ಈ ಪ್ರಪಂಚದಲ್ಲಿ ಎಂತೆಂತಹ ವಿಚಿತ್ರ ಜನರಿರುತ್ತಾರೆ ಅಲ್ವಾ. ಕೆಲವೊಬ್ಬರು ತಾವು ಅತೀ ಸುಂದರವಾಗಿ ಕಾಣಿಸಬೇಕೆಂದು ಸರ್ಜರಿಗಳನ್ನು ಮಾಡಿಸಿಕೊಂಡರೆ, ಇನ್ನೂ ಕೆಲವರು ತಮ್ಮ ದೇಹವನ್ನು ಕುರೂಪವಾಗಿಸಿಲು ಮೈ ತುಂಬಾ ಹಚ್ಚೆ ಹಾಕಿಸಿಕೊಳ್ಳುತ್ತಾರೆ, ದುಬಾರಿ ಸರ್ಜರಿಗಳನ್ನು ಮಾಡಿಸಿಕೊಳ್ಳುತ್ತಾರೆ. ಈ ರೀತಿ ವಿಚಿತ್ರವಾಗಿ ಕಾಣಿಸಿಕೊಳ್ಳಲು ಬಾಡಿ ಮೋಡಿಫಿಕೇಷನ್ ಮಾಡಿಸಿಕೊಂಡ ಹಲವರಿದ್ದಾರೆ. ಕೆಲವರು ದೆವ್ವದ ರೀತಿ ಬಾಡಿ ಮಾಡಿಫಿಕೇಶನ್ ಮಾಡಿಸಿಕೊಂಡರೆ, ಇನ್ನೂ ಕೆಲವರು ಪ್ರಾಣಿಗಳ ರೀತಿ ಕಾಣಿಸಿಕೊಳ್ಳಬೇಕೆಂದು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಇತ್ತೀಚಿಗೆ ಜಪಾನ್ ದೇಶದ ವ್ಯಕ್ತಿಯೊಬ್ಬ ಶ್ವಾನದ ರೀತಿಯಲ್ಲಿ ಕಾಣಿಸಿಕೊಳ್ಳಬೇಕೆಂದು ದುಬಾರಿ ವೆಚ್ಚದ ಶಸ್ತ್ರ ಚಿಕಿತ್ಸೆಯನ್ನು ಮಾಡಿಕೊಂಡು ಸುದ್ದಿಯಾಗಿದ್ದ. ಈದೀಗ ಇಲ್ಲೊಬ್ಬ “ಮನುಷ್ಯ ಸೈತಾನ (Human Satan) ಅಂತಾನೇ ಹೆಸರುವಾಸಿಯಾಗಿರುವ ವ್ಯಕ್ತಿಯೊಬ್ಬ ತನ್ನ ದೇಹವನ್ನು ಇನ್ನಷ್ಟು ವಿಕಾರಗೊಳಿಸಲು ಶಸ್ತ್ರಚಿಕಿತ್ಸೆಯ ಮೂಲಕ ತನ್ನ ಕೈ ಬೆರಳುಗಳನ್ನೇ ಕತ್ತರಿಸಿಕೊಂಡಿದ್ದಾನೆ.
ಬ್ರೆಜಿಲ್ ದೇಶದ 49 ವರ್ಷ ಪ್ರಾಯದ ಮೈಕೆಲ್ ಡಿಯಾಬಾವೊ ಪ್ರಾಡೊ ಎಂಬ ವ್ಯಕ್ತಿ ಈ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದಾನೆ. ಟ್ಯಾಟೂ ಕಲಾವಿದನಾದ ಈತ ತನ್ನ ಮೈ ತುಂಬಾ ಟ್ಯಾಟು ಹಾಕಿಸಿಕೊಂಡು, ಹಾಗೂ ಹಲವಾರು ವಿಧದ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುವ ಮೂಲಕ ಇದಾಗಲೇ ಹಲವಾರು ಬಾಡಿ ಮೋಡಿಫಿಕೇಷನ್ಗಳನ್ನು ಮಾಡಿಸಿಕೊಂಡು, ಮಾನವ ಸೈತಾನ (Human Satan) ಎಂಬ ಬಿರುದನ್ನು ಪಡೆದುಕೊಂಡಿದ್ದಾನೆ. ಇದೀಗ ಕೈ ಬೆರಳುಗಳು ದೆವ್ವದ ಕೈ ಬೆರಳುಗಳಂತೆ ಕಾಣಿಸಬೇಕೆನ್ನುವ ಸಲುವಾಗಿ , ಆತ ಬಲಗೈಯಲ್ಲಿನ ಕಿರುಬೆರಳು ಮತ್ತು ಉಂಗುರದ ಬೆರಳನ್ನು ಹಾಗೆಯೇ ಎಡಗೈಯ ಉಂಗುರದ ಬೆರಳುಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಕತ್ತರಿಸಿಕೊಂಡಿದ್ದಾನೆ.
ಇದನ್ನೂ ಓದಿ: 96 ವರ್ಷ ಹಳೆಯ ಈ ವಿಸ್ಕಿಯ ಬೆಲೆ 12 ಕೋಟಿ ರೂ.
ಈ ಮೊದಲು ಕೋವಿಡ್ ಸಮಯದಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ತನ್ನ ಕಿವಿಗಳನ್ನು ಕತ್ತರಿಸಿಕೊಂಡು ಈತ ಸುದ್ದಿಯಾಗಿದ್ದ. ಇಷ್ಟು ಮಾತ್ರವಲ್ಲದೆ ಈ ವ್ಯಕ್ತಿ ಮೈ ತುಂಬಾ ಹಚ್ಚೆ ಹಾಕಿಸಿಕೊಂಡು, ಬೆಳ್ಳಿ ಲೇಪಿತ ವಿಕಾರ ಹಲ್ಲುಗಳನ್ನು ಜೋಡಿಸಿಕೊಂಡು, ತಲೆಗೆ ಕೊಂಬುಗಳನ್ನು ಸಿಕ್ಕಿಸಿಕೊಂಡು, ಮೂಗನ್ನು ಕತ್ತರಿಸಿಕೊಂಡು ತನ್ನ ಪೂರ್ತಿ ದೇಹವನ್ನೇ ವಿಚಿತ್ರವಾಗಿ ಮಾರ್ಪಾಡು ಮಾಡಿದ್ದಾನೆ. ಅಲ್ಲದೆ ಈ ವರ್ಷದ ಆರಂಭದಲ್ಲಿ ಈತ ಶಸ್ತ್ರಚಿಕಿತ್ಸೆಯ ಮೂಲಕ ತನ್ನ ತಲೆಯಲ್ಲಿ ಸಬ್ಡರ್ಮಲ್ ಇಂಪ್ಲಾಂಟ್ಗಳನ್ನು ಮಾಡಿಸಿಕೊಂಡಿದ್ದಕ್ಕಾಗಿ, ಗಿನ್ನೆಸ್ ವಿಶ್ವ ದಾಖಲೆಯನ್ನು ಕೂಡಾ ಮಾಡಿದ್ದಾನೆ.
ವಿಕಾರವಾಗಿ ಕಾಣಿಸಿಕೊಳ್ಳುವುದು ಈತನ ಹವ್ಯಾಸವಾಗಿದ್ದು, ಇದಕ್ಕಾಗಿ ಈತ ಲೆಕ್ಕವಿಲ್ಲದಷ್ಟು ಶಸ್ತ್ರಚಿಕಿತ್ಸೆಯನ್ನು ಮಾಡಿಕೊಂಡಿದ್ದಾನೆ. ಹಾಗೂ ತನ್ನ ದೇಹದಲ್ಲಿ 80% ಶೇಕಡದಷ್ಟು ಹಚ್ಚೆ ಹಾಸಿಕೊಂಡಿದ್ದಾನೆ. ಇದೀಗ ಕೈಬೆರಳುಗಳನ್ನು ಕತ್ತರಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾನೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:58 pm, Sat, 21 October 23