Video: ಬೈಕ್ ಓಡಿಸುತ್ತಿರುವಾಗಲೇ ಪತ್ನಿ ಕೈಯಲ್ಲಿ ಒದೆ ತಿಂದ ಪತಿ, ವೈರಲ್ ಆಯ್ತು ದೃಶ್ಯ
ಗಂಡ ಹೆಂಡಿರ ನಡುವಿನ ಜಗಳಗಳು ಎಷ್ಟೋ ಸಲ ಬೀದಿಗೆ ಬರುವುದಿದೆ. ದಂಪತಿಗಳು ಬೀದಿಯಲ್ಲೇ ಗುದ್ದಾಡಿ ಕೊಳ್ಳುವ ವಿಡಿಯೋ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಆದರೆ ಇಲ್ಲೊಬ್ಬಳು ಹೆಂಡತಿ ತನ್ನ ಕೋಪವನ್ನೆಲ್ಲಾ ಗಂಡನ ಹಿಂಬದಿ ಕುಳಿತು ಬೈಕ್‌ನಲ್ಲಿ ತೆರಳುತ್ತಿರುವ ವೇಳೆಯೇ ತೀರಿಸಿಕೊಂಡಿದ್ದಾಳೆ. ಬೈಕ್ ಓಡಿಸುತ್ತಿರುವ ಗಂಡನಿಗೆ ಹೆಂಡ್ತಿ ಮನಬಂದಂತೆ ಹೊಡೆಯುತ್ತಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ

ಗಂಡ ಹೆಂಡಿರ (husband and wife) ಜಗಳ ಉಂಡು ಮಲಗುವ ತನಕ ಎಂದು ಹೇಳ್ತಾರೆ. ಆದರೆ ಇದೀಗ ಗಂಡ ಹೆಂಡಿರ ಜಗಳ (fight) ಬೀದಿಗೆ ಬಂದರೆ ಸಮಾಧಾನ ಎನ್ನುವಂತಾಗಿದೆ. ಇಲ್ಲೊಬ್ಬಳು ಪತ್ನಿಗೆ ತನ್ನ ಪತಿಯ ಮೇಲೆ ಎಷ್ಟು ಕೋಪವಿದೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಬೈಕ್ ಹಿಂದೆ ಕುಳಿತಿದ್ದ ಪತ್ನಿಯು ಸಿಕ್ಕಿದ್ದೇ ಚಾನ್ಸ್ ಎಂದು ಪತಿಯ ತಲೆಗೆ ಹೊಡೆಯುತ್ತಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮನೆ ತಲುಪುವಷ್ಟರಲ್ಲಿ ಈತನ ಕಥೆ ಮುಗಿದಂಗೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ತನ್ಮೋಯ್ ಬಾಲ್ (Tanmoy Bal) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪತಿ ಪತ್ನಿಯು ಬೈಕ್‌ನಲ್ಲಿ ಹೋಗುತ್ತಿರುವುದನ್ನು ಕಾಣಬಹುದು. ವ್ಯಕ್ತಿಯೊಬ್ಬ ಬೈಕ್ ಓಡಿಸುತ್ತಿದ್ದು, ಆತನ ಹಿಂದೆ ಪತ್ನಿಯು ಕುಳಿತಿದ್ದಾಳೆ. ಈ ವೇಳೆ ಇಬ್ಬರ ನಡುವ ವಾಗ್ವಾದ ನಡೆದಿದೆ. ಬೈಕ್ ಹಿಂಬದಿ ಕುಳಿತು ಕೊಂಡಿದ್ದ ಪತ್ನಿಯ ಪಿತ್ತ ನೆತ್ತಿಗೇರಿದೆ. ಹಿಂಬದಿಯಿಂದ ಗಂಡನ ತಲೆಗೆ ಬಾರಿಸಿದ್ದಾಳೆ. ಕೊನೆಗೆ ಕೋಪದಲ್ಲೇ ಕೂದಲು ಹಿಡಿದು ಎಳೆದಾಡಿದ್ದಾಳೆ. ಹೆಂಡ್ತಿ ಹೊದೆಯನ್ನು ಸಹಿಸಿಕೊಳ್ಳಲಾಗದೇ ಗಂಡ ಬೈಕ್ ನಿಲ್ಲಿಸುವ ದೃಶ್ಯವನ್ನು ನೀವಿಲ್ಲಿ ನೋಡಬಹುದು. ಹಿಂಬದಿ ಬೈಕ್ ಸವಾರರು ಗಂಡ ಹೆಂಡಿರ ಜಗಳವನ್ನು ನೋಡಿ ನಗುತ್ತಿರುವುದನ್ನು ಕಾಣಬಹುದು. ವಾಹನ ಸವಾರರು ಈ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ:ಸರಿಯಾದ ಸಮಯಕ್ಕೆ ಸಿಂಧೂರ ತಂದು, ನಿಲ್ಲಬೇಕಿದ್ದ ಮದುವೆಯನ್ನು ಸರಾಗವಾಗಿ ನಡೆಯುವಂತೆ ಮಾಡಿದ ಬ್ಲಿಂಕಿಟ್
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಇಂತಹ ಹೆಂಡ್ತಿಯನ್ನು ಹೇಗೆ ಸಹಿಸಿಕೊಳ್ತೀಯಾ ಎಂದು ಕೇಳಿದ್ದಾರೆ. ಮತ್ತೊಬ್ಬರು, ಇಂತಹ ಹೆಂಡ್ತಿ ಸಿಕ್ಕಿದ್ದು ಪುಣ್ಯ ಎಂದು ವ್ಯಂಗ್ಯವಾಡಿದ್ದಾರೆ. ಇನ್ನೊಬ್ಬರು, ನಿಜಕ್ಕೂ ಈ ವ್ಯಕ್ತಿಯ ಪರಿಸ್ಥಿತಿನಾ ನೆನೆಸಿಕೊಂಡ್ರೆ ಬೇಜಾರ್ ಆಗುತ್ತೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:29 pm, Wed, 21 January 26
