತ್ರವೊಂದು ಭಾರಿ ವೈರಲ್ ಆಗುತ್ತಿದೆ. ಈ ಹುಲಿಯ ದೇಹದ ಮೇಲೆ ಮತ್ತೊಂದು ಹುಲಿ ಅಡಗಿದ್ದು, ಅದನ್ನು ಹುಡುಕಲು ನೆಟ್ಟಿಜನ್ಸ್ ತಲೆಕೆಡಿಸಿಕೊಳ್ಳುತ್ತಿದ್ದಾರೆ.

ಈ ಅಪ್ಟಿಕಲ್ ಭ್ರಮೆ ಮೂಲಕ ನಿಮ್ಮ ಬುದ್ದಿವಂತಿಕೆಗೆ ಒಂದು ಸವಾಲು, ಏನು ಗೊತ್ತಾ?
ಅಪ್ಟಿಕಲ್ ಹುಲಿ
TV9 Web
| Updated By: Rakesh Nayak Manchi|

Updated on: Jun 07, 2022 | 10:47 AM

Share

ಸಾಮಾಜಿಕ ಜಾಲತಾಣದಲ್ಲಿ  ಹುಲಿಯ ಚಿತ್ರವೊಂದು ಭಾರಿ ವೈರಲ್ ಆಗುತ್ತಿದೆ. ವಿಶೇಷವೆಂದರೆ ಈ ಚಿತ್ರದಲ್ಲಿ ಮತ್ತೊಂದು ಹುಲಿ ಅಡಗಿದೆ. ಇದನ್ನು ಹುಡುವುದು ಒಂದ ಸವಾಲಾಗಿದೆ. ಅದರಂತೆ ನೆಟ್ಟಿಜನ್ಸ್​ ಹುಲಿ ದೇಹಲ್ಲಿ ಅಡಗಿಕೊಂಡಿರುವ ಮತ್ತೊಂದು ಹುಲಿಯನ್ನು ಹುಡುಕಲು ತಲೆಕೆಡಿಸಿಕೊಳ್ಳುತ್ತಿದ್ದಾರೆ. ಈ ಕೆಳಗೆ ನೀಡಲಾದ ಹುಲಿಯ ಫೋಟೋವನ್ನು ಸರಿಯಾಗಿ ಗಮನಿಸಿ 2ನೇ ಹುಲಿಯನ್ನು ಪತ್ತೆಹಚ್ಚಿ. ಈ ಅಪ್ಟಿಕಲ್ ಭ್ರಮೆ (optical illusion) ಮೂಲಕ ನಿಮ್ಮ ಬುದ್ದಿವಂತಿಕೆಗೆ ಒಂದು ಸವಾಲು.

ಇದನ್ನೂ ಓದಿ: Trending: ಮಹಿಳೆಯ ತಲೆಕೂದಲಿಗೆ ಸಿಲುಕಿಕೊಂಡ ಮರಕುಟಿಗ! ಮುಂದೇನಾಯ್ತು ಗೊತ್ತಾ?

ಫೋಟೋ ವೀಕ್ಷಿಸಿ:

The hidden tiger optical illusion

ಈ ಚಿತ್ರದಲ್ಲಿ ಅಡಗಿರುವ ಮತ್ತೊಂದು ಹುಲಿಯನ್ನು ಪತ್ತೆಹಚ್ಚಿದರೆ ನೀವು ಬುದ್ಧಿವಂತರೆಂದು ಅರ್ಥ. ಕೇವಲ ಒಂದು ಶೇಕಡಾ ಜನರು ಮಾತ್ರ ಈ ಆಪ್ಟಿಕಲ್ ಭ್ರಮೆ ಚಿತ್ರದಲ್ಲಿ ಅಡಗಿರುವ ಹುಲಿಯನ್ನು ಗುರುತಿಸಬಹುದು. ನೀವು ಗುರುತಿಸುವಲ್ಲಿ ವಿಫಲವಾಗಿದ್ದರೆ ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ, ನಿಮಗೆ ಅಡಗಿರುವ ಹುಲಿ ಎಲ್ಲಿದೆ ಎಂದು ತಿಳಿಯಬಹುದು.

ಇದನ್ನೂ ಓದಿ: Trending: ನಾಯಿ ಮೇಲೆ ಚಿರತೆ ದಾಳಿ, ಭಯಾನಕ ವಿಡಿಯೋ ವೈರಲ್

ಎರಡನೇ ಹುಲಿ ದೃಶ್ಯಾವಳಿಯಲ್ಲಿ ಅಡಗಿದೆ ಎಂದು ನೀವು ಯೋಚಿಸುತ್ತಿದ್ದರೆ ಅದು ತಪ್ಪು. ಹುಲಿಯ ದೇಹದಲ್ಲಿ 2ನೇ ಹುಲಿಯ ಚಿತ್ರ ಇಲ್ಲವೇ ಇಲ್ಲ. ಹುಲಿಯ ದೇಹದ ಮೇಲೆ ಎಳೆದಿರುವ ಗೆರೆಗಳನ್ನು ಸರಿಯಾಗಿ ಗಮನಿಸಿ. ಅಷ್ಟಕ್ಕೂ ಅದು ಕಣ್ಣಿಗೆ ಪಟ್ಟಿಗಳಂತೆ ಕಂಡರೂ ಅದು ಪಟ್ಟಿಗಳಲ್ಲ. ಬದಲಾಗಿ ಕುತ್ತಿಗೆಯ ಭಾಗದಿಂದ ಹಿಂಬದಿ ಕಾಲಿನ ವರೆಗೆ ಸರಿಯಾಗಿ ನೋಡಿ, ‘The hidden tiger’ (ಅಡಗಿರುವ/ ಮರೆಯಾಗಿರುವ ಹುಲಿ) ಎಂದು ಬರೆಯಲಾಗಿದೆ. ನೀವು ಹುಡುಕಬೇಕಾಗಿದ್ದು ಇದುವೇ.

ಇದನ್ನೂ ಓದಿ: Trending: ”ಯಾ.. ನಾನು ಹಾರ್ನ್​ ಹಾಕಿಸಿದೆ” ವಿಡಿಯೋ ವೈರಲ್

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ