ರಾಜಮೌಳಿಗೆ ವಿಶ್ವ ಮಟ್ಟದಲ್ಲಿ ವಿಶೇಷ ಗೌರವ;  ಭಾರತದ ಯಾವ ನಿರ್ದೇಶಕನೂ ಮಾಡಿರದ ಸಾಧನೆ ಮಾಡಿದ ಡೈರೆಕ್ಟರ್​

ರಾಜಮೌಳಿಗೆ ವಿಶ್ವ ಮಟ್ಟದಲ್ಲಿ ವಿಶೇಷ ಗೌರವ;  ಭಾರತದ ಯಾವ ನಿರ್ದೇಶಕನೂ ಮಾಡಿರದ ಸಾಧನೆ ಮಾಡಿದ ಡೈರೆಕ್ಟರ್​
ರಾಜಮೌಳಿ

ನಿರ್ದೇಶಕ ಎಸ್​.ಎಸ್​. ರಾಜಮೌಳಿ ಕೆಲಸದ ಬಗ್ಗೆ ಎಲ್ಲರಿಗೂ ದೊಡ್ಡ ಭರವಸೆ ಬಂದಿದೆ. ಅವರ ಈ ಹಿಂದಿನ ಸಿನಿಮಾಗಳನ್ನು ನೋಡಿ ಎಲ್ಲರೂ ಮೆಚ್ಚಿಕೊಂಡಿರುವುದಕ್ಕೆ ‘ಆರ್​ಆರ್​ಆರ್​’ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ.

TV9kannada Web Team

| Edited By: Rajesh Duggumane

Dec 12, 2021 | 1:48 PM

ಎಸ್​​.ಎಸ್​. ರಾಜಮೌಳಿ ಸಿನಿಮಾ ಬಗ್ಗೆ ಕೇವಲ ದಕ್ಷಿಣ ಭಾರತ ಮಾತ್ರ ಮಾತನಾಡುತ್ತಿಲ್ಲ. ಅವರು ಮಾಡುವ ಕೆಲಸದ ಬಗ್ಗೆ ಬಾಲಿವುಡ್​, ಹಾಲಿವುಡ್​ ಮಂದಿಗೂ ತಿಳಿದಿದೆ. ಸಾಕಷ್ಟು ಮಂದಿ ಅವರ ನಿರ್ದೇಶನವನ್ನು ಮೆಚ್ಚಿಕೊಂಡಿದ್ದಾರೆ. ‘ಈಗ’, ‘ಬಾಹುಬಲಿ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಹೊಸ ಫ್ಯಾಂಟಸಿ ಲೋಕವನ್ನೇ ಸೃಷ್ಟಿ ಮಾಡಿ, ಪ್ರೇಕ್ಷಕರನ್ನು ಅದರೊಳಗೆ ಕರೆದುಕೊಂಡು ಹೋಗುವ ಕಲೆ ರಾಜಮೌಳಿಗೆ ಕರಗತವಾಗಿದೆ. ಈಗ ರಾಜಮೌಳಿ, ‘ಆರ್​ಆರ್​ಆರ್​’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಇದೆ. ಹೀಗಿರುವಾಗಲೇ ರಾಜಮೌಳಿಗೆ ವಿಶೇಷ ಗೌರವವೊಂದು ಸಂದಿದೆ. ಈ ವಿಚಾರ ಕೇಳಿ ಭಾರತೀಯರು ಹೆಮ್ಮೆಪಟ್ಟಿದ್ದಾರೆ.

ವಿದೇಶದ ಸಂಸ್ಥೆಯೊಂದು ವಿಶ್ವ ಮಟ್ಟದಲ್ಲಿ ಅಧ್ಯಯನ ನಡೆಸಿ ನಿರ್ದೇಶಕರಿಗೆ ರ‍್ಯಾಂಕ್​ ನೀಡಿದೆ. ವಿಶ್ವದ ಸೊಗಸಾದ 50 ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ರಾಜಮೌಳಿ ಅವರಿಗೆ 25ನೇ ರ‍್ಯಾಂಕ್​ ಸಿಕ್ಕಿದೆ. ಭಾರತದ ಮತ್ಯಾವ ನಿರ್ದೇಶಕನಿಗೂ ಈ ಪಟ್ಟಿಯಲ್ಲಿ ಸ್ಥಾನ ಸಿಕ್ಕಿಲ್ಲ ಅನ್ನೋದು ಗಮನಾರ್ಹ ವಿಚಾರ. ಸದ್ಯ, ಈ ವಿಚಾರ ಇಟ್ಟುಕೊಂಡು ರಾಜಮೌಳಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಸಿನಿಮಾ ಮಾಡುವ ವಿಧಾನ, ಅವರು ನಿರ್ದೇಶನ ಮಾಡಿದ ಸಿನಿಮಾದ ಪ್ರಭಾವ ಸೇರಿ ಹಲವು ವಿಚಾರಗಳನ್ನು ಇಟ್ಟುಕೊಂಡು ರ‍್ಯಾಂಕಿಂಗ್​ ನೀಡಲಾಗಿದೆ.

ನಿರ್ದೇಶಕ ಎಸ್​.ಎಸ್​. ರಾಜಮೌಳಿ ಕೆಲಸದ ಬಗ್ಗೆ ಎಲ್ಲರಿಗೂ ದೊಡ್ಡ ಭರವಸೆ ಬಂದಿದೆ. ಅವರ ಈ ಹಿಂದಿನ ಸಿನಿಮಾಗಳನ್ನು ನೋಡಿ ಎಲ್ಲರೂ ಮೆಚ್ಚಿಕೊಂಡಿರುವುದಕ್ಕೆ ‘ಆರ್​ಆರ್​ಆರ್​’ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಸ್ಟಾರ್​ ನಟರ ದಂಡೇ ‘ಆರ್​ಆರ್​ಆರ್​’ನಲ್ಲಿದೆ. ಈ ಚಿತ್ರ ರಿಲೀಸ್​ ಆಗುವುದಕ್ಕೂ ಮೊದಲೇ ನೂರಾರು ಕೋಟಿ ಬಿಸ್ನೆಸ್​ ಮಾಡಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಸಖತ್​ ಥ್ರಿಲ್​ ಆಗಿದ್ದಾರೆ.

‘ಆರ್​ಆರ್​ಆರ್​’ ಸಿನಿಮಾ ಜನವರಿ 7ರಂದು ತೆರೆಗೆ ಬರುತ್ತಿದೆ. ಇದು ರಾಜಮೌಳಿ ಕಡೆಯಿಂದ ಅಭಿಮಾನಿಗಳಿಗೆ ಸಂಕ್ರಾಂತಿಗೆ ಸಿಗುತ್ತಿರುವ ಅತಿ ದೊಡ್ಡ ಗಿಫ್ಟ್​. ಹಬ್ಬದ ಸಂದರ್ಭವಾದ್ದರಿಂದ ಚಿತ್ರ ಒಳ್ಳೆಯ ಗಳಿಕೆ ಮಾಡುವ ನಿರೀಕ್ಷೆ ಇದೆ. ಇನ್ನು, ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಪೋಸ್ಟರ್​, ಟೀಸರ್​ ಹಾಗೂ ಹಾಡುಗಳು ಚಿತ್ರದ ನಿರೀಕ್ಷೆಯನ್ನು ಈಗಾಗಲೇ ಹೆಚ್ಚಿಸಿದೆ. ಡಿಸೆಂಬರ್ 9ರಂದು ರಿಲೀಸ್​ ಆಗುವ ಟ್ರೇಲರ್​ ಮೇಲೆಯೂ ಹೆಚ್ಚು ಕುತೂಹಲ ಇಟ್ಟುಕೊಳ್ಳಲಾಗಿದೆ. ಈ ಎಲ್ಲಾ ಕಾರಣಗಳಿಂದ ಸಿನಿಮಾ ಒಳ್ಳೆಯ ಬಿಸ್ನೆಸ್​ ಮಾಡಿದೆ. ರಿಲೀಸ್​ಗೂ ಮೊದಲೇ ಈ ಚಿತ್ರ ಬರೋಬ್ಬರಿ 890 ಕೋಟಿ ರೂಪಾಯಿ ಬಾಚಿಕೊಂಡಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ‘ಆರ್​ಆರ್​ಆರ್​’ ಸಿನಿಮಾದ ಅಸಲಿ ಹೀರೋ ಯಾರು? ಸತ್ಯ ಬಿಚ್ಚಿಟ್ಟ ರಾಜಮೌಳಿ

ಹಾಲಿವುಡ್​ ಆಫರ್​ ಬಗ್ಗೆ ಅಚ್ಚರಿಯ ಪ್ರತಿಕ್ರಿಯೆ ನೀಡಿದ ‘ಆರ್​ಆರ್​ಆರ್​’ ನಿರ್ದೇಶಕ ರಾಜಮೌಳಿ

Follow us on

Related Stories

Most Read Stories

Click on your DTH Provider to Add TV9 Kannada