ಇತ್ತೀಚಿನ ದಿನಗಳಲ್ಲಿ ಮಕ್ಕಳು ತಮ್ಮ ಕೆಲಸ, ಬಿಸಿನೆಸ್ಗಳಲ್ಲಿ ಬ್ಯುಸಿಯಾಗಿ, ತಮ್ಮ ಹೆತ್ತವರನ್ನು ಖುಷಿಖುಷಿಯಾಗಿ ನೋಡಿಕೊಳ್ಳುವುದರಲ್ಲಿ ಎಡವುತ್ತಿದ್ದಾರೆ, ಅದೆಷ್ಟೋ ಜನ ಹೆತ್ತವರು ಭಾರ ಎಂಬ ಕಾರಣಕ್ಕೆ, ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ತಳ್ಳಿಬಿಡುತ್ತಾರೆ. ಇದೇ ಕಾರಣದಿಂದ ಇಂದು ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವರು ಹೆತ್ತವರನ್ನು ಮನೆಯಲ್ಲಿಯೇ ಇಟ್ಟುಕೊಂಡು ಅವರಿಗೆ ಚುಚ್ಚು ಮಾತುಗಳನ್ನಾಡುತ್ತಾ, ಪ್ರತಿನಿತ್ಯ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ. ಅದ್ರಲ್ಲೂ ಇನ್ನೂ ಕೆಲವು ಮಹಾನೂಭಾವರು ಹೆತ್ತು ಹೊತ್ತು ಸಾಕಿದಂತಹ ವಯಸ್ಸಾದ ತಂದೆ ತಾಯಿಯ ಮೇಲೆಯೇ ಕೈ ಮಾಡುತ್ತಾರೆ. ಇದಕ್ಕೆ ಉದಾಹರಣೆಯೆಂಬಂತೆ ಇಲ್ಲೊಂದು ಘಟನೆ ನಡೆದಿದ್ದು, ವಿಕೃತ ಮನಸ್ಸಿನ ಮಹಿಳೆಯೊಬ್ಬಳು, ತನ್ನ ಅತ್ತೆಯ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಆಕೆಯ ಪುಟ್ಟ ಮಗಳ ಕೈಯಿಂದಲೂ ಹಿರಿ ಜೀವದ ಮೇಲೆ ಹಲ್ಲೆ ನಡೆಸಿದ್ದಾಳೆ. ಈ ಘಟನೆಯ ಕುರಿತ ವಿಡಿಯೋ ಇದೀಗ ವೈರಲ್ ಆಗಿದ್ದು, ಆ ಮಹಿಳೆಯನ್ನು ಬಂಧಿಸಬೇಕು ಎಂದು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಅಮಾನವೀಯ ಘಟನೆ ಕೇರಳದಲ್ಲಿ ನಡೆದಿದ್ದು, ದೀಪಿಕಾ ನಾರಾಯಣ ಭಾರದ್ವಾಜ್ (DeepikaBhardwaj) ಎಂಬವರು ಈ ವಿಡಿಯೋವನ್ನು ತಮ್ಮ X ಖಾತೆಯಲ್ಲಿ ಹಂಚಿಕೊಂಡು, “ಈ ಸಮಾಜದಲ್ಲಿ ಹಿರಿಯರ ಮೇಲಿನ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನೋಡಿ ಇಲ್ಲೊಬ್ಬಳು ಮಹಿಳೆ ಹಿರಿ ಜೀವದ ಮೇಲೆ ಹಲ್ಲೆ ನಡಸಿದ್ದಲ್ಲದೆ ತನ್ನ ಮಕ್ಕಳಿಗೂ ಇದೇ ಸಂಸ್ಕಾರವನ್ನು ಕಲಿಸಿಕೊಡುತ್ತಿದ್ದಾಳೆ, ದಯವಿಟ್ಟು ಆ ಮಹಿಳೆಯನ್ನು ಸಂಬಂಧಪಟ್ಟ ಪೋಲಿಸರು ಬಂಧಿಸಬೇಕು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವಿಡಿಯೋದಲ್ಲಿ ವೃದ್ಧೆಯೊಬ್ಬರು ನಿಧಾನಕ್ಕೆ ಬಂದು ಸೋಫಾದ ಮೇಲೆ ಕುಳಿತುಕೊಳ್ಳುತ್ತಾರೆ. ಇದನ್ನು ಗಮನಿಸಿದ ವೃದ್ಧೆಯ ಮೊಮ್ಮಗಳು, ಹಿರಿ ಜೀವವನ್ನು ಸೋಫಾದಿಂದ ತಳ್ಳಿ ಕೆಳ ಹಾಕಲು ಪ್ರಯತ್ನಿಸುತ್ತಾಳೆ. ಇಷ್ಟೆಲ್ಲ ಹಿಂಸೆ ಕೊಟ್ರೂ ಕೂಡ ಮೊಮ್ಮಗಳ ಮೇಲೆ ಆ ಅಜ್ಜಿ ರೇಗಾಡಲಿಲ್ಲ. ಇನ್ನೊಂದು ಬಾರಿ ಆ ಹುಡುಗಿ, ವೃದ್ಧೆಗೆ ಕಿರುಕುಳ ನೀಡಲು ಬರುತ್ತಾಳೆ. ಆ ಸಂದರ್ಭದಲ್ಲಿ ಮಗವಿನ ತಾಯಿಯಾದವಳು ತನ್ನ ಮಗುವಿಗೆ ಬುದ್ಧಿಮಾತು ಹೇಳದೆ, ಆ ಹಿರಿ ಜೀವಕ್ಕೆ ನೀನು ಇಲ್ಲಿಂದ ತೊಲಗಿ ಹೋಗು ಅಂತೆಲ್ಲಾ ಕಠೋರವಾಗಿ ಬೈಯುತ್ತಾ, ವೃದ್ಧೆಯನ್ನು ಸೋಫಾದಿಂದ ತಳ್ಳಿ ಕೆಳಗೆ ಹಾಕಿದ್ದು ಮಾತ್ರವಲ್ಲದೆ, ಇದನ್ನೆಲ್ಲಾ ವಿಡಿಯೋ ಮಾಡುತ್ತಿರುವುದನ್ನು ಗಮನಿಸಿದ ಆಕೆ ವಿಕೃತವಾಗಿ ಖುಷಿಪಟ್ಟು ಬಟ್ಟೆಯನ್ನು ಮೇಲೆತ್ತಿ, ಅಸಹ್ಯ ರೀತಿಯಲ್ಲಿ ವರ್ತಿಸುವ ದೃಶ್ಯವಾಳಿಯನ್ನು ಕಾಣಬಹುದು. ಇಂತಹ ಕ್ರೂರ ಜನಗಳ ಮಧ್ಯೆ ಪಾಪ ಆ ಹಿರಿ ಜೀವ ಹೇಗೆ ಜೀವನ ನಡೆಸಿತ್ತೋ, ಎಂದು ಹಲವರು ಮರುಕ ವ್ಯಕ್ತಪಡಿಸಿದ್ದಾರೆ.
Abuse of elderly is increasing so much in society. Such treatment is sick to say the least. This woman should be arrested if she hasn’t already been. What’s really disturbing is how she’s training even the child to abuse the old lady. Kindly tag policepic.twitter.com/kWI1ysNrb9
— Deepika Narayan Bhardwaj (@DeepikaBhardwaj) December 14, 2023
ಡಿಸೆಂಬರ್ 14 ರಂದು ಹಂಚಿಕೊಳ್ಳಲಾದ ಈ ವಿಡಿಯೋ 456.1K ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು “ಮುಂದೆ ಆ ಕ್ರೂರ ಹೆಂಗಸಿನ ಮಗಳು ಕೂಡಾ ಆಕೆಯೊಂದಿಗೆ ಇದೇ ರೀತಿ ನಡೆದುಕೊಳ್ಳುತ್ತಾಳೆ” ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು “ಈ ಮಹಿಳೆ ತನ್ನ ವೃದ್ಧಾಪ್ಯದಲ್ಲಿ ಇದಕ್ಕಿಂತಲೂ ಕೆಟ್ಟ ಪರಿಸ್ಥಿತಿಯನ್ನು ಎದುರಿಸಲಿದ್ದಾಳೆ” ಎಂದು ಶಾಪ ಹಾಕಿದ್ದಾರೆ. ಇನ್ನೂ ಅನೇಕರು ಈ ಕೃತ್ಯವೆಸಗಿದ ಮಹಿಳೆಯನ್ನು ಬಂಧಿಸಬೇಕು ಎಂದು ಕಮೆಂಟ್ಸ್ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ: ವಿಶ್ವದ ಅತಿ ಎತ್ತರ ಮತ್ತು ಕುಳ್ಳಗಿನ ವ್ಯಕ್ತಿಗಳ ಭೇಟಿ ಹೇಗಿತ್ತು ನೋಡಿ?
ವಿಡಿಯೋ ವೈರಲ್ ಆಗುತ್ತಿದ್ದಂತೆ, ಹಿರಿ ಜೀವದ ಜೊತೆಗೆ ಅಮಾನವೀಯವಾಗಿ ವರ್ತಿಸಿದ ಆ ಕ್ರೂರಿ ಮಹಿಳೆಯನ್ನು ಕೇರಳ ಪೋಲಿಸರು ಬಂಧಿಸಿದ್ದು, ಈ ಕುರಿತ ಪೋಸ್ಟ್ ಒಂದನ್ನು ಕೇರಳ ಪೋಲಿಸಿದರು ತಮ್ಮ ಅಧೀಕೃತ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೇರಳ ಪೋಲಿಸರ ಈ ಉತ್ತಮ ಕಾರ್ಯವನ್ನು ಹಲವರು ಶ್ಲಾಘಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ: