AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಬೆಂಗಳೂರಿನ ಈ ಏರಿಯಾದಲ್ಲಿ 2BHK ಮನೆ ಬಾಡಿಗೆ 70 ಸಾವಿರ ರೂ; ವಾಸ್ತವ ಸ್ಥಿತಿ ಬಿಚ್ಚಿಟ್ಟ ಸಾಫ್ಟ್‌ವೇರ್‌ ಇಂಜಿನಿಯರ್

ಬೆಂಗಳೂರಿನಲ್ಲಿ ಸ್ವಂತ ಮನೆ ಬಿಡಿ ಬಾಡಿಗೆ ಮನೆಯಲ್ಲಿ ಇರೋದು ಹೇಳಿದ್ದಷ್ಟು ಸುಲಭ. ಇಲ್ಲಿ ಬಾಡಿಗೆ ಮನೆಯ ದರಗಳು ಕೈಗೆಟುಕದ್ದಂತಾಗಿದೆ. ಸಾಫ್ಟ್‌ವೇರ್‌ ಇಂಜಿನಿಯರ್‌ರೊಬ್ಬರಿಗೆ ಬಾಡಿಗೆ ಮನೆ ವಿಚಾರದಲ್ಲಿ ಕಹಿ ಅನುಭವವಾಗಿದೆ. ಮನೆ ಮಾಲೀಕ ಹೇಳಿದ ಬಾಡಿಗೆ ಕೇಳಿ ಶಾಕ್ ಆಗಿದ್ದಾರೆ. ಈ ಬಗ್ಗೆ ಅವರು ಮಾಡಿದ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ.

Viral: ಬೆಂಗಳೂರಿನ ಈ ಏರಿಯಾದಲ್ಲಿ 2BHK ಮನೆ ಬಾಡಿಗೆ 70 ಸಾವಿರ ರೂ; ವಾಸ್ತವ ಸ್ಥಿತಿ ಬಿಚ್ಚಿಟ್ಟ ಸಾಫ್ಟ್‌ವೇರ್‌ ಇಂಜಿನಿಯರ್
ಸಾಂದರ್ಭಿಕ ಚಿತ್ರImage Credit source: Pinterest
ಸಾಯಿನಂದಾ
|

Updated on:Jan 22, 2026 | 1:00 PM

Share

ಬೆಂಗಳೂರು, ಜನವರಿ 22: ಮಾಯನಗರಿ ಬೆಂಗಳೂರಿಗೆ (Bengaluru) ಕೆಲಸಕ್ಕೆಂದು ಬರುವ ಯುವಕರು ಯುವತಿಯರು ಮೊದಲು ಹುಡುಕುವುದೇ ಬಾಡಿಗೆ ಮನೆಯನ್ನು. ಆದರೆ ಇತ್ತೀಚೆಗಿನ ದಿನಗಳಲ್ಲಿ ಕಡಿಮೆ ಬಾಡಿಗೆಗೆ ಮನೆ ಇರುವ ಸಿಗೋದು ತುಂಬಾನೇ ಕಡಿಮೆ. ಸಾಫ್ಟ್‌ವೇರ್‌ ಇಂಜಿನಿಯರ್‌ರೊಬ್ಬರು ಬೆಂಗಳೂರಿನ ಕಾಡುಬೀಸನಹಳ್ಳಿಯಲ್ಲಿ ಮನೆ ಹುಡುಕುತ್ತಿದ್ದಾಗ ಬಾಡಿಗೆ ಮನೆ ಇರೋದು ತಿಳಿದಿದೆ. ಈ ಖಾಲಿ ಮನೆಯೊಂದಕ್ಕೆ ತೆರಳಿ ಅಲ್ಲಿನ ಮನೆಯ ಮಾಲೀಕರ ಬಳಿ ಬಾಡಿಗೆ ಬಗ್ಗೆ ವಿಚಾರಿಸಿದ್ದಾರೆ. ಆದರೆ ಮನೆ ಮಾಲೀಕ 70 ಸಾವಿರ ರೂ ಬಾಡಿಗೆ ಹೇಳಿದ್ದನ್ನು ಕೇಳಿ ಶಾಕ್ ಆಗಿದ್ದಾರೆ. ದುಬಾರಿ ಬಾಡಿಗೆ ಮನೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ಅಸಮಾಧಾನ ಹೊರಹಾಕಿದ್ದಾರೆ.

ರಾಜ್ವಿ (rajvi) ಹೆಸರಿನ ಎಕ್ಸ್ ಖಾತೆಯಲ್ಲಿ ಬೆಂಗಳೂರಿನ ದುಬಾರಿ ಬಾಡಿಗೆ ಮನೆಯ ಬಗ್ಗೆ ಪೋಸ್ಟ್ ಮಾಡಲಾಗಿದೆ. ಬೆಂಗಳೂರಿನ ಮನೆಗಳ ಬಾಡಿಗೆ ದರಗಳು ಹೆಚ್ಚಾಗಿವೆ. ಈ ದರಗಳು ಮುಂಬೈಗೂ ಸ್ಪರ್ಧೆ ನೀಡುವಂತಿವೆ. 70,000 ರೂಪಾಯಿ ಬಾಡಿಗೆಗೆ ಸೆಮಿ-ಫರ್ನಿಶ್ಡ್ 2BHK ಕೇಳುತ್ತಾರೆ ಅಂದರೆ ಏನು ಅರ್ಥ? ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ಇದನ್ನೂ ಓದಿ:ಬೆಂಗಳೂರಿನಲ್ಲಿ 90 ಲಕ್ಷ ರೂ ಉತ್ತಮ ಸಂಬಳವೇ: ಅನಿವಾಸಿ ಭಾರತೀಯ ಹೀಗೆ ಕೇಳಿದ್ದೇಕೆ?

ಜನವರಿ 20 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಮೂವತ್ತೈದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಪೂರ್ವ ಬೆಂಗಳೂರು ಬಿಟ್ಟು, ಬೇರೆ ಕಡೆ 2ಬಿ ಹೆಚ್ ಕೆಗೆ 25 ರಿಂದ 30 ಸಾವಿರ ರೂಪಾಯಿ ಬಾಡಿಗೆ ಇದೆ. ಬೆಂಗಳೂರಿನ ಒಂದು ಪ್ರಾಂತ್ಯದಿಂದ ಮತ್ತೊಂದು ಪ್ರಾಂತ್ಯಕ್ಕೆ ಬಾಡಿಗೆ ದರಗಳು ಬದಲಾಗುತ್ತವೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಬೆಂಗಳೂರಿನ ಮನೆ ಮಾಲೀಕರು ಆಸೆ ಬುರುಕರು ಎಂದಿದ್ದಾರೆ. ಇನ್ನೊಬ್ಬರು, ಬಾಡಿಗೆ ಮನೆಯಲ್ಲಿ ಇರೋ ಬದಲು ಸಾಲ ಮಾಡಿ ಮನೆ ಖರೀದಿ ಮಾಡಿದ್ರೆ ಸ್ವಂತ ಮನೆಯಾದ್ರೂ ಆಗುತ್ತೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:55 pm, Thu, 22 January 26