AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರೆಂಡಿಂಗ್​ ಪೈಪೋಟಿಯಲ್ಲಿ ಪರಭಾಷೆ ಚಿತ್ರಗಳಿಗೆ ಫೈಟ್​ ಕೊಟ್ಟ ಏಕೈಕ ಕನ್ನಡ ಸಿನಿಮಾ ಯಾವುದು?

2021 Twitter Trending: 2021ರಲ್ಲಿ ಟ್ವಿಟರ್​ನಲ್ಲಿ ಅತಿ ಹೆಚ್ಚು ಸೌಂಡು ಮಾಡಿದ ಹಲವು ವಿಷಯಗಳ ಬಗ್ಗೆ ಟ್ವಿಟರ್​ ಸಂಸ್ಥೆಯು ಪಟ್ಟಿ ಬಿಡುಗಡೆ ಮಾಡುತ್ತಿದೆ. ಅತಿ ಹೆಚ್ಚು ಟ್ರೆಂಡ್​ ಆದ ದಕ್ಷಿಣ ಭಾರತದ ಸಿನಿಮಾಗಳ ಪಟ್ಟಿ ಕೂಡ ಬಿಡುಗಡೆ ಆಗಿದೆ.

ಟ್ರೆಂಡಿಂಗ್​ ಪೈಪೋಟಿಯಲ್ಲಿ ಪರಭಾಷೆ ಚಿತ್ರಗಳಿಗೆ ಫೈಟ್​ ಕೊಟ್ಟ ಏಕೈಕ ಕನ್ನಡ ಸಿನಿಮಾ ಯಾವುದು?
ಟ್ವಿಟರ್​ ಟ್ರೆಂಡಿಂಗ್​ ಸಿನಿಮಾಗಳು
TV9 Web
| Edited By: |

Updated on: Dec 12, 2021 | 1:48 PM

Share

ಸಿನಿಮಾಗಳ ಪ್ರಚಾರಕ್ಕೆ ಸೋಶಿಯಲ್​ ಮೀಡಿಯಾ ಹೆಚ್ಚು ಬಳಕೆ ಆಗುತ್ತದೆ. ಬಹುನಿರೀಕ್ಷಿತ ಚಿತ್ರಗಳ ಬಗ್ಗೆ ಅಪ್​ಡೇಟ್​ ತಿಳಿಯಲು ಸಿನಿಪ್ರಿಯರು ಕೂಡ ಸೋಶಿಯಲ್​ ಮೀಡಿಯಾವನ್ನು ಹೆಚ್ಚು ಅವಲಂಬಿಸಿದ್ದಾರೆ. ತಮ್ಮ ಅಭಿಮಾನಿಗಳ ಜತೆ ಸಂಪರ್ಕದಲ್ಲಿ ಇರಲು ಸೆಲೆಬ್ರಿಟಿಗಳಿಗೂ ಈ ವೇದಿಕೆ ಸಹಕಾರಿ ಆಗಿದೆ. ಅದರಲ್ಲೂ ಟ್ವಿಟರ್​ ಮೂಲಕ ಅನೇಕ ಸಿನಿಮಾಗಳು ಸುದ್ದಿ ಮಾಡುತ್ತವೆ. ತಮ್ಮಿಷ್ಟದ ಚಿತ್ರಗಳಿಗೆ ಸಂಬಂಧಪಟ್ಟ ವಿಷಯಗಳು ಟ್ವಿಟರ್​ನಲ್ಲಿ ಟ್ರೆಂಡ್ (Twitter Trending)​ ಆಗಿಬಿಟ್ಟರೆ ಅಭಿಮಾನಿಗಳಿಗೆ ಏನೋ ಒಂಥರ ಖುಷಿ. 2021ರ ವರ್ಷದಲ್ಲಿ ದಕ್ಷಿಣ ಭಾರತದ ಸಿನಿಮಾಗಳ ಪೈಕಿ ಟ್ವಿಟರ್​ನಲ್ಲಿ ಹೆಚ್ಚು ಟ್ರೆಂಡ್​ ಆದ ಚಿತ್ರ (2021s most Tweeted about South Indian movies) ಯಾವುದು? ಟಾಪ್​ 10ರ ಪಟ್ಟಿಯಲ್ಲಿ ಯಾವೆಲ್ಲ ಸಿನಿಮಾಗಳಿವೆ? ಆ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..

ಈ ವರ್ಷ ಟ್ವಿಟರ್​ನಲ್ಲಿ ಅತಿ ಹೆಚ್ಚು ಸೌಂಡು ಮಾಡಿದ ಹಲವು ವಿಷಯಗಳ ಬಗ್ಗೆ ಟ್ವಿಟರ್​ ಸಂಸ್ಥೆಯು ಪಟ್ಟಿ ಬಿಡುಗಡೆ ಮಾಡುತ್ತಿದೆ. ಅದರಲ್ಲಿ ಅತಿ ಹೆಚ್ಚು ಟ್ರೆಂಡ್​ ಆದ ದಕ್ಷಿಣ ಭಾರತದ ಸಿನಿಮಾಗಳ ಪಟ್ಟಿ ಈ ರೀತಿ ಇದೆ. ನಂ.1 ಸ್ಥಾನವನ್ನು ದಳಪತಿ ವಿಜಯ್​ ನಟನೆಯ ‘ಮಾಸ್ಟರ್​’ ಚಿತ್ರ ಅಲಂಕರಿಸಿದೆ. ಎರಡನೇ ಸ್ಥಾನದಲ್ಲಿ ಅಜಿತ್​ ಕುಮಾರ್​ ಅವರ ‘ವಲಿಮೈ’ ಸಿನಿಮಾ ಇದೆ. ಮೂರನೇ ಸ್ಥಾನದಲ್ಲಿ ವಿಜಯ್​ ಅವರ ‘ಬೀಸ್ಟ್​’ ಸಿನಿಮಾ ಇದೆ.

ಇನ್ನುಳಿದಂತೆ 4ರಿಂದ 9ರವರೆಗೆ ಕ್ರಮವಾಗಿ ಜೈ ಭೀಮ್​, ವಕೀಲ್​ ಸಾಬ್​, ಆರ್​ಆರ್​ಆರ್​, ಸರ್ಕಾರು ವಾರಿ ಪಾಟ, ಪುಷ್ಪ, ಡಾಕ್ಟರ್​ ಸಿನಿಮಾಗಳಿವೆ. 10ನೇ ಸ್ಥಾನಕ್ಕೆ ಕನ್ನಡದ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ತೃಪ್ತಿಪಟ್ಟುಕೊಂಡಿದೆ. ಅಂದರೆ, ಈ ಟಾಪ್​ 10ರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕನ್ನಡ ಸಿನಿಮಾ ‘ಕೆಜಿಎಫ್​ 2’. ಹಲವು ಕಾರಣಗಳಿಗಾಗಿ ಈ ಸಿನಿಮಾ ಮೇಲೆ ಜನರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಈ ವರ್ಷ ಅನೇಕ ಬಾರಿ ‘ಕೆಜಿಎಫ್​: ಚಾಪ್ಟರ್​ 2’ ಚಿತ್ರ ಟ್ವಿಟರ್​ನಲ್ಲಿ ಟ್ರೆಂಡ್​ ಆಗಿತ್ತು. ಹಾಗಿದ್ದರೂ ಕೂಡ ತಮಿಳು ಮತ್ತು ತೆಲುಗು ಭಾಷೆಯ ಸ್ಟಾರ್​ ನಟರ ಸಿನಿಮಾವನ್ನು ಮೀರಿಸಲು ಈ ಚಿತ್ರಕ್ಕೆ ಸಾಧ್ಯವಾಗಿಲ್ಲ. ‘ಕೆಜಿಎಫ್​ 2’ ಚಿತ್ರಕ್ಕೆ ಪ್ರಶಾಂತ್​ ನೀಲ್​ ನಿರ್ದೇಶನ ಮಾಡುತ್ತಿದ್ದು, ಯಶ್​ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಅಭಿನಯಿಸಿದ್ದಾರೆ. ಬಾಲಿವುಡ್​ ಕಲಾವಿದರಾದ ಸಂಜಯ್​ ದತ್​ ಮತ್ತು ರವೀನಾ ಟಂಡನ್​ ಕೂಡ ಚಿತ್ರತಂಡ ಸೇರಿಕೊಂಡಿರುವುದರಿಂದ ನಿರೀಕ್ಷೆ ಹೆಚ್ಚಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ‘ಕೆಜಿಎಫ್​: ಚಾಪ್ಟರ್​ 2’ ಬಿಡುಗಡೆ ಆಗಿರಬೇಕಿತ್ತು. ಆದರೆ ಕೊವಿಡ್​ ಹಾವಳಿಯಿಂದಾಗಿ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿದೆ. 2022ರ ಏಪ್ರಿಲ್​ 14ರಂದು ವಿಶ್ವಾದ್ಯಂತ ‘ಕೆಜಿಎಫ್​: ಚಾಪ್ಟರ್​ 2’ ತೆರೆಕಾಣಲಿದೆ.

ಇದನ್ನೂ ಓದಿ:

KGF Chapter 2: ಕೆಜಿಎಫ್​ ಚಾಪ್ಟರ್ 2 ಡಬ್ಬಿಂಗ್​ ಮುಗಿಸಿದ ಸಂಜಯ್​ ದತ್​; ಕುತೂಹಲ ಹೆಚ್ಚಿಸಿದ ಅಧೀರನ ಪಾತ್ರ

ಯಶ್​ ಜತೆಗಿನ ಸೆಲ್ಫಿಗಾಗಿ ರಾಧಿಕಾ ಇಷ್ಟು ಕಷ್ಟಪಡಬೇಕಾ? ಇಲ್ಲಿವೆ ಫನ್ನಿ ಫೋಟೋಗಳು

ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ