AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮನೆಯಂಗಳಕ್ಕೆ ಬಂದ ನವಿಲಿಗೆ ಕ್ಲಾಸ್ ತೆಗೆದುಕೊಂಡ ಪುಟಾಣಿ, ಮುಂದೇನಾಯ್ತು ನೋಡಿ

ಪುಟಾಣಿಗಳೇ ಹಾಗೆ, ಮನಸ್ಸು ಪರಿಶುದ್ಧವಾದದ್ದು. ತಮಗೆ ಅನಿಸಿದ್ದನ್ನು ನೇರವಾಗಿ ಹೇಳಿ ಬಿಡುತ್ತವೆ. ಕೆಲವೊಮ್ಮೆ ಹೆತ್ತ ತಂದೆ ತಾಯಿಯರಿಗೂ ತಮ್ಮದೇ ಭಾಷೆಯಲ್ಲಿ ಬೈಯುವುದಿದೆ. ಈ ವಿಡಿಯೋ ನೋಡಿದ್ರೆ ಪುಟಾಣಿ ಮುಗ್ಧತೆಗೆ ಕರಗಿಯೇ ಹೋಗ್ತೀರಾ. ಇಲ್ಲೊಂದು ಪುಟಾಣಿ ಮನೆಯಂಗಳಕ್ಕೆ ಬಂದ ನವಿಲಿಗೆ ಬೈಯಲು ಶುರು ಮಾಡಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಮನೆಯಂಗಳಕ್ಕೆ ಬಂದ ನವಿಲಿಗೆ ಕ್ಲಾಸ್ ತೆಗೆದುಕೊಂಡ ಪುಟಾಣಿ, ಮುಂದೇನಾಯ್ತು ನೋಡಿ
ವೈರಲ್‌ ವಿಡಿಯೋImage Credit source: Facebook
ಸಾಯಿನಂದಾ
|

Updated on: May 11, 2026 | 3:09 PM

Share

ಪುಟ್ಟ ಮಕ್ಕಳು (little kids) ತಮ್ಮ ಮನೆಯಂಗಳಕ್ಕೆ ಬಂದ ಪ್ರಾಣಿ ಪಕ್ಷಿಗಳನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತವೆ. ಆದರೆ ಈ ಪುಟಾಣಿ ಮನೆಯಂಗಳಕ್ಕೆ ಬಂದ ನವಿಲಿಗೆ ಬೈಯಲು ಶುರು ಮಾಡಿದೆ. ಪುಟಾಣಿ ಹಾಗೂ ನವಿಲಿನ ನಡುವಿನ ಬಾಂಧವ್ಯ ಸಾರುವ ಈ ವಿಡಿಯೋ ವೈರಲ್ ಆಗಿದೆ. ಈ ನೆಟ್ಟಿಗರು ಈ ದೃಶ್ಯವನ್ನು ಕಣ್ತುಂಬಿಸಿಕೊಂಡಿದ್ದಾರೆ.

Lachutti and Kunjutti ಹೆಸರಿನ ಫೇಸ್ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಮನೆಯಂಗಳಕ್ಕೆ ನವಿಲೊಂದು ಬಂದಿದ್ದು, ಅಲ್ಲೇ ಇದ್ದ ಹೂವಿನ ಕುಂಡವನ್ನು ಕೆಳಗೆ ಬೀಳಿಸಿದೆ. ಇದನ್ನು ಗಮನಿಸಿದ ಪುಟ್ಟ ಹುಡುಗಿಯೂ ನವಿಲಿಗೆ ಕ್ಲಾಸ್ ತೆಗೆದುಕೊಂಡಿರುವುದನ್ನು ಕಾಣಬಹುದು. ಆ ಬಳಿಕ ಪುಟಾಣಿ ಹೂವಿನ ಕುಂಡವನ್ನು ಸರಿಪಡಿಸುತ್ತಿರುವುದನ್ನು ನೀವು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮರಳಿ ಬಾಲ್ಯವನ್ನು ನೆನಪಿಸುವಂತಿದೆ ಈ ದೃಶ್ಯ; ಪಾಠದ ನಡುವೆ ತಿಂಡಿ ತಿಂದ ಪುಟಾಣಿ

ಈ ವಿಡಿಯೋ ಎಪ್ಪತ್ತೇಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ನವಿಲಿನ ತಪ್ಪಾಗಿದೆ ಕ್ಷಮಿಸು ಬಿಡು ಪುಟಾಣಿ ಎಂದಿದ್ದಾರೆ. ಮತ್ತೊಬ್ಬರು, ಪುಟಾಣಿ ತುಂಬಾನೇ ಗರಂ ಆಗಿದೆ ಎಂದು ಕಾಮೆಂಟ್ ಮಾಡಿದರೆ, ಇನ್ನೊಬ್ಬರು, ಮುದ್ದಾಗಿದೆ ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sainandha P
Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಅಹಮದಾಬಾದ್‌ನಲ್ಲೂ ಆರ್‌ಸಿಬಿ ಅಲೆ!
ಅಹಮದಾಬಾದ್‌ನಲ್ಲೂ ಆರ್‌ಸಿಬಿ ಅಲೆ!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ