Video: ಈಗ ಲಕ್ಷಾನುಗಟ್ಟಲೇ ದುಡ್ಡಿದ್ರೂ ಮದ್ವೆ ಮಾಡೋದು ಕಷ್ಟ, 1965ರಲ್ಲಿ ತನ್ನ ಮದ್ವೆ ಖರ್ಚು ಎಷ್ಟು ಆಗಿತ್ತೆಂದು ವಿವರಿಸಿದ ವ್ಯಕ್ತಿ

ಈಗಿನ ಕಾಲದಲ್ಲಿ ಮದುವೆಗೆ ಎಷ್ಟು ದುಡ್ಡಿದ್ದರೂ ಸಾಲಲ್ಲ. ಬಡವನು ಕೂಡ ಮೈ ತುಂಬಾ ಸಾಲ ಮಾಡಿಯಾದ್ರೂ ಅದ್ದೂರಿಯಾಗಿ ತಮ್ಮ ಮಗ ಅಥವಾ ಮಗಳಿಗೆ ಮದ್ವೆ ಮಾಡ್ತಾರೆ. ಆದರೆ ನಮ್ಮ ಅಜ್ಜ ಅಜ್ಜಿಯಂದಿರ ಕಾಲದಲ್ಲಿ ಅವರ ಮದ್ವೆಗೆ ಇಷ್ಟೆಲ್ಲಾ ಖರ್ಚು ಆಗ್ತಾ ಇರ್ಲಿಲ್ಲ. ಆ ಸಮಯದಲ್ಲಿ ಅಬ್ಬಬ್ಬಾ ಅಂದ್ರೆ ಮದ್ವೆಗೆ ಎಷ್ಟು ಖರ್ಚು ಆಗಿರಬಹುದು ಎಂದು ಯಾವತ್ತಾದ್ರೂ ಯೋಚನೆ ಮಾಡಿದ್ದೀರಾ. ಇದೀಗ 1965 ರಲ್ಲಿ ವ್ಯಕ್ತಿಯೊಬ್ಬರು ತಮ್ಮ ಮದ್ವೆಗೆ ಎಷ್ಟು ಖರ್ಚು ಆಗಿತ್ತು ಎಂದು ಹೇಳಿದ್ದಾರೆ. ಈ ಕುರಿತಾದ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

Video: ಈಗ ಲಕ್ಷಾನುಗಟ್ಟಲೇ ದುಡ್ಡಿದ್ರೂ ಮದ್ವೆ ಮಾಡೋದು ಕಷ್ಟ, 1965ರಲ್ಲಿ ತನ್ನ ಮದ್ವೆ ಖರ್ಚು ಎಷ್ಟು ಆಗಿತ್ತೆಂದು ವಿವರಿಸಿದ ವ್ಯಕ್ತಿ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Sep 14, 2025 | 7:49 PM

ಪ್ರತಿಯೊಬ್ಬರು ಕೂಡ ಮದ್ವೆ (marriage) ಬಗ್ಗೆ ಸಾಕಷ್ಟು ಕನಸು ಕಂಡಿರುತ್ತಾರೆ. ಹೀಗಾಗಿ ಸಾಲ ಮಾಡಿಯಾದ್ರೂ ಅದ್ದೂರಿಯಾಗಿ ಮದ್ವೆ ಆಗ್ತಾರೆ. ಆದರೆ ಕೆಲವ್ರು ಈ ಮದ್ವೆ ಖರ್ಚು ವೆಚ್ಚಗಳ ಬಗ್ಗೆ ಲೆಕ್ಕ ಹಾಕಿ ತನ್ನ ಆರ್ಥಿಕ ಸ್ಥಿತಿಗೆ ತಕ್ಕಂತೆ ಮದ್ವೆ ಮಾಡಿಕೊಳ್ತಾರೆ. ಈಗಿನವರ ತರಹ ನಮ್ಮ ಅಜ್ಜ ಅಜ್ಜಂದಿರ ಕಾಲದಲ್ಲಿ ಆಡಂಬರದ ಮದುವೆ ಇರಲಿಲ್ಲ. ಆ ಸಮಯದಲ್ಲಿ ದುಂದುವೆಚ್ಚದಿಂದ ದೂರವಿದ್ದು, ಸರಳವಾಗಿ ಮದ್ವೆ ಆಗ್ತಾ ಇದ್ರು. ಆದರೆ, 1965 ರಲ್ಲಿ ವಿವಾಹದ ಬಜೆಟ್‌ವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಹೌದು, ವ್ಯಕ್ತಿಯೊಬ್ಬರು ತಮ್ಮ ಮದ್ವೆ ಟೈಮ್‌ಲ್ಲಿ ಎಷ್ಟು ಖರ್ಚಾಗಿತ್ತು (marriage expensive) ಎಂದು ಡೈರಿಯಲ್ಲಿ ಬರೆದುಕೊಂಡಿದ್ದು, ಈ ಬಗ್ಗೆ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದು ಈಗಿನ ಮದ್ವೆ ಖರ್ಚು ವೆಚ್ಚಗಳಿಗೆ ಹೋಲಿಸಿದ್ರೆ ಇದು ಯಾವ ಲೆಕ್ಕ ಎಂದಿದ್ದಾರೆ.

ghantaa ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಂಡ ಈ ವಿಡಿಯೋಗೆ ಆ ದಿನಗಳು ಎಷ್ಟು ಅಗ್ಗವಾಗಿದ್ದವು ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ವ್ಯಕ್ತಿಯೂ 1965 ರಲ್ಲಿ ನಡೆದ ಮದುವೆಯ ಖರ್ಚುಗಳನ್ನು ಬರೆದ ತನ್ನ ಹಳೆಯ ಡೈರಿಯನ್ನು ತೋರಿಸಿದ್ದು ಇದರಲ್ಲಿ ಮದುವೆಯು 1965 ಫೆಬ್ರವರಿ 10 ರಂದು ನಡೆಯಿತು ಎಂದು ಉಲ್ಲೇಖಿಸಲಾಗಿದೆ. ಆ ವೇಳೆಯಲ್ಲಿ ಖರ್ಚು ವೆಚ್ಚ ಎಷ್ಟಾಗಿತ್ತು ಎಂದು ವಿವರಿಸಿದ್ದಾರೆ. ಎಲ್ಲಾ ಖರ್ಚುಗಳನ್ನು ತೋರಿಸಿ ಮದುವೆಗೆ ಒಟ್ಟು ಖರ್ಚು ಆಗಿದ್ದು 1504 ರೂಪಾಯಿ 64 ಪೈಸೆ ಹಾಗೂ ಉಡುಗೊರೆಯ ಬಗ್ಗೆ ಹೇಳಿಕೊಂಡಿದ್ದಾರೆ. ಆ ಸಮಯದಲ್ಲಿ ಒಂದು ರೂಪಾಯಿಯಂತೆ ಮುಯ್ಯಿ ನೀಡಿದ್ದು,  ಆ ಸಮಯದಲ್ಲಿ 50 ರೂ ಮುಯ್ಯಿ ಒಟ್ಟು ಆಗಿತ್ತು ಎಂದು ಹೇಳಿರುವುದನ್ನು ನೋಡಬಹುದು.

ಇದನ್ನೂ ಓದಿ
ಪ್ರೀತಿಯ ಮಡದಿಗೆ ಕಾಲ್ಗೆಜ್ಜೆ ತೊಡಿಸಿದ ವೃದ್ಧ
ಹೆರಿಗೆ ನೋವಿನಲ್ಲೂ ಹೆಂಡ್ತಿ ಮೊಗದಲ್ಲಿ ನಗು ಮೂಡಿಸಿದ ಪತಿ
ಇಳಿ ವಯಸ್ಸಿನಲ್ಲಿ ತನ್ನ ಪತ್ನಿಗೆ ಡಿವೋರ್ಸ್ ನೀಡಲು ಮುಂದಾಗಿದ್ದ ವೃದ್ಧ
ಮೊದಲು ನನ್ನ ಹೆಂಡತಿಯನ್ನು ಉಳಿಸಿ, ಅವಳಿಗೆ ಈಜು ಬರುವುದಿಲ್ಲ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ: Video: ಪ್ರೀತಿಯ ಮಡದಿಗೆ ಕಾಲ್ಗೆಜ್ಜೆ ತೊಡಿಸಿದ ವೃದ್ಧ, ಇದುವೇ ನಿಜವಾದ ಪ್ರೀತಿ ನೋಡಿ

ಈ ವಿಡಿಯೋವನ್ನು ಹತ್ತೊಂಬತ್ತು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದು, ಬಳಕೆದಾರರೊಬ್ಬರು ನನ್ನ ತಂದೆ ಸರ್ಕಾರಿ ನೌಕರಿಯಾಗಿದ್ದರು, 1971 ರಲ್ಲಿ ಅವರ ಸಂಬಳ 165 ರೂ ಆಗಿತ್ತು ಎಂದಿದ್ದಾರೆ. ಇನ್ನೊಬ್ಬರು, ಆ ಮೊತ್ತವು ಈಗಿನ 10 ಲಕ್ಷಕ್ಕೆ ಸಮ. ಈಗಿನ ಕಾಲದಲ್ಲಿ ಎಲ್ಲವೂ ದುಬಾರಿಯಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಈಗಿನ ಕಾಲದಲ್ಲಿ ಬಡವರು ಮದ್ವೆ ಆಗೋ ಆಗಿಲ್ಲ. ನಿಮ್ಮ ಕಾಲನೇ ಚೆನ್ನಾಗಿತ್ತು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ