Video: ಮೊದಲ ಬಾರಿಗೆ ಕಿವಿ ಫ್ರೂಟ್ ತಿಂದು ಮುದ್ದಾಗಿ ರಿಯಾಕ್ಷನ್ ಕೊಟ್ಟ ಕಂದಮ್ಮ

ಪುಟಾಣಿ ಮಕ್ಕಳ ಮುದ್ದಾದ ರಿಯಾಕ್ಷನ್‌ಗಳನ್ನು ನೋಡುವುದೇ ಚಂದ. ಹೆತ್ತವರು ಏನೇ ಕೊಟ್ಟರೂ ಸರಿಯೇ, ಅದರ ರುಚಿ ಸವಿಯುತ್ತಾ ಮುದ್ದಾಗಿ ರಿಯಾಕ್ಷನ್ ನೀಡುವ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಪುಟ್ಟ ಕಂದಮ್ಮವು ಕಿವಿ ಹಣ್ಣಿನ ರುಚಿ ಸವಿದು ಮುದ್ದಾಗಿ ರಿಯಾಕ್ಷನ್ ನೀಡಿದೆ. ಈ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ.

Video: ಮೊದಲ ಬಾರಿಗೆ ಕಿವಿ ಫ್ರೂಟ್ ತಿಂದು ಮುದ್ದಾಗಿ ರಿಯಾಕ್ಷನ್ ಕೊಟ್ಟ ಕಂದಮ್ಮ
ವೈರಲ್‌ ವಿಡಿಯೋ
Image Credit source: Instagram

Updated on: Oct 13, 2025 | 7:04 PM

ಈ ಪುಟಾಣಿಗಳೇ (Little kids) ಆಟ ತುಂಟಾಟಗಳನ್ನು ಕಣ್ತುಂಬಿಸಿಕೊಳ್ಳುವ ಖುಷಿಯೇ ಬೇರೆ. ಸಾಮಾಜಿಕ ಮಾಧ್ಯಮದಲ್ಲಿ ಮಕ್ಕಳ ಮುದ್ದಾದ ದೃಶ್ಯಗಳನ್ನು ನೀವು ನೋಡಿರಬಹುದು. ಈ ವೀಡಿಯೊಗಳಲ್ಲಿನ ಮಕ್ಕಳ ತಮಾಷೆ ಮತ್ತು ಮುಗ್ಧತೆ ಬಳಕೆದಾರರನ್ನು ಸಹಜವಾಗಿಯೇ ಆಕರ್ಷಿಸುತ್ತದೆ. ಇದೀಗ ಅಂತಹದ್ದೇ ವಿಡಿಯೋ ವೈರಲ್ ಆಗಿದ್ದು ಪುಟಾಟಿಯೊಂದು ಕಿವಿ ಫ್ರೂಟ್ ನ್ನು (kiwi fruit) ಸವಿದು, ಕಂದಮ್ಮ ನೀಡಿದ ಪ್ರತಿಕ್ರಿಯೆ ನೆಟ್ಟಿಗರ ಗಮನ ಸೆಳೆದಿದೆ.

@imswatiprasher ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಹಾಸಿಗೆಯಲ್ಲಿ ಆಟವಾಡುತ್ತಿದ್ದ ಮಗುವಿಗೆ  ಪೋಷಕರು ಕಿವಿ ಹಣ್ಣಿನ ರಸವನ್ನು ಬಾಯಿಗೆ ಹಾಕಿದ್ದಾರೆ. ಕಿವಿ ಹಣ್ಣನ್ನು ಮೊದಲ ಬಾರಿಗೆ ಸವಿದ ಪುಟ್ಟ ಕಂದಮ್ಮ ಮುದ್ದಾದ ಪ್ರತಿಕ್ರಿಯೆಯನ್ನು ನೀಡಿದೆ.

ಇದನ್ನೂ ಓದಿ
ಐಸ್ ಕ್ರೀಮ್ ಬಾಯಿಗೆ ಇಟ್ಟೊಡನೆ ಪುಟಾಣಿಯ ರಿಯಾಕ್ಷನ್‌ ಹೇಗಿತ್ತು ನೋಡಿ
ಹಸಿವು ತಾಳಲಾರದೇ ಈ ಪುಟ್ಟ ಬಾಲಕ ಮಾಡಿದ ಕೆಲಸ ನೋಡಿದ್ರೆ ಶಾಕ್‌ ಆಗ್ತೀರಾ
ಟೀಚರ್‌ಗೆ ಗೊತ್ತಾಗದಂತೆ ಬಿಸ್ಕೆಟ್‌ ತಿನ್ನುತ್ತಾ ಸಿಕ್ಕಿ ಬಿದ್ದ ಪುಟಾಣಿ
ಮುದ್ದಿನ ಮಗನಿಗೆ ಕಷ್ಟ ಕೊಡದೇ ತಾನೇ ಹೋಮ್ ವರ್ಕ್ ಮಾಡಿದ ಅಮ್ಮ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:Video: ಮೊದಲ ಬಾರಿ ಐಸ್​​​ಕ್ರೀಮ್​​​ ತಿಂದ ಮಗು, ಕಂದಮ್ಮನ ರಿಯಾಕ್ಷನ್​​ ಹೇಗಿತ್ತು ನೋಡಿ

ಈ ವಿಡಿಯೋ ಇದುವರೆಗೆ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಒಬ್ಬ ಬಳಕೆದಾರ ಈ ಪುಟಾಣಿ ಪ್ರತಿಕ್ರಿಯೆಯನ್ನು ನೋಡಲು ನಾನು ಇನ್ನೊಂದು ಬಾರಿ ಪ್ರಯತ್ನಿಸುತ್ತೇನೆ” ಎಂದು ಬರೆದಿದ್ದಾರೆ. ಇನ್ನೊಬ್ಬರು, ಕಣ್ಣು ಮಿಟುಕಿಸುವಿಕೆಯು ಇಡೀ ವೀಡಿಯೊವನ್ನು ಸುಂದರಗೊಳಿಸುತ್ತದೆ ಎಂದು ಹೇಳಿದ್ದಾರೆ. ಮೂರನೇ ಬಳಕೆದಾರರು, “ಹೃದಯದಿಂದ ಬಂದ ಎರಡನೇ ಪ್ರತಿಕ್ರಿಯೆ ನನಗೆ ತುಂಬಾ ಇಷ್ಟವಾಯಿತು” ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 7:00 pm, Mon, 13 October 25