ಜೀವನದಲ್ಲಿ ಮೊದಲ ಬಾರಿಗೆ ಶ್ವಾನವನ್ನು ನೋಡಿದಾಗ ಮಗುವಿನ ರಿಯಾಕ್ಷನ್ ಹೇಗಿತ್ತು?; ಅಪರೂಪದ ವಿಡಿಯೋ ನೋಡಿ

| Updated By: shivaprasad.hs

Updated on: Dec 12, 2021 | 3:48 PM

ಪುಟ್ಟ ಮಗು ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಶ್ವಾನವನ್ನು ನೋಡಿದಾಗ ಹೇಗೆ ಪ್ರತಿಕ್ರಿಯಿಸಬಹುದು? ಇಲ್ಲಿದೆ ಅಪರೂಪದ ವಿಡಿಯೋ.

ಜೀವನದಲ್ಲಿ ಮೊದಲ ಬಾರಿಗೆ ಶ್ವಾನವನ್ನು ನೋಡಿದಾಗ ಮಗುವಿನ ರಿಯಾಕ್ಷನ್ ಹೇಗಿತ್ತು?; ಅಪರೂಪದ ವಿಡಿಯೋ ನೋಡಿ
ವಿಡಿಯೋದಿಂದ ಸೆರೆಹಿಡಿಯಲಾದ ಚಿತ್ರ
Follow us on

ಸಣ್ಣ ವಯಸ್ಸಿನಲ್ಲಿ ನಮಗೆ ಎಲ್ಲಾ ವಿಚಾರಗಳೂ ಹೊಸತೇ ಆಗಿರುತ್ತವೆ. ನಿಧಾನವಾಗಿ ಅವುಗಳೊಂದಿಗೆ ಒಡನಾಡುತ್ತಾ ಅವರು ಪರಿಚಿತವಾಗುತ್ತದೆ. ಆದರೆ ಬಹುತೇಕ ಯಾರಿಗೂ ತಾವು ಪ್ರಸ್ತುತ ಒಡನಾಡುತ್ತಿರುವ ಜೀವಿಗಳು, ವಸ್ತುಗಳನ್ನು ಮೊಟ್ಟಮೊದಲ ಬಾರಿಗೆ ನೋಡಿದಾಗ ಪ್ರತಿಕ್ರಿಯೆ ಹೇಗಿತ್ತು ಎಂಬ ನೆನಪಿರುವುದಿಲ್ಲ. ಕಾರಣ ಅವೆಲ್ಲವೂ ತೀರಾ ಬಾಲ್ಯಾವಸ್ಥೆಯಲ್ಲಿ ಘಟಿಸಿರುತ್ತದೆ. ಇಂಥದ್ದೇ ಒಂದು ವಿಡಿಯೋ ಸದ್ಯ ಟ್ವಿಟರ್​ನಲ್ಲಿ ಟ್ರೆಂಡ್ ಆಗಿದೆ. ಪುಟ್ಟ ಮಗುವೊಂದು ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಶ್ವಾನವೊಂದನ್ನು ನೋಡಿದಾಗ ಅದರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ವಿಡಿಯೋ ಮಾಡಲಾಗಿದೆ. ಸದ್ಯ ಈ ವಿಡಿಯೋ ನೆಟ್ಟಿಗರ ಮನಗೆದ್ದಿದ್ದು, ತಮ್ಮ ತಮ್ಮ ಬಾಲ್ಯದಲ್ಲಿ ಇಂತಹ ಘಟನೆಗಳು ಹೇಗೆ ಆಗಿರಬಹುದು ಎಂದು ಸ್ಮರಿಸುತ್ತಿದ್ದಾರೆ.

ವೈರಲ್ ಆಗಿರುವ ವಿಡಿಯೋ ಕೇವಲ ಮಗುವಿನ ಪ್ರತಿಕ್ರಿಯೆಯಿಂದ ಗಮನ ಸೆಳೆಯುತ್ತಿಲ್ಲ. ಶ್ವಾನ ಕೂಡ ಮಗುವನ್ನು ಮಾತನಾಡಿಸಲು, ಸಂವಾದ ನಡೆಸಲು ಪ್ರಯತ್ನಿಸಿದೆ. ಮಗು ಹಾಗೂ ಶ್ವಾನದ ಮುದ್ದಾದ ಮುಗ್ಧ ಸಂಭಾಷಣೆ ಎಲ್ಲರ ಮನಗೆದ್ದಿದೆ.

ಈ ವಿಡಿಯೋ ಕೆಲ ಸಮಯದ ಹಿಂದೆಯೇ ವೈರಲ್ ಆಗಿತ್ತು. ಆದರೆ ಇದರ ಮೂಲ ಇನ್ನೂ ಪತ್ತೆಯಾಗಿಲ್ಲ. ಪ್ರಸ್ತುತ ಟ್ವಿಟರ್​ನಲ್ಲಿ, ‘14 ತಿಂಗಳ ಮಗು ಶ್ವಾನವನ್ನು ಮೊಟ್ಟ ಮೊದಲ ಬಾರಿಗೆ ಮಾತನಾಡಿಸುವ ಸಂದರ್ಭದ ವಿಡಿಯೋ’ ಎಂದು ಬರೆದು ಹಂಚಿಕೊಳ್ಳಲಾಗಿದೆ.

ವೈರಲ್ ಆಗಿರುವ ವಿಡಿಯೋ ಇಲ್ಲಿದೆ:

ವಿಡಿಯೋವನ್ನು ಡಿಸೆಂಬರ್ 9ರಂದು ಹಂಚಿಕೊಳ್ಳಲಾಗಿದ್ದು, ಇದುವರೆಗೆ 70,000ಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಮಗು ಹಾಗೂ ಶ್ವಾನದ ಪ್ರತಿಕ್ರಿಯೆ ನೋಡಿ ನೆಟ್ಟಿಗರು ಮೆಚ್ಚುಗೆಯಿಂದ ಕಾಮೆಂಟ್ ಮಾಡುತ್ತಿದ್ದಾರೆ. ಹಲವರು ಇದು ಅತ್ಯುತ್ತಮವಾದ ವಿಡಿಯೋ ಎಂದು ಪ್ರತಿಕ್ರಿಯೆ ನೀಡಿದ್ದು, ಮತ್ತೆ ಹಲವರು ಅದ್ಭುತವಾಗಿದೆ ಎಂದು ಬರೆದಿದ್ದಾರೆ. ವಿಡಿಯೋ ನೋಡಿದ ನಿಮಗೇನನ್ನಿಸಿತು?

ಇದನ್ನೂ ಓದಿ:

ದೂರದೂರಿನಿಂದ ಮಗಳು ಆಗಮಿಸಿ ಸರ್ಪ್ರೈಸ್ ನೀಡಿದರೆ ತಂದೆಗೆ ಎಷ್ಟು ಖುಷಿಯಾಗುತ್ತದೆ?; ಭಾವುಕ ವಿಡಿಯೋ ನೋಡಿ

ಟ್ವಿಟರ್​ನಲ್ಲಿ ಈ ವರ್ಷ ಅತಿ ಹೆಚ್ಚು ಟ್ರೆಂಡ್​ ಆದ ದಕ್ಷಿಣ ಭಾರತದ ಕಲಾವಿದರು ಇವರು