ಭಾರತದ ಆಹಾರಕ್ಕೆ ಅವಮಾನ: ಅಮೆರಿಕ ವಿಶ್ವವಿದ್ಯಾಲಯದ ವಿರುದ್ಧ ಗುಡುಗಿದ ಭಾರತೀಯ ವಿದ್ಯಾರ್ಥಿಗಳಿಗೆ ಬಂತು 1.8 ಕೋಟಿ ರೂ.
ಅಮೆರಿಕದ ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯದಲ್ಲಿ 2023ರಲ್ಲಿ ನಡೆದ ಆಹಾರ ಸಂಬಂಧಿತ ಜನಾಂಗೀಯ ತಾರತಮ್ಯ ಪ್ರಕರಣದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಭಾರಿ ಗೆಲುವು ಸಿಕ್ಕಿದೆ. ಅಮೆರಿಕದ ಫೆಡರಲ್ ಕೋರ್ಟ್, ವಿಶ್ವವಿದ್ಯಾಲಯಕ್ಕೆ $200,000 (ಅಂದಾಜು ₹1.8 ಕೋಟಿ) ಪರಿಹಾರ ನೀಡಲು ಆದೇಶಿಸಿದೆ. ಪಾಲಕ್ ಪನೀರ್ ಬಿಸಿ ಮಾಡುವ ವೇಳೆ ಸಿಬ್ಬಂದಿಯೊಬ್ಬರು ಜನಾಂಗೀಯ ನಿಂದನೆ ಮಾಡಿದ್ದು, ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ತೀರ್ಪು ವಿದೇಶಗಳಲ್ಲಿ ನಡೆಯುವ ಆಹಾರ ತಾರತಮ್ಯದ ಬಗ್ಗೆ ಚರ್ಚೆಗೆ ಕಾರಣವಾಗಿದೆ.

ಅಮೆರಿಕದ ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯದಲ್ಲಿ (University of Colorado Boulder) 2023ರಲ್ಲಿ ಆಹಾರ ಕ್ರಮದ ವಿಚಾರವನ್ನು ಇಟ್ಟುಕೊಂಡು ಜನಾಂಗೀಯ ತಾರತಮ್ಯ ಮಾಡಲಾಗಿದೆ ಎಂದು ದೊಡ್ಡ ಗಲಾಟೆ ನಡೆದಿತ್ತು. ಈ ವಿಚಾರವಾಗಿ ಭಾರತೀಯ ಮೂಲದ ಇಬ್ಬರು ವಿದ್ಯಾರ್ಥಿಗಳು ಅಮೆರಿಕದ ಫೆಡರಲ್ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಅರ್ಜಿ ಸಲ್ಲಿಸಿದರು. ಇದೀಗ ಈ ವಿಚಾರವಾಗಿ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಭಾರತೀಯ ವಿದ್ಯಾರ್ಥಿಗಳಿಗೆ $200,000 (ಅಂದಾಜು ₹1.8 ಕೋಟಿ) ಪರಿಹಾರ ನೀಡಲು ಹೇಳಿದೆ. ಸಾಮಾಜಿಕ ಜಾಲತಾಣದಲ್ಲಿ ಹಾಗೂ ಅಲ್ಲಿನ ಮಾಧ್ಯಮಗಳಲ್ಲಿ ಈ ಬಗ್ಗೆ ಭಾರೀ ಚರ್ಚೆಯಾಗಿದೆ. ವಿದೇಶದಲ್ಲಿ ಇಂದಿಗೂ ಆಹಾರ ವಿಚಾರದಲ್ಲಿ ದೊಡ್ಡ ತಾರತಮ್ಯಗಳು ನಡೆಯುತ್ತಿಯೇ ಎಂಬ ವಿಚಾರ ಚರ್ಚೆ ಬಂದಿದೆ.
ಈ ಘಟನೆ 2023 ಸೆ.5ರಂದು ನಡೆದಿದೆ. ಮಾನವಶಾಸ್ತ್ರ ವಿಭಾಗದಲ್ಲಿ ಪಿಎಚ್‌ಡಿ ಮಾಡುತ್ತಿದ್ದ ಆದಿತ್ಯ ಪ್ರಕಾಶ್ ಅವರು ವಿಶ್ವವಿದ್ಯಾಲಯದ ಸಾಮಾನ್ಯ ಮೈಕ್ರೋವೇವ್‌ನಲ್ಲಿ ತಮ್ಮ ಮಧ್ಯಾಹ್ನದ ಊಟವಾದ ‘ಪಾಲಕ್ ಪನೀರ್’ ಅನ್ನು ಬಿಸಿ ಮಾಡುತ್ತಿದ್ದರು. ಆಗ ಅಲ್ಲಿಗೆ ಬಂದ ವಿದೇಶಿ ಸಿಬ್ಬಂದಿಯೊಬ್ಬರು ಏನು ಮಾಡುತ್ತಿದ್ದೀರಾ? ಎಂದು ಕೇಳಿದ್ದಾರೆ. ಅದಕ್ಕೆ ಆದಿತ್ಯ ಪ್ರಕಾಶ್ ಪಾಲಕ್ ಪನೀರ್ ಬಿಸಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಇದಕ್ಕೆ ಆ ವಿದೇಶಿ ಸಿಬ್ಬಂದಿ, ಇದು ತುಂಬಾ ವಾಸನೆ ಬರುತ್ತಿದೆ ಎಂದು ಹೇಳಿದ್ದಾನೆ. ಆದಿತ್ಯ ಪ್ರಕಾಶ್ ಇಲ್ಲ ಸರ್ ಅದು ಭಾರತದ ಆಹಾರ ಪದ್ಧತಿ, ಹಾಗೂ ತುಂಬಾ ಫ್ರೆಶ್ ಆಗಿದೆ ಎಂದು ಹೇಳಿದ್ದಾರೆ. ಇಲ್ಲ ಇದು ಕೆಟ್ಟಾಗಿದೆ. ಇದನ್ನು ನೀವು ಹೇಗೆ ತಿನ್ನುತ್ತೀರಾ ಎಂದು ಕೇಳಿದ್ದಾರೆ. ಕೊನೆಗೆ ನನ್ನ ವಾದವೇ ಸರಿ ಎಂದು ಹೇಳಿಕೊಳ್ಳಲು ಸಿಬ್ಬಂದಿ ಆಡಳಿತ ಮಂಡಳಿ ದೂರು ನೀಡಿದ್ದಾನೆ. ಜತೆಗೆ ತನ್ನ ಪ್ರಭಾವವನ್ನು ಕೂಡ ಬಳಸಿಕೊಂಡು ಆದಿತ್ಯ ಪ್ರಕಾಶ್ ವಿರುದ್ಧ ಮಾತನಾಡುವಂತೆ ಮಾಡಿದ್ದಾನೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ತಾಯಿ ಮುಂದೆ ಗೋಡೆಗೆ ಎಸೆದು ಚಿತ್ರಹಿಂಸೆ ನೀಡಿ ನಾಯಿ ಮರಿಯನ್ನು ಕೊಂದ ವ್ಯಕ್ತಿ
ಆಡಳಿತ ಮಂಡಳಿ ಮಧ್ಯಪ್ರವೇಶ ಮಾಡಿ, ಇನ್ಮುಂದೆ ಹೊರದೇಶ ಅಥವಾ ಭಾರತ ಆಹಾರಗಳನ್ನು ವಿಶ್ವವಿದ್ಯಾಲಯಕ್ಕೆ ತರವಂತಿಲ್ಲ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಆದಿತ್ಯ ಪ್ರಕಾಶ್ ಅವರು ವಿಶ್ವವಿದ್ಯಾಲಯ ವಿರುದ್ಧ ಗುಡುಗಿದ್ದಾರೆ. ಆದಿತ್ಯ ಪ್ರಕಾಶ್ ಪರವಾಗಿ ಭಾರತ ಮೂಲದ ಮತ್ತೊಬ್ಬ ವಿದ್ಯಾರ್ಥಿ ಉರ್ಮಿ ಭಟ್ಟಾಚಾರ್ಯ ಕೂಡ ಮಾತನಾಡಿದ್ದಾರೆ. ಇಬ್ಬರು ಜತೆಯಾಗಿ ಸೇರಿ ಈ ವಿಚಾರವಾಗಿ ಹೋರಾಟ ಮಾಡಿದ್ದಾರೆ. ಕೊನೆಗೆ ಈ ಇಬ್ಬರು ವಿದ್ಯಾರ್ಥಿಗಳು ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯದ ವಿರುದ್ಧ ಅಮೆರಿಕದ ಫೆಡರಲ್ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಅರ್ಜಿ ಸಲ್ಲಿದರು. 2 ವರ್ಷಗಳ ನಂತರ ಇದೀಗ ಕೋರ್ಟ್ ಈ ವಿದ್ಯಾರ್ಥಿಗಳ ಪರ ಆದೇಶವನ್ನು ನೀಡಿದೆ. ಆಹಾರ ವಿಚಾರವಾಗಿ ಜನಾಂಗೀಯ ವಿವಾದ ಮಾಡಿದಕ್ಕೆ ವಿಶ್ವವಿದ್ಯಾಲಯ ಇವರಿಗೆ $200,000 (ಅಂದಾಜು ₹1.8 ಕೋಟಿ) ನೀಡಬೇಕು ಹಾಗೂ ಅವರ ಸ್ನಾತಕೋತ್ತರ ಪದವಿಗಳನ್ನು ಅಧಿಕೃತವಾಗಿ ಪ್ರದಾನ ಮಾಡಬೇಕು ಎಂದು ಹೇಳಿದೆ. ಇದಕ್ಕೆ ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯ ಕೂಡ ಒಪ್ಪಿಕೊಂಡಿದೆ. ಆದರೆ ಇದರ ಜತೆಗೆ ವಿಶ್ವವಿದ್ಯಾಲಯ ಷರತ್ತನ್ನು ಕೂಡ ಹಾಕಿದೆ. ಇನ್ಮುಂದೆ ಇವರು ನಮ್ಮ ವಿಶ್ವವಿದ್ಯಾಲಯದ ಯಾವುದೇ ವಿಭಾಗದಲ್ಲಿ ವಿದ್ಯಾರ್ಥಿಗಳಾಗಿ ಬರಬಾರದು ಹಾಗೂ ಇಲ್ಲಿ ಹುದ್ದೆಗಳಿಗೆ ಸೇರಿಕೊಳ್ಳಬಾದರು ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:16 pm, Wed, 14 January 26
