AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ದೇಶ ಸೇವೆಗೆ ಹೊರಟ ಮಗನ ಮುಂದೆ ಅಮ್ಮನ ಕಣ್ಣೀರು, ಕರುಳು ಚುರ್‌ ಎನ್ನುವ ದೃಶ್ಯ

ದೇಶಸೇವೆ ಅನ್ನೋ ಮಾತು ಬಂದ್ರೆ ನಮ್ಮ ಸೈನಿಕರು ದೇಶದ ರಕ್ಷಣೆಗಾಗಿ ಹೋರಾಟ ಮಾಡೋದಕ್ಕೆ ಹಾಗೂ ತಮ್ಮ ಕೆಲಸದ ಸ್ಥಳದಿಂದ ಎಷ್ಟು ಹೊತ್ತಿಗೂ ಕರೆ ಬಂದ್ರು ಹೊರಟು ನಿಲ್ಲುತ್ತಾರೆ. ಹೌದು, ಕೆಲವೊಮ್ಮೆ ದೇಶ ಸೇವೆಗೋಸ್ಕರ ಕುಟುಂಬ, ಸ್ನೇಹಿತರನ್ನು ಕೂಡ ಬಿಟ್ಟು ಹೊರಡುವುದು ಅನಿವಾರ್ಯವಾಗಿರುತ್ತದೆ. ಇದೀಗ ಇಂತಹದ್ದೇ ಭಾವನಾತ್ಮಕ ವಿಡಿಯೋ ವೈರಲ್ ಆಗಿದ್ದು, ಇಲ್ಲಿ ದೇಶ ಸೇವೆಗೆ ಹೊರಟ ಮಗನನ್ನು ತಾಯಿಯೂ ಭಾವನಾತ್ಮಕವಾಗಿ ಬೀಳ್ಕೊಟ್ಟಿದ್ದಾರೆ. ಈ ವಿಡಿಯೋ ನೆಟ್ಟಿಗರ ಕಣ್ಣನ್ನು ಓದ್ದೆಯಾಗಿಸಿದೆ.

Video: ದೇಶ ಸೇವೆಗೆ ಹೊರಟ ಮಗನ ಮುಂದೆ ಅಮ್ಮನ ಕಣ್ಣೀರು, ಕರುಳು ಚುರ್‌ ಎನ್ನುವ ದೃಶ್ಯ
ಹಣೆಗೆ ಮುತ್ತಿಟ್ಟು ಮಗನನ್ನು ದೇಶ ಸೇವೆಗೆ ಕಳುಹಿಸಿದ ತಾಯಿImage Credit source: Instagram
ಸಾಯಿನಂದಾ
|

Updated on: Sep 15, 2025 | 1:17 PM

Share

ದೇಶದ ಗಡಿಯಲ್ಲಿ ನಿಂತು ಮಳೆ, ಚಳಿ ಎನ್ನದೇ ದೇಶವನ್ನು ರಕ್ಷಿಸುವ ಸೈನಿಕರ (Soldier) ಸೇವೆ ಶ್ರೇಷ್ಠವಾದುದು.  ನಿಂತು ತಮ್ಮ ಮಗ ದೇಶದ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾನೆ ಎನ್ನುವುದು ಹೆತ್ತವರಿಗೆ ಹೆಮ್ಮೆಯ ವಿಚಾರ. ಆದರೆ ದೇಶ ಸೇವೆಗೆ ಮಗನನ್ನು ಕಳುಹಿಸಿಕೊಡುವಾಗ ಹೆಮ್ಮೆಯ ಜೊತೆಗೆ ಕಣ್ಣು ಒದ್ದೆಯಾಗುತ್ತದೆ, ಮನಸ್ಸು ಭಾರವಾಗುತ್ತದೆ. ಇದೀಗ ಇಂತಹದ್ದೆ ಭಾವನಾತ್ಮಕ ದೃಶ್ಯಕ್ಕೆ ಈ ವಿಡಿಯೋನೇ ಸಾಕ್ಷಿ. ಹಣೆಗೆ ಮುತ್ತಿಟ್ಟು ಮಗನನ್ನು ದೇಶ ಸೇವೆಗೆ ತಾಯಿಯೊಬ್ಬರು (Mother) ಕಳುಹಿಸಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Itx-shiram ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾದ ಈ ವಿಡಿಯೋದಲ್ಲಿ ಹೆಮ್ಮೆಯ ಮಗನನ್ನು ದೇಶ ಸೇವೆಗೆ ಕಳುಹಿಸಿಕೊಡಲು ಬಸ್ ಸ್ಟ್ಯಾಂಡ್‌ಗೆ ಕುಟುಂಬವೊಂದು ಬಂದಿದೆ. ಈ ವೇಳೆಯಲ್ಲಿ ತಾಯಿಯೂ ಭಾವನಾತ್ಮಕವಾಗಿದ್ದು, ಮಗನ ಕೆನ್ನೆಗೆ, ಹಣೆಗೆ ತಾಯಿ ಮುತ್ತಿಟ್ಟಿದ್ದಾರೆ. ಆ ಬಳಿಕ ಕೈ ಕುಲುಕಿ ಮುದ್ದಿನ ಮಗನನ್ನು ಬೀಳ್ಕೊಡುಗೆ ದೃಶ್ಯವಿದಾಗಿದೆ. ಈ ಸೈನಿಕನ ತಂದೆ ಹಾಗೂ ಕುಟುಂಬದ ಸದಸ್ಯರು ಇರುವುದನ್ನು ನೀವಿಲ್ಲಿ ನೋಡಬಹುದು. ಅಲ್ಲೇ ಇದ್ದವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

ಇದನ್ನೂ ಓದಿ
Image
ಮಗುವನ್ನು ಮಡಿಲಲ್ಲಿ ಕೂರಿಸಿ ಆಟೋ ಓಡಿಸಿ ಜೀವನ ಸಾಗಿಸುತ್ತಿರುವ ಮಹಾತಾಯಿ
Image
ಲವರ್​ ಜತೆ ಹೊರಟ ತಾಯಿಯನ್ನು ಪರಿ ಪರಿಯಾಗಿ ಬೇಡಿದ ಮಕ್ಕಳು
Image
ಮುದ್ದಿನ ಮಗನಿಗೆ ಕಷ್ಟ ಕೊಡದೇ ತಾನೇ ಹೋಮ್ ವರ್ಕ್ ಮಾಡಿದ ಅಮ್ಮ
Image
ಹೆತ್ತವರನ್ನು ಚಾಲಕ ರಹಿತ ಕಾರಿನಲ್ಲಿ ಸುತ್ತಾಡಿಸಿದ ಭಾರತೀಯ ಯುವತಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:Video: ತಾಯಿಗಿಂತ ದೇವರಿಲ್ಲ; ಪುಟ್ಟ ಮಗುವನ್ನು ಮಡಿಲಲ್ಲಿ ಕೂರಿಸಿ ಆಟೋ ಓಡಿಸಿ ಜೀವನ ಸಾಗಿಸುತ್ತಿರುವ ಮಹಾತಾಯಿ

ಈ ವಿಡಿಯೋವನ್ನು ಒಂದು ಲಕ್ಷ ನಲವತ್ತು ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದು ಈ ಭಾವನಾತ್ಮಕ ವಿದಾಯದ ಕ್ಷಣವನ್ನು ನೋಡಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರ ಆ ಅದ್ಭುತವಾದ ಕ್ಷಣವನ್ನು ಸೆರೆ ಹಿಡಿದ್ದಕ್ಕೆ ಥ್ಯಾಂಕ್ಸ್ ಯು ಎಂದಿದ್ದಾರೆ. ಮತ್ತೊಬ್ಬರು ನಮ್ಮ ದೇಶ ಕಾಯೋ ಯೋಧನ ಪ್ರಯಾಣ ಸುಖಕರವಾಗಿದೆ, ನಮಸ್ತೆ ಅಮ್ಮ ಎಂದು ಕಾಮೆಂಟ್ ಮಾಡಿದ್ದಾರೆ. ಅಮ್ಮ ನೀವು ನಿಜಕ್ಕೂ ಪುಣ್ಯವಂತರು, ನಿಮ್ಮ ಮಗ ಗಡಿಯಲ್ಲಿ ನಿಂತು ದೇಶ ಕಾಯುವ ಮೂಲಕ ನೀವು ಹೆಮ್ಮೆ ಪಡುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಇನ್ನೊಬ್ಬರು ಹೇಳಿದರೆ, ಮತ್ತೆ ಕೆಲವರು ಹಾರ್ಟ್ ಸಿಂಬಲ್ ಕಳುಹಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ