ಆಫ್ರಿಕಾ: ಕೀನ್ಯಾದ ಆಗ್ನೆಸ್ ನೆಸ್ಪೊಂಡಿ ಎಂಬ ಮಹಿಳೆ ಒಂದಲ್ಲಾ ಎರಡಲ್ಲ 11 ಅಂಧ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಪತಿಯ ಸಾವಿನ ನಂತರ ಸುಮಾರು 20 ವರ್ಷಗಳಿಂದ ತನ್ನ ಅಂಧ ಮಕ್ಕಳನ್ನು ಬೆಳೆಸಲು ಕಷ್ಟಪಡುತ್ತಿರುವುದು ವರದಿಯಾಗಿದೆ.
ಒಂದಲ್ಲಾ ಎರಡಲ್ಲಾ 11 ಮಕ್ಕಳು ಕೂಡ ದೃಷ್ಟಿಹೀನರಾಗಿರುವುದರಿಂದ ಆಕೆಯನ್ನು ಶಾಪಗ್ರಸ್ತಳಾಗಿದ್ದಾಳೆ ಎಂದು ಅಲ್ಲಿನ ಕಿಸುಮು ಗ್ರಾಮದಿಂದಲೇ ಆಕೆ ಹಾಗೂ ಆಕೆಯ ಮಕ್ಕಳನ್ನು ದೂರ ಇಡಲಾಗಿದೆ. 20 ವರ್ಷಗಳ ಹಿಂದೆ ತನ್ನ ಪತಿ ತೀರಿಕೊಂಡ ನಂತರ, ದೃಷ್ಟಿ ವಿಕಲಾಂಗತೆ ಹೊಂದಿರುವ ತನ್ನ 11 ಮಕ್ಕಳನ್ನು ಬೆಳೆಸಲು ನಾನು ತುಂಬಾ ಕಷ್ಟಪಡುತ್ತಿದ್ದೆನೆ ಎಂದು ಆಗ್ನೆಸ್ ನೆಸ್ಪೊಂಡಿ Time Africa Magazine ಸಂದರ್ಶನದಲ್ಲಿ ವಿವರಿಸಿದ್ದಾರೆ.
ಮೊದಲನೆಯ ಗಂಡು ಮಗುವಿಗೆ ಜನ್ಮ ನೀಡಿದಾಗ ಮಗು ಕುರುಡಾಗಿರುವುದು ತಿಳಿದಿರಲ್ಲಿಲ್ಲ, ಕೆಲವು ತಿಂಗಳ ನಂತರ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ವೈದ್ಯರು ಮಗು ಕುರುಡಾಗಿ ಹುಟ್ಟಿರುವುದನ್ನು ದೃಢಪಡಿಸಿದರು. ಹೀಗೆ ಪ್ರತೀ ಭಾರೀ ಮಗು ಜನಿಸುವಾಗಲೂ ವೈದ್ಯರು ಸಾಕಷ್ಟು ಭರವಸೆ ನೀಡಿದ್ದರೂ ಕೂಡ ತನ್ನ 11 ಮಕ್ಕಳು ಕುರುಡಾಗಿ ಹುಟ್ಟಿದ್ದಾರೆ. ಇದು ತನಗೆ ದುಃಖವನ್ನುಂಟುಮಾಡಿದ್ದು, ತನಗೆ ಈ ರೀತಿ ಏಕೆ ಸಂಭವಿಸಿತು ಎಂದು ತಿಳಿಯುತ್ತಿಲ್ಲ ಎಂದು ಆಗ್ನೆಸ್ ನೆಸ್ಪೊಂಡಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ನಡುರಸ್ತೆಯಲ್ಲಿ ಸರಸರನೇ ಸಾಲಾಗಿ ಮರಿಗಳಿಗೆ ಜನ್ಮ ನೀಡಿದ ಹಾವು, ಕುತೂಹಲಗೊಂಡ ಜನ!
ಈಕೆ ಅಂಧ ಮಕ್ಕಳಿಗೆ ಜನ್ಮ ನೀಡಲು ಶಾಪಗ್ರಸ್ತಳಾಗಿದ್ದಾಳೆ ಅಥವಾ ಆಕೆಯ ಮೇಲೆ ವಾಮಾಚಾರ ಮಾಡಿರಬಹುದು ಎಂದು ಅಲ್ಲಿನ ಗ್ರಾಮಸ್ಥರು ಬಲವಾಗಿ ನಂಬುತ್ತಾರೆ. ಪತಿಯ ನಿಧನದ ನಂತರ ಮಕ್ಕಳ ಶಾಲಾ ಶುಲ್ಕವನ್ನು ಪಾವತಿಸಲು ಸಾಧ್ಯವಾಗದ ಕಾರಣ 11 ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದು, ಸ್ಥಳೀಯ ಚರ್ಚ್ ಮಕ್ಕಳಿಗೆ ಹೆಚ್ಚಿನ ಸಹಾಯ ಮಾಡುತ್ತಿದೆ.
ನೆಸ್ಪೊಂಡಿ ಅವರ ಕುಟುಂಬದಲ್ಲಿ ಅವರ ಕುಟುಂಬದವರು ತಮ್ಮ ವಯಸ್ಸಿನ ಕಾರಣದಿಂದಾಗಿ ಕಣ್ಣಿನ ತೊಂದರೆಗಳನ್ನು ಹೊಂದಿದ್ದನ್ನು ಹೊರತುಪಡಿಸಿ ಯಾವುದೇ ಕುರುಡುತನದ ಕುರುಹುಗಳನ್ನು ಕಂಡುಹಿಡಿಯಲಾಗಲಿಲ್ಲ. ಅದರೂ ಕೂಡ 11 ಮಕ್ಕಳು ಕುರುಡಾಗಿರುವುದಕ್ಕೆ ಕಾರಣ ಎನೆಂದು ತಿಳಿದಿಲ್ಲ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: