AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವಿಶ್ವದ ಅತಿ ಎತ್ತರ ಮತ್ತು ಕುಳ್ಳಗಿನ ವ್ಯಕ್ತಿಗಳ ಭೇಟಿ ಹೇಗಿತ್ತು ನೋಡಿ? 

ವಿಶ್ವದ ಅತೀ ಎತ್ತರದ ವ್ಯಕ್ತಿ ಎಂದು ಗಿನ್ನೆಸ್ ದಾಖಲೆ ಮಾಡಿದಂತಹ ಟರ್ಕಿಯ ಸುಲ್ತಾನ್ ಕೋಸೆನ್ ಅವರ ಜನ್ಮದಿನದ ಅಂಗವಾಗಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ಅಧೀಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಶ್ವದ ಎತ್ತರದ ವ್ಯಕ್ತಿ  ವಿಶ್ವದ ಅತೀ ಕುಳ್ಳಗಿನ ವ್ಯಕ್ತಿಯನ್ನು ಭೇಟಿಯಾದಂತಹ ಸುಂದರ ಕ್ಷಣದ ವಿಡಿಯೋವನ್ನು ಹಂಚಿಕೊಂಡಿದ್ದು, ಇದೀಗ ಈ ವಿಡಿಯೋ ಸಖತ್ ವೈರಲ್ ಆಗಿದೆ.

Viral Video: ವಿಶ್ವದ ಅತಿ ಎತ್ತರ ಮತ್ತು ಕುಳ್ಳಗಿನ ವ್ಯಕ್ತಿಗಳ ಭೇಟಿ ಹೇಗಿತ್ತು ನೋಡಿ? 
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Dec 14, 2023 | 6:13 PM

Share

ನೀವು ಎಂದಾದರೂ ವಿಶ್ವದ ಅತೀ ಎತ್ತರದ ಮನುಷ್ಯ,   ವಿಶ್ವದ ಅತೀ ಕುಳ್ಳಗಿನ ವ್ಯಕ್ತಿಯನ್ನು ಭೇಟಿಯಾಗಿದ್ದನ್ನು ನೋಡಿದ್ದೀರಾ? ಹಾಗಿದ್ದರೆ ಈ ವೈರಲ್ ವಿಡಿಯೋವನ್ನೊ ನೋಡಿ… ವಿಶ್ವದ ಅತಿ ಎತ್ತರದ ವ್ಯಕ್ತಿ ಎಂದು ಗಿನ್ನೆಸ್ ದಾಖಲೆ ಮಾಡಿದಂತಹ ಟರ್ಕಿಯ  ಸುಲ್ತಾನ್ ಕೋಸೆನ್ ಅವರು ಡಿಸೆಂಬರ್ 10 ರಂದು 41 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ, ಇವರ ಜನ್ಮದಿನದ ಅಂಗವಾಗಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ತನ್ನ ಅಧೀಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ  ವಿಡಿಯೋವೊಂದನ್ನು ಹರಿಬಿಟ್ಟಿದ್ದು, ಈ ವಿಡಿಯೋದಲ್ಲಿ ವಿಶ್ವದ ಅತಿ ಎತ್ತರದ ವ್ಯಕ್ತಿ, ವಿಶ್ವದ ಅತೀ ಕುಳ್ಳಗಿನ ವ್ಯಕ್ತಿಯನ್ನು ಭೇಟಿಯಾದಂತಹ ಸುಂದರ ಕ್ಷಣವನ್ನು ಕಣ್ತುಂಬಿಕೊಳ್ಳಬಹುದು.

ಗಿನ್ನೆಸ್ ವರ್ಲ್ಡ್  ರೆಕಾರ್ಡ್ಸ್ ತನ್ನ  ಅಧೀಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಸುಂದರ ವಿಡಿಯೋವನ್ನು ಹಂಚಿಕೊಂಡು ಸುಲ್ತಾನ್ ಕೊಸೆನ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯವನ್ನು ಕೋರಿದೆ.   ವಿಡಿಯೋದಲ್ಲಿ ವಿಶ್ವದ ಅತಿ ಎತ್ತರದ ವ್ಯಕ್ತಿ ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ತನ್ನದಾಗಿಸಿಕೊಂಡಂತಹ   ಟರ್ಕಿಯ ಸುಲ್ತಾನ್ ಕೋಸೆನ್ ಮತ್ತು ವಿಶ್ವದ ಅತ್ಯಂತ ಕುಳ್ಳಗಿನ ವ್ಯಕ್ತಿ ಎಂಬ ಗಿನ್ನೆಸ್ ದಾಖಲೆಯನ್ನು ಮಾಡಿದಂತಹ  ನೇಪಾಳದ ಚಂದ್ರ  ಬಹದ್ದೂರ್ ಡಾಂಗಿ ಅವರು ಮೊದಲ ಬಾರಿಗೆ ಒಬ್ಬರನ್ನೊಬ್ಬರು ಪರಸ್ಪರ  ಭೇಟಿಯಾದ ಕ್ಷಣವನ್ನು ಕಾಣಬಹುದು.

ವೈರಲ್​​ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ:

ಟರ್ಕಿಯ ಸುಲ್ತಾನ್ ಕೊಸೆನ್  8.23 ಅಡಿ ಎತ್ತರವಿದ್ದರೆ, ಚಂದ್ರ ಬಹದ್ದೂರ್ ಡಾಂಗಿ 1.8 ಅಡಿ ಎತ್ತರವಿದ್ದಾರೆ. ಇವರಿಬ್ಬರು ಮೊದಲ ಬಾರಿಗೆ 2014 ರಲ್ಲಿ  ಬ್ರಿಟನಿನ ಹೌಸ್ ಆಫ್ ಕಾಮನ್ಸ್ ಎದುರು ಪರಸ್ಪರ ಭೇಟಿಯಾಗಿದ್ದರು. ಈ ಭೇಟಿಯ ಸುಂದರ ಕ್ಷಣದ ವಿಡಿಯೋವನ್ನು ಸುಲ್ತಾನ್ ಕೊಸೆನ್ ಅವರ ಜನ್ಮ ದಿನದ ಅಂಗವಾಗಿ ಡಿಸೆಂಬರ್ 10 ರಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್  ತನ್ನ ಅಧೀಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ: ಚಲಿಸುತ್ತಿರುವ ಆಟೋದಲ್ಲಿ ಸ್ಟಂಟ್ : ಇಂತವರ ಹುಚ್ಚಾಟದಿಂದ ಬಡ ಜೀವಗಳಿಗೆ ಅಪಾಯ

ಡಿಸೆಂಬರ್  10 ರಂದು ಹಂಚಿಕೊಳ್ಳಲಾದ ಈ ವಿಡಿಯೋ  2.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ  118 ಸಾವಿರ ಲೈಕ್​ ಪಡೆದುಕೊಂಡಿದೆ. ಅನೇಕರು ಈ ಬಗ್ಗೆ ಕಮೆಂಟ್​​​ ಕೂಡ ಮಾಡಿದ್ದಾರೆ. ಹಾಗೂ ಅನೇಕರು ಸುಲ್ತಾನ್ ಕೋಸೆನ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಸಹ ಕೋರಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ: