ಟ್ವಿಟರ್ನಲ್ಲಿ ಈ ವರ್ಷ ಅತಿ ಹೆಚ್ಚು ಟ್ರೆಂಡ್ ಆದ ದಕ್ಷಿಣ ಭಾರತದ ಕಲಾವಿದರು ಇವರು
2021 Twitter Trending: 2021ರ ಸಾಲಿನಲ್ಲಿ ಟ್ವಿಟರ್ನಲ್ಲಿ ಅತಿ ಹೆಚ್ಚು ಟ್ರೆಂಡ್ ಆದ ದಕ್ಷಿಣ ಭಾರತದ ಟಾಪ್ 10 ನಟ-ನಟಿಯರ ಪಟ್ಟಿ ಬಿಡುಗಡೆ ಆಗಿದೆ. ಇದರಲ್ಲಿ ಕನ್ನಡದ ಯಾವ ಕಲಾವಿದರೂ ಇಲ್ಲ!
ನೋಡನೋಡುತ್ತಿದ್ದಂತೆಯೇ ವರ್ಷಾಂತ್ಯ ಸಮೀಪಿಸಿದೆ. 2021ರ ವರ್ಷ ಇನ್ನೇನು ಕಳೆದುಹೋಗಲಿದೆ. ಈ ವರ್ಷ ಅನೇಕ ಪ್ರಮುಖ ಘಟನೆಗಳು ನಡೆದವು. ಸಿನಿಮಾರಂಗ ಕೂಡ ಅದಕ್ಕೆ ಹೊರತಾಗಿಲ್ಲ. ಆ ಎಲ್ಲ ಘಟನೆಗಳ ಬಗೆಗಿನ ಮಾತುಕತೆಗೆ ಸೋಶಿಯಲ್ ಮೀಡಿಯಾದಲ್ಲಿ ಜಾಗ ಸಿಕ್ಕಿತ್ತು. ಅನೇಕ ಸಿನಿಮಾಗಳ ಬಗ್ಗೆ, ಸೆಲೆಬ್ರಿಟಿಗಳ ಬಗ್ಗೆ, ವಿವಾದಗಳ ಬಗ್ಗೆ ಟ್ವಿಟರ್ನಲ್ಲಿ ಚರ್ಚೆ ಆಯಿತು. ನೆಗೆಟಿವ್ ಅಥವಾ ಪಾಸಿಟಿವ್ ಯಾವುದೇ ವಿಚಾರಕ್ಕಿರಲಿ, ಈ ವರ್ಷ ಅತಿ ಹೆಚ್ಚು ಟ್ರೆಂಡಿಂಗ್ನಲ್ಲಿದ್ದ (Twitter Trending) ದಕ್ಷಿಣ ಭಾರತದ ಸೆಲೆಬ್ರಿಟಿಗಳ ಪಟ್ಟಿಯನ್ನು ಈಗ ಟ್ವಿಟರ್ ಬಿಡುಗಡೆ ಮಾಡಿದೆ. ನಟಿಯರ ಪೈಕಿ ಕೀರ್ತಿ ಸುರೇಶ್ (Keerthy Suresh) ಅವರು ನಂಬರ್ ಸ್ಥಾನದಲ್ಲಿದ್ದಾರೆ. ನಟರಲ್ಲಿ ದಳಪತಿ ವಿಜಯ್ (Thalapathy Vijay) ಅವರು ಅಗ್ರ ಸ್ಥಾನ ಅಲಂಕರಿಸಿದ್ದಾರೆ.
ನಟಿಯರು ಪೈಕಿ ಈ ವರ್ಷ ಅತಿಹೆಚ್ಚು ಟ್ರೆಂಡ್ ಆದವರು ಪಟ್ಟಿ ಈ ರೀತಿ ಇದೆ. ಟಾಪ್ 10ರ ಪಟ್ಟಿಯಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಜಾಗವೇ ಇಲ್ಲ!
- ಕೀರ್ತಿ ಸುರೇಶ್
- ಪೂಜಾ ಹೆಗ್ಡೆ
- ಸಮಂತಾ
- ಕಾಜಲ್ ಅಗರ್ವಾಲ್
- ಮಾಳವಿಕಾ ಮೋಹನನ್
- ರಾಕುಲ್ ಪ್ರೀತ್ ಸಿಂಗ್
- ಸಾಯಿ ಪಲ್ಲವಿ
- ತಮನ್ನಾ ಭಾಟಿಯಾ
- ಅನುಷ್ಕಾ ಶೆಟ್ಟಿ
- ಅನುಪಮಾ ಪರಮೇಶ್ವರನ್
2021ರ ಸಾಲಿನಲ್ಲಿ ಟ್ವಿಟರ್ನಲ್ಲಿ ಅತಿ ಹೆಚ್ಚು ಟ್ರೆಂಡ್ ಆದ ದಕ್ಷಿಣ ಭಾರತದ ಟಾಪ್ 10 ನಟರು ಇವರು. ಇದರಲ್ಲಿ ಕನ್ನಡದ ಯಾವ ಹೀರೋಗಳೂ ಇಲ್ಲ!
- ದಳಪತಿ ವಿಜಯ್
- ಪವನ್ ಕಲ್ಯಾಣ್
- ಮಹೇಶ್ ಬಾಬು
- ಸೂರ್ಯ
- ಜ್ಯೂ. ಎನ್ಟಿಆರ್
- ಅಲ್ಲು ಅರ್ಜುನ್
- ರಜನಿಕಾಂತ್
- ರಾಮ್ ಚರಣ್
- ಧನುಶ್
- ಅಜಿತ್ ಕುಮಾರ್
2021’s most Tweeted about actors in South Indian entertainment ❤️ pic.twitter.com/EwpGkshZok
— Twitter India (@TwitterIndia) December 12, 2021
ಈ ವರ್ಷ ಟ್ವಿಟರ್ನಲ್ಲಿ ಅತಿ ಹೆಚ್ಚು ಸೌಂಡು ಮಾಡಿದ ಹಲವು ವಿಷಯಗಳ ಬಗ್ಗೆ ಟ್ವಿಟರ್ ಸಂಸ್ಥೆಯು ಪಟ್ಟಿ ಬಿಡುಗಡೆ ಮಾಡುತ್ತಿದೆ. ಅದರಲ್ಲಿ ಅತಿ ಹೆಚ್ಚು ಟ್ರೆಂಡ್ ಆದ ದಕ್ಷಿಣ ಭಾರತದ ಸಿನಿಮಾಗಳ ಪಟ್ಟಿ ಈ ರೀತಿ ಇದೆ. ನಂ.1 ಸ್ಥಾನವನ್ನು ದಳಪತಿ ವಿಜಯ್ ನಟನೆಯ ‘ಮಾಸ್ಟರ್’ ಚಿತ್ರ ಅಲಂಕರಿಸಿದೆ. ಎರಡನೇ ಸ್ಥಾನದಲ್ಲಿ ಅಜಿತ್ ಕುಮಾರ್ ಅವರ ‘ವಲಿಮೈ’ ಸಿನಿಮಾ ಇದೆ. ಮೂರನೇ ಸ್ಥಾನದಲ್ಲಿ ವಿಜಯ್ ಅವರ ‘ಬೀಸ್ಟ್’ ಸಿನಿಮಾ ಇದೆ.
ಇನ್ನುಳಿದಂತೆ 4ರಿಂದ 9ರವರೆಗೆ ಕ್ರಮವಾಗಿ ಜೈ ಭೀಮ್, ವಕೀಲ್ ಸಾಬ್, ಆರ್ಆರ್ಆರ್, ಸರ್ಕಾರು ವಾರಿ ಪಾಟ, ಪುಷ್ಪ, ಡಾಕ್ಟರ್ ಸಿನಿಮಾಗಳಿವೆ. 10ನೇ ಸ್ಥಾನಕ್ಕೆ ಕನ್ನಡದ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ತೃಪ್ತಿಪಟ್ಟುಕೊಂಡಿದೆ. ಅಂದರೆ, ಈ ಟಾಪ್ 10ರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕನ್ನಡ ಸಿನಿಮಾ ‘ಕೆಜಿಎಫ್ 2’.
ಇದನ್ನೂ ಓದಿ:
ಟ್ರೆಂಡಿಂಗ್ ಪೈಪೋಟಿಯಲ್ಲಿ ಪರಭಾಷೆ ಚಿತ್ರಗಳಿಗೆ ಫೈಟ್ ಕೊಟ್ಟ ಏಕೈಕ ಕನ್ನಡ ಸಿನಿಮಾ ಯಾವುದು?
ಯಶ್, ಪ್ರಭಾಸ್, ಸಮಂತಾರನ್ನೂ ಹಿಂದಿಕ್ಕಿ ರಶ್ಮಿಕಾ ನಂ.1, ದೇವರಕೊಂಡ ನಂ.2: ಇಲ್ಲಿದೆ ಫೋರ್ಬ್ಸ್ ಪಟ್ಟಿ
Published On - 3:40 pm, Sun, 12 December 21