Viral Video: ಜಿಂದಾಲ್ ಟವರ್ ಏರಿ 282 ಅಡಿ ಎತ್ತರದಲ್ಲಿ ವ್ಯಕ್ತಿಯ ಅಪಾಯಕಾರಿ ಸಾಹಸ

ವ್ಯಕ್ತಿಯೊಬ್ಬ ಹರಿಯಾಣದ ಹಿಸಾರ್​ನಲ್ಲಿರುವ ಜಿಂದಾಲ್ ಟವರ್ ಏರಿ ಅಪಾಯಕಾರಿ ಸಾಹಸ(Stunt) ಮಾಡಿರುವ ವಿಡಿಯೋ ವೈರಲ್ ಆಗಿದೆ. ರಾಜಸ್ಥಾನದ ಮೋನು ಎಂಬ ಯುವಕ 282 ಅಡಿ ಎತ್ತರದ ಟವರ್ ಹತ್ತಿ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಅಪಾಯಕಾರಿ ಸ್ಟಂಟ್ ಮಾಡಿದ್ದಾರೆ. ಭದ್ರತೆ ಮತ್ತು ಸಾರ್ವಜನಿಕ ಸುರಕ್ಷತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತವಾಗಿದೆ. ಅಧಿಕಾರಿಗಳ ಪ್ರಕಾರ, ಜನವರಿ 18 ರ ಭಾನುವಾರದಂದು ಈ ಘಟನೆ ನಡೆದಿದ್ದು, ಮೋನು ಜಿಂದಾಲ್ ಟವರ್ ಪ್ರವೇಶಿಸಲು ಭದ್ರತಾ ನಿರ್ಬಂಧಗಳನ್ನು ಉಲ್ಲಂಘಿಸಿದ್ದಾರೆ ಎನ್ನಲಾಗಿದೆ.

Viral Video: ಜಿಂದಾಲ್ ಟವರ್ ಏರಿ 282 ಅಡಿ ಎತ್ತರದಲ್ಲಿ ವ್ಯಕ್ತಿಯ ಅಪಾಯಕಾರಿ ಸಾಹಸ
ಸ್ಟಂಟ್

Updated on: Jan 21, 2026 | 10:27 AM

ಹರಿಯಾಣ, ಜನವರಿ 21: ವ್ಯಕ್ತಿಯೊಬ್ಬ ಹರಿಯಾಣದ ಹಿಸಾರ್​ನಲ್ಲಿರುವ ಜಿಂದಾಲ್ ಟವರ್ ಏರಿ ಅಪಾಯಕಾರಿ ಸಾಹಸ(Stunt) ಮಾಡಿರುವ ವಿಡಿಯೋ ವೈರಲ್ ಆಗಿದೆ. ರಾಜಸ್ಥಾನದ ಮೋನು ಎಂಬ ಯುವಕ 282 ಅಡಿ ಎತ್ತರದ ಟವರ್ ಹತ್ತಿ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಅಪಾಯಕಾರಿ ಸ್ಟಂಟ್ ಮಾಡಿದ್ದಾರೆ. ಭದ್ರತೆ ಮತ್ತು ಸಾರ್ವಜನಿಕ ಸುರಕ್ಷತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತವಾಗಿದೆ.
ಅಧಿಕಾರಿಗಳ ಪ್ರಕಾರ, ಜನವರಿ 18 ರ ಭಾನುವಾರದಂದು ಈ ಘಟನೆ ನಡೆದಿದ್ದು, ಮೋನು ಜಿಂದಾಲ್ ಟವರ್ ಪ್ರವೇಶಿಸಲು ಭದ್ರತಾ ನಿರ್ಬಂಧಗಳನ್ನು ಉಲ್ಲಂಘಿಸಿದ್ದಾರೆ ಎನ್ನಲಾಗಿದೆ.

ವೈರಲ್ ಕ್ಲಿಪ್‌ನ ದೃಶ್ಯಗಳು ಆತ ಕಟ್ಟುಗಳ ಮೇಲೆ ಇರಿಸಲಾದ ಗಾಜಿನ ಬಾಟಲಿಗಳ ಮೇಲೆ ಸ್ಟಂಟ್ ಮಾಡಿದ್ದಾರೆ. ಭದ್ರತಾ ಸಾನಗಳಿಲ್ಲದೆ ಕೈಗಳನ್ನು ಬಳಸಿ ಟವರ್​ನ ಹೊರಗಿನ ಚೌಕಟ್ಟಿನಲ್ಲಿ ತಲೆಕೆಳಗಾಗಿ ನೇತಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಪ್ರತ್ಯಕ್ಷದರ್ಶಿಗಳು ಹೇಳುವಂತೆ, ಅವರು ಬಿಯರ್ ಬಾಟಲಿಗಳು ಮತ್ತು ಕ್ಯಾನ್ ತುಂಬಿದ್ದ ಚೀಲವನ್ನು ಹೊತ್ತುಕೊಂಡು ಮೇಲೆ ಹೋಗಿದ್ದರು. ಅದನ್ನು ಸಾಹಸ ಪ್ರದರ್ಶನದ ಸಮಯದಲ್ಲಿ ಬಳಸಿದ್ದಾರೆ. ನೆಲದಿಂದ ನೂರಾರು ಅಡಿ ಎತ್ತರದಲ್ಲಿ ನಡೆಸಲಾದ ಈ ಅಪಾಯಕಾರಿ ಸಾಹಸ ಜೀವಕ್ಕೆ ಅಪಾಯ ತಂದೊಡ್ಡಬಹುದಿತ್ತು.

ಮತ್ತಷ್ಟು ಓದಿ: ಛೀ.. ಥೂ.. ದೆಹಲಿ ಮೆಟ್ರೋ ಪ್ಲಾಟ್​ಫಾರ್ಮ್​ನಲ್ಲಿ ಮೂತ್ರ ವಿಸರ್ಜಿಸಿ ಸಿಕ್ಕಿಬಿದ್ದ ವ್ಯಕ್ತಿ

ಮೋನು ಕೆಳಗೆ ಇಳಿಯಲು ಪ್ರಾರಂಭಿಸುತ್ತಿದ್ದಂತೆ ಜಿಂದಾಲ್ ಟವರ್ ಭದ್ರತಾ ಸಿಬ್ಬಂದಿ ಚಟುವಟಿಕೆಯನ್ನು ಗಮನಿಸಿ ತಕ್ಷಣ ಮಧ್ಯಪ್ರವೇಶಿಸಿದರು. ಆತನನ್ನು ಬಂಧಿಸಿ ನಂತರ ಪೊಲೀಸರಿಗೆ ಹಸ್ತಾಂತರಿಸಲಾಯಿತು. ವಿಚಾರಣೆಯ ಸಮಯದಲ್ಲಿ ಯುವಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ ಮತ್ತು ಲಿಖಿತ ಕ್ಷಮೆಯಾಚಿಸಿದ್ದಾನೆ ಎಂದು ಟವರ್ ಆಪರೇಟರ್ ಕುಲದೀಪ್ ಸಿಂಗ್ ಹೇಳಿದ್ದಾರೆ.

ವಿಡಿಯೋ

ಅಂತಹ ಕೃತ್ಯವನ್ನು ಪುನರಾವರ್ತಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಭರವಸೆ ನೀಡಿದ್ದಾರೆ.
ಭವಿಷ್ಯದಲ್ಲಿ ಇದೇ ರೀತಿಯ ಉಲ್ಲಂಘನೆಗಳನ್ನು ತಡೆಗಟ್ಟಲು ಸ್ಥಳೀಯ ಅಧಿಕಾರಿಗಳು ಒಪಿ ಜಿಂದಾಲ್ ಟವರ್‌ನಲ್ಲಿ ಭದ್ರತಾ ವ್ಯವಸ್ಥೆಗಳ ಪರಿಶೀಲನೆಯನ್ನು ಪ್ರಾರಂಭಿಸಿದ್ದಾರೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ