Optical Illusion: ನೀವು ಜಾಣರೇ, ಈ ಚಿತ್ರದಲ್ಲಿ ಅಡಗಿರುವ ಜಿರಾಫೆಯನ್ನು ಕಂಡು ಹಿಡಿಯಬಲ್ಲಿರಾ
ಮೆದುಳಿಗೆ ಕಸರತ್ತು ನೀಡುವ ಒಗಟುಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಈ ಟ್ರಿಕ್ಕಿ ಒಗಟುಗಳನ್ನು ಕ್ಷಣಾರ್ಧದಲ್ಲಿ ಬಿಡಿಸಲು ಸಾಧ್ಯವಾದರೆ ನೀವು ಬುದ್ಧಿವಂತರು ಎಂದು ಖಚಿತವಾಗುತ್ತದೆ. ಆದರೆ ಇದೀಗ ಈ ಇಲ್ಯೂಷನ್ ಚಿತ್ರದಲ್ಲಿ ಜಿರಾಫೆ ಎಲ್ಲಿದೆ ಎಂದು ಪತ್ತೆ ಹಚ್ಚಬೇಕು. ನಿಮ್ಮ ಕಣ್ಣಿಗೆ ಈ ಪ್ರಾಣಿ ಬಿದ್ದರೆ ನಿಮ್ಮ ವೀಕ್ಷಣಾ ಸಾಮರ್ಥ್ಯ ಅತ್ಯುತ್ತಮವಾಗಿದೆ ಎನ್ನುವುದು ತಿಳಿಯುತ್ತದೆ.

ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳು ಹೆಸರೇ ಹೇಳುವಂತೆ ಭ್ರಮೆಯನ್ನು ಉಂಟು ಮಾಡುತ್ತವೆ. ಒಂದು ಕ್ಷಣ ನಿಮ್ಮನ್ನು ಗೊಂದಲಕ್ಕೀಡು ಮಾಡುತ್ತವೆ. ಆದರೆ ಕೆಲವರು ಇಂತಹ ಟ್ರಿಕ್ಕಿ ಒಗಟುಗಳನ್ನು ಬಿಡಿಸುವಲ್ಲಿ ಯಶಸ್ವಿಯಾಗುತ್ತಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಚಿತ್ರದಲ್ಲಿ ಜಿರಾಫೆಯನ್ನು ಎಲ್ಲಿದೆ ಎಂದು ಐದು ಸೆಕೆಂಡುಗಳಲ್ಲಿ ಹೇಳಬೇಕು. ಈ ಒಗಟು ಬಿಡಿಸಲು ನೀವು ರೆಡಿ ಇದ್ದೀರಾ.
ಈ ಚಿತ್ರ ನೋಡಿದಾಗ ನಿಮಗೇನು ಕಾಣಿಸಿತು?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ನೀವು ನೋಡಿರಬಹುದು. ಈ ಚಿತ್ರದಲ್ಲಿ ಮೂರು ಮರಗಳನ್ನು ಕಾಣಬಹುದು. ಇಲ್ಲಿ ಸೂರ್ಯಾಸ್ತದ ಸುಂದರ ನೋಟವಿದೆ. ಈ ಆಕರ್ಷಕ ಚಿತ್ರದಲ್ಲಿ ಜಿರಾಫೆ ಎಲ್ಲಿದೆ ಎಂದು ಹುಡುಕುವುದೇ ನಿಮ್ಮ ಮುಂದಿರುವ ಸವಾಲು. ಐದು ಸೆಕೆಂಡುಗಳೊಳಗೆ ಜಿರಾಫೆಯನ್ನು ಹುಡುಕಲು ಸಾಧ್ಯವೇ ಎಂದು ನೋಡಿ. ನೀವು ಈ ಸವಾಲು ಸ್ವೀಕರಿಸುವಿರಾ.
ಇದನ್ನೂ ಓದಿ: ನೀವು ಬುದ್ಧಿವಂತರೇ, ಈ ಚಿತ್ರದಲ್ಲಿರುವ ಬೆಕ್ಕನ್ನು ಹುಡುಕಿ ನೋಡೋಣ
ಜಿರಾಫೆ ನಿಮ್ಮ ಕಣ್ಣಿಗೆ ಬಿದ್ದಿತೇ?
ಮೊದಲಿಗೆ ಈ ಚಿತ್ರ ಒಗಟು ಭೇದಿಸುವುದು ಸುಲಭವೆಂದು ಭಾವಿಸಿರಬಹುದು. ಆದರೆ ಸಮಯ ಕಳೆದಂತೆ ಟ್ರಿಕ್ಕಿ ಎಂದೆನಿಸುತ್ತದೆ. ಈ ಚಿತ್ರವನ್ನು ಎಷ್ಟೇ ಸೂಕ್ಷ್ಮವಾಗಿ ಗಮನಿಸಿದ್ರೂ ಜಿರಾಫೆಯನ್ನು ಗುರುತಿಸಲು ಸಾಧ್ಯವಾಗದೇ ಹೋಗಬಹುದು. ಆದರೆ ಈ ಕೆಳಗಿನ ಚಿತ್ರದಲ್ಲಿ ಜಿರಾಫೆ ಎಲ್ಲಿದೆ ಎಂದು ನಾವು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:14 am, Fri, 23 January 26
