
ಕೆಲ ಪುಟಾಣಿಗಳೇ (little kids) ಹಲ್ಲಿ ಜಿರಳೆಗಳನ್ನು ನೋಡಿದರೆ ಸಾಕು, ಅವುಗಳನ್ನು ಕೈಯಲ್ಲಿ ಹಿಡಿಯುವ ಧೈರ್ಯ ಮಾಡ್ತಾರೆ. ಇನ್ನು ಕೆಲ ಮಕ್ಕಳು ಹಲ್ಲಿಯನ್ನು (lizard) ಕಂಡು ಭಯ ಪಡುವುದಿದೆ. ಆದರೆ ಈ ಪುಟಾಣಿಗೆ ಭಯ ಅನ್ನೋದು ಹೇಗಿರುತ್ತದೆ ಎನ್ನುವುದು ತಿಳಿದೇ ಇಲ್ಲ ಎಂದೆನಿಸುತ್ತದೆ. ಹೌದು, ಈ ಪುಟ್ಟ ಬಾಲಕ ಹಲ್ಲಿಯನ್ನು ಕೈಯಲ್ಲಿ ಹಿಡಿದು ಮುತ್ತು ನೀಡಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ನೆಟ್ಟಿಗರು ಈ ಪುಟಾಣಿಯ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ.
@mithirasmalaii ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪುಟ್ಟ ಹುಡುಗನು ಬಾಗಿಲ ಸಂದಿಯಲ್ಲಿರುವ ಹಲ್ಲಿಯನ್ನು ಹಿಡಿಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಈ ಪುಟಾಣಿಯೂ ಹಲ್ಲಿಯನ್ನು ಮೆಲ್ಲನೆ ಕೈಯಲ್ಲಿ ಹಿಡಿದು ಮುತ್ತು ನೀಡಿರುವುದನ್ನು ನೋಡಬಹುದು.
Bro playing with fear of millions of girls 💀🗿 pic.twitter.com/6vQizXEPfy
— S (@meethirasmalaii) January 10, 2026
ಇದನ್ನೂ ಓದಿ:ಪುಟ್ಟ ಹುಡುಗನ ಮಡಿಲಲ್ಲಿ ಹಾಯಾಗಿ ಮಲಗಿದ ನಾಯಿ ಮರಿ
ಈ ವಿಡಿಯೋ ಎಪ್ಪತ್ತಾರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಏನು ಧೈರ್ಯ ಗುರು ಎಂದು ಹೇಳಿದರೆ, ಮತ್ತೊಬ್ಬರು, ಈ ಪುಟಾಣಿಯ ತಾಯಿ ಕೋಣೆಯ ಮೂಲೆಯಲ್ಲಿ ಕುರ್ಚಿಯ ಮೇಲೆ ನಿಂತಿರಬಹುದು ಎಂದು ಹೇಳಿದ್ದಾರೆ. ಮತ್ತೊಬ್ಬರು, ಬುದ್ಧಿವಂತ ಹುಡುಗ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ