ಮೂರು ದಿನದ ಮಟ್ಟಿಗೆ ಅಧ್ಯಕ್ಷನಾಗಿ, ದೇಶದ ದಿಕ್ಕನ್ನೇ ಬದಲಿಸಿದ ಪುಟ್ಟ ಬಾಲಕ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 08, 2023 | 4:33 PM

ಒಂದಲ್ಲಾ ಒಂದು ಅಚ್ಚರಿಯ ಘಟನೆಗಳು ನಡೆಯುತ್ತಿರುವೆ. ಅಂತಹ ಘಟನೆಗಳು ನಮ್ಮ ಕಿವಿಗೆ ಬಿದ್ದಾಗ ಹೀಗಾಗಲೂ ಸಾಧ್ಯವಿದೆಯೇ ಎಂದು ನಾವು ಆಶ್ಚರ್ಯಪಡುತ್ತೇವೆ. ಈಗ ಅಂತಹದ್ದೇ ಒಂದು ಅಚ್ಚರಿಯ ಘಟನೆ ನಡೆದಿದೆ. ಪುಟ್ಟ ಬಾಲಕನೊಬ್ಬ ಮೂರು ದಿನಗಳ ಮಟ್ಟಿಗೆ ದೇಶದ ಅಧ್ಯಕ್ಷನಾಗಿದ್ದು, ಈ ಘಟನೆ ಎಲ್ಲರ ಹುಬ್ಬೆರುವಂತೆ ಮಾಡಿದೆ. ಇದು ನಡೆದಿದ್ದಾರೂ ಎಲ್ಲಿ? ಯಾತಕ್ಕಾಗಿ ಬಾಲಕನನ್ನು ಮೂರು ದಿನಗಳ ಮಟ್ಟಿಗೆ ದೇಶದ ಅಧ್ಯಕ್ಷನನ್ನಾಗಿ ಮಾಡಲಾಯಿತು ಇಲ್ಲಿದೆ ನೋಡಿ.

ಮೂರು ದಿನದ ಮಟ್ಟಿಗೆ ಅಧ್ಯಕ್ಷನಾಗಿ, ದೇಶದ ದಿಕ್ಕನ್ನೇ ಬದಲಿಸಿದ ಪುಟ್ಟ ಬಾಲಕ
ಸಾಂದರ್ಭಿಕ ಚಿತ್ರ
Follow us on

ಪ್ರಪಂಚ ವಿಶಾಲವಾಗಿದೆ, ಈ ವಿಶಾಲವಾದ ಪ್ರಪಂಚದಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ಅಚ್ಚರಿಯ ಘಟನೆಗಳು ನಡೆಯುತ್ತಿರುತ್ತವೆ. ಇದು ನಮ್ಮನ್ನು ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ. ಈ ಮೊದಲು ನಮ್ಮ ಭಾರತದಲ್ಲಿ ಯುವತಿಯೊಬ್ಬಳು ತನ್ನನ್ನು ತಾನು ವಿವಾಹವಾಗಿ ಸುದ್ದಿಯಲ್ಲಿದ್ದಳು. ಈ ಘಟನೆ ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿತ್ತು. ಈ ರೀತಿಯ ವಿಚಿತ್ರ ಘಟನೆಗಳು ಆಗಾಗ್ಗೆ ನಡೆಯುತ್ತಿರುತ್ತದೆ. ಈಗ ಅಂತಹದ್ದೇ ಒಂದು ಘಟನೆ ನಡೆದಿದ್ದು, ಒಬ್ಬ ಪುಟ್ಟ ಬಾಲಕ ಮೂರು ದಿನಗಳ ಮಟ್ಟಿಗೆ ದೇಶದ ಅಧ್ಯಕ್ಷನಾಗಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈ ಘಟನೆ ನಡೆದಿದ್ದಾದರೂ ಎಲ್ಲಿ ಎಂಬ ಮಾಹಿತಿ ಇಲ್ಲಿದೆ.

ಈ ಘಟನೆ ನೆಡೆದಿರುವಂತಹದ್ದು ದೂರದ ಚಿಲಿ ದೇಶದಲ್ಲಿ. ಭಾರತದಲ್ಲಿ ಸುಮಾರು ರಾಜಕೀಯ ಪಕ್ಷಗಳಿರುವಂತೆ ಚಿಲಿ ದೇಶದಲ್ಲಿ ಯುನಿಟರಿ ಪ್ರೆಸಿಡೆನ್ಶಿಯಲ್ ರಿಪಬ್ಲಿಕ್ ಎಂಬ ರಾಜಕೀಯ ಪಕ್ಷ ಈ ದೇಶದಲ್ಲಿ ಆಳ್ವಿಕೆ ನಡೆಸುತ್ತಿದೆ. ಗ್ಯಾಬ್ರಿಯಲ್ ಬೋರಿಕ್ ಈ ದೇಶದ ಪ್ರಧಾನಿ. ತುಂಬಾ ಶಿಸ್ತಿನ ಹಾಗೂ ಅತೀ ಕಿರಿಯವಯಸ್ಸಿನಲ್ಲಿಯೇ ಅಧ್ಯಕ್ಷರಾಗಿರುವ ಹೆಗ್ಗಳಿಕೆ ಇವರದು. ಇವರಿಗೊಬ್ಬ 8 ವರ್ಷ ವಯಸ್ಸಿನ ಮಗನಿದ್ದಾನೆ. ಆತನ ಹೆಸರು ಜಾನ್ಸನ್ ಬೋರಿಕ್. ಈತನೆ ಮೂರು ದಿನಗಳ ಮಟ್ಟಿಗೆ ಚಿಲಿ ದೇಶದ ಅಧ್ಯಕ್ಷನಾಗಿ ಆಳ್ವಿಕೆ ನಡೆಸಿದವನು.

ಒಂದು ಬಾರಿ ಚಿಲಿ ದೇಶದ ಅಧ್ಯಕ್ಷ ಗ್ಯಾಬ್ರಿಯಲ್ ರಸ್ತೆ ಅಪಘಾತಕ್ಕೆ ಒಳಗಾಗುತ್ತಾರೆ. ಆ ಸಂದರ್ಭದಲ್ಲಿ ಅವರ ತಲೆಗೆ ಬಲವಾದ ಏಟು ಬೀಳುತ್ತದೆ. ವೈದ್ಯರು ಆಪರೇಷನ್ ಮಾಡಬೇಕು, ಮೂರು ದಿನಗಳ ಕಾಲ ಇವರಿಗೆ ಪ್ರಜ್ಞೆ ಇರೋದಿಲ್ಲ ಎಂದು ಹೇಳುತ್ತಾರೆ. ಈತ ಶಿಸ್ತಿನ ನಾಯಕನಾದ ಕಾರಣ ಪಕ್ಷದ ಇತರ ರಾಜಕರಣಿಗಳಿಗೆ ದೇಶದ ಹಣವನ್ನು ಕೊಳ್ಳೆ ಹೊಡೆಯಲು ಸಾಧ್ಯವಾಗುತ್ತಿರಲಿಲ್ಲ. ಅಧ್ಯಕ್ಷನ ಈ ಸ್ಥಿತಿಯನ್ನು ಬಂಡವಾಳವನ್ನಾಗಿಟ್ಟುಕೊಂಡು, ಹೊಸ ಕಾನೂನನ್ನು ಜಾರಿ ಮಾಡಿ ಜಾನ್ಸನ್ ಬೋರಿಕ್​​​ನನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸುತ್ತಾರೆ. ಈತ ನಾವು ಹೇಳಿದ ದಾಖಲೆಗಳಿಗೆ ಸಹಿ ಮಾಡುತ್ತಾನೆ, ಆಗ ದೇಶ ನಮ್ಮ ಕೈ ಮುಷ್ಟಿಯಲ್ಲಿ ಇರುತ್ತದೆ ಎಂದು ಆ ನಾಯಕರು ಭಾವಿಸುತ್ತಾರೆ. ಆದರೆ ಅವರು ಅಂದುಕೊಂಡಂತೆ ಯಾವುದು ಆಗಲಿಲ್ಲ.

ಈ ಬಾಲಕ 72 ಗಂಟೆಗಳ ಕಾಲದ ತನ್ನ ಅಧಿಕಾರವಧಿಯಲ್ಲಿ ದೇಶದ ದಿಕ್ಕನ್ನೇ ಬದಲಿಸಿದ. ಈತ ತನ್ನ ಅಲ್ಪ ಅಧಿಕಾರವಧಿಯಲ್ಲಿ ಮಾಡಿದ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಯಿತಲ್ಲದೇ, ಆತನೇ ಅಧ್ಯಕ್ಷನಾಗಿ ಮುಂದುವರೆಯಬೇಕು ಎಂದು ಆಗ್ರಹಿಸುತ್ತಾರೆ. ಅಷ್ಟಕ್ಕೂ ಈ ಪುಟ್ಟ ಬಾಲಕ ಮಾಡಿರುವ ಒಳ್ಳೆಯ ಕೆಲಸ ಏನು ಗೊತ್ತಾ?

ಇದನ್ನೂ ಓದಿ: ವೃದ್ಧರೊಬ್ಬರ ಕಾಲ್ಪನಿಕ ಕ್ರಿಕೆಟ್​; ನೆಟ್ಟಿಗರಲ್ಲಿ ಚಿಮ್ಮಿದ ಉತ್ಸಾಹ

ಮೊದಲಾಗಿ ಈ ಬಾಲಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿಲ್ಲ, ಬದಲಾಗಿ ಅಧ್ಯಕ್ಷರ ಕಾರ್ಯನಿರ್ವಹಕರಾಗಿ ಅಧಿಕಾರ ವಹಿಸುತ್ತಾನೆ. ಅಧಿಕಾರ ವಹಿಸಿದ ನಂತರ ಮೊದಲು ಮಾಡಿದ ಕೆಲಸವೇನೆಂದರೆ ತನ್ನ ಪಕ್ಷದ ವಿರುದ್ಧ ಟ್ರೋಲ್ ಮಾಡುತ್ತಿದ್ದವರನ್ನೆಲ್ಲಾ ಬಂಧಿಸುತ್ತಾನೆ. ಅಲ್ಲದೇ ಪಕ್ಷ ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಅವುಗಳನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಬಿಂಬಿಸುವವರನ್ನೂ ಬಂಧಿಸುತ್ತಾನೆ. ದೇಶದಲ್ಲಿನ ದರೋಡೆಕೋರರು, ಕದೀಮರು ಕಳ್ಳರು ಸೇರಿದಂತೆ ಅಪರಾಧಿಗಳನ್ನೆಲ್ಲಾ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ನೇಮಕ ಮಾಡಲಾಗುತ್ತದೆ. ಯಾರು ಕೆಲಸ ಮಾಡಲು ಸಮ್ಮತಿ ನೀಡುವುದಿಲ್ಲವೋ ಅವರನ್ನು ಗುಂಡುಕ್ಕಿ ಕೊಲ್ಲಲು ಆದೇಶ ನೀಡುತ್ತಾನೆ. ಮತ್ತು ಕಪ್ಪು ಹಣ ಹೊಂದಿರುವವರು 6 ಗಂಟೆಗಳೊಳಗೆ ಆ ಹಣವನ್ನು ಚಿಲಿ ದೆಶದ ಅಭಿವೃದ್ಧಿ ಖಾತೆಗೆ ಹಾಕಬೇಕು. ಕಪ್ಪು ಹಣದಲ್ಲಿ ಕೇವಲ 10% ಹಣ ನಿಮ್ಮದು 90% ಹಣ ದೇಶದ ಅಭಿವೃದ್ಧಿ ಕಾರ್ಯಕ್ಕೆ ಜಮೆ ಆಗಬೇಕು ಎಂದು ಆದೇಶಿಸುತ್ತಾನೆ. ಅಲ್ಲದೆ ಈತನ ಅಧಿಕಾರವಧಿಯಲ್ಲಿ ಚಿಲಿಯ ಡ್ರಗ್ ಲಾರ್ಡ್ ಇ.ಎಲ್ ಚಾಪೋನನ್ನು ಗುಂಡುಕ್ಕಿ ಕೊಲ್ಲಲಾಗುತ್ತದೆ. ಅಧಿಕಾರಕ್ಕೆ ಬಂದ 8 ಗಂಟೆಯಲ್ಲಿ ಚಿಲಿ ದೇಶದ ಡ್ರಗ್ ಮಾಫಿಯಾವನ್ನೇ ಸರ್ವನಾಶ ಮಾಡುತ್ತಾನೆ.

ದೇಶದಲ್ಲಿ ಕೋಮು ಗಲಭೆ ಸೃಷ್ಟಿಸುವ ಎಲ್ಲರನ್ನು ಎನ್ ಕೌಂಟರ್ ಮಾಡಿಸುತ್ತಾನೆ. ಕ್ರಿಶ್ಚಿಯನ್ ಧರ್ಮವನ್ನು ಹೊರತು ಪಡಿಸಿ ಬೇರೆ ಧರ್ಮದವರಿಗೆ ನೀಡಿದ್ದ ಸರ್ಕಾರಿ ಸೌಲಭ್ಯವನ್ನು ಹಿಂಪಡೆಯಲಾಗುತ್ತದೆ. ಸ್ಥಗಿತಗೊಂಡಿದ್ದ ಅಭಿವೃದ್ಧಿ ಕೆಲಸಗಳನ್ನು ಮತ್ತೆ ಆರಂಭಿಸುತ್ತಾನೆ. ಅಲ್ಲದೆ ತನ್ನ ಅಧಿಕಾರವಧಿಯಲ್ಲಿ ನಡೆಯುವ ಸರ್ಕಾರಿ ಕೆಲಸಗಳ ವಿರುದ್ಧ ಯಾರು ಕೇಸ್ ಹಾಕಬಾರದು ಎಂದು ಮಸೂದೆ ಜಾರಿಗೊಳಿಸುತ್ತಾನೆ. ಹಾಗೂ 42ಕ್ಕೂ ಹೆಚ್ಚು ಉಪಯುಕ್ತ ಯೋಜನೆಗಳಿಗೆ ಸಹಿ ಹಾಕುತ್ತಾನೆ. ಹೀಗೆ ಮೂರು ದಿನಗಳಲ್ಲಿ 80% ಶೇಕಡಾದಷ್ಟು ದೇಶವನ್ನು ಬದಲಾವಣೆ ಮಾಡಿ ತನ್ನ ಹುದ್ದೆಗೆ ರಾಜಿನಾಮೆ ನೀಡುತ್ತಾನೆ.

ಈ ಸಣ್ಣ ವಯಸ್ಸಿನಲ್ಲಿ ಪ್ರಬುದ್ಧ ರಾಜಕೀಯ ಜ್ಞಾನ ಹೇಗೆ ಬಂತೆಂದು ನೀವು ಯೋಚಿಸಬಹುದು, ಈತನ ತಂದೆ ಮಾತ್ರವಲ್ಲದೆ ತಾತ ಮುತ್ತಾತ ಕೂಡ ರಾಜಕೀಯ ಹಿನ್ನೆಲೆಯವರು. ರಾಜಕೀಯ ಜ್ಞಾನ ಎನ್ನುವಂತಹದ್ದು ಈತನಿಗೆ ರಕ್ತಗತವಾಗಿಯೇ ಬಂದಿದೆ. ಅಲ್ಲದೆ ಜಾನ್ಸನ್ ಆತನ ತಂದೆ ಯಾವ ರೀತಿಯ ಆಡಳಿತವನ್ನು ನಡೆಸಬೇಕೆಂದು ತಂದೆ ಹೇಳಿಕೊಡುತ್ತಿರುತ್ತಾರೆ. ಅಲ್ಲದೆ ಮಗ ರಾಜಕೀಯಕ್ಕೆ ಬಂದರೆ ದೇಶವನ್ನು ಯಾವ ರೀತಿ ಮುನ್ನಡೆಸಬೇಕೆಂಬುದನ್ನು ಪುಸ್ತಕವೊಂದರಲ್ಲಿ ಬರೆದಿಡುತ್ತಿದ್ದರು. ತಂದೆ ಬರೆದಿರುವ ಪುಸ್ತಕವನ್ನು ಆಧಾರವಾಗಿಟ್ಟುಕೊಂಡು ಈ ಎಲ್ಲಾ ಕೆಲಸವನ್ನು ಮಾಡಿ ಸಾರ್ವಜನಿಕರಿಂದ ಪ್ರಶಂಸೆ ಪಡೆದುಕೊಳ್ಳುತ್ತಾನೆ. ಈ ಬಗ್ಗೆ ಒಂದು ಸ್ಟೋರಿಯನ್ನು ಸುಧೀಂದ್ರ ಎಕ್ಸ್‌ಪ್ಲೋರರ್ ಫೇಸ್​​ಬುಕ್​​​ ಪೇಜ್​​​ ಹಂಚಿಕೊಂಡಿದೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ