Video: ತಾಯಿಗಿಂತ ದೇವರಿಲ್ಲ; ಪುಟ್ಟ ಮಗುವನ್ನು ಮಡಿಲಲ್ಲಿ ಕೂರಿಸಿ ಆಟೋ ಓಡಿಸಿ ಜೀವನ ಸಾಗಿಸುತ್ತಿರುವ ಮಹಾತಾಯಿ

ತಾಯಿ ಪ್ರೀತಿ, ಕಾಳಜಿ ಹಾಗೂ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತಮ್ಮ ಕಂದಮ್ಮನಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ಜೀವವಿದ್ದರೆ ಅದು ತಾಯಿ ಮಾತ್ರ. ಇದಕ್ಕೆ ಈ ವಿಡಿಯೋನೇ ಸಾಕ್ಷಿ. ಹೌದು ಇಲ್ಲೊಬ್ಬಳು ತಾಯಿ ಪುಟ್ಟ ಮಗುವನ್ನು ಮಡಿಲಲ್ಲಿ ಕೂರಿಸಿ ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದಾಳೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದ್ದು ತಾಯಿ ತ್ಯಾಗಕ್ಕೆ ಯಾವುದು ಸಾಟಿಯಿಲ್ಲ ಎಂದಿದ್ದಾರೆ.

Video: ತಾಯಿಗಿಂತ ದೇವರಿಲ್ಲ; ಪುಟ್ಟ ಮಗುವನ್ನು ಮಡಿಲಲ್ಲಿ ಕೂರಿಸಿ ಆಟೋ ಓಡಿಸಿ ಜೀವನ ಸಾಗಿಸುತ್ತಿರುವ ಮಹಾತಾಯಿ
ಕಂದಮ್ಮನಿಗಾಗಿ ತಾಯಿಯ ಹೋರಾಟ
Image Credit source: Instagram

Updated on: Sep 12, 2025 | 12:49 PM

ತಾಯಿ (mother) ಪ್ರೀತಿಯೇ ಹಾಗೇ… ಆಕೆ ನಿಷ್ಕಲ್ಮಶ ಪ್ರೀತಿ, ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ತನ್ನ ಮಕ್ಕಳಿಗಾಗಿ ಆಕೆ ಎಂತಹ ಸಾಹಸಕ್ಕೂ ತಯಾರಿರುತ್ತಾಳೆ. ಸಮಾಜವನ್ನು ಎದುರು ಹಾಕಿಕೊಳ್ಳಲು ಸಿದ್ಧವಿರುತ್ತಾಳೆ. ಬದುಕಿನ ಬಂಡಿ ಸಾಗಿಸಲು ಎಂತಹ ಕೆಲಸ ಮಾಡಲು ಸಿದ್ಧವಿರುತ್ತಾಳೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ತಾಯಿಯೊಬ್ಬಳು ತನ್ನ ಪುಟ್ಟ ಕಂದಮ್ಮನನ್ನು ಎದೆಗೆ ಅಪ್ಪಿಕೊಂಡು ಆಟೋ (auto) ಓಡಿಸಿ ಬದುಕಿನ ಬಂಡಿ ಸಾಗಿಸುತ್ತಿದ್ದಾಳೆ. ಈ ಭಾವನಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕಂದಮ್ಮನಿಗಾಗಿ ತಾಯಿಯ ಹೋರಾಟ

come-learndrivingskills ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಮಗುವನ್ನು ಮಡಿಲಿನಲ್ಲಿ ಕೂರಿಸಿ, ಎದೆಗೆ ಅಪ್ಪಿಕೊಂಡು, ಆಟೋ ಓಡಿಸುತ್ತಿದ್ದಾಳೆ. ಬದುಕಿಗಾಗಿ ಆಟೋ ಓಡಿಸುವ ಕಾಯಕವನ್ನು ಅವಲಂಬಿಸಿಕೊಂಡಿರುವುದನ್ನು ಕಾಣಬಹುದು. ಟ್ರಾಫಿಕ್ ನಡುವೆ ಆಟೋ ನಿಂತಿದ್ದು, ಈ ಕಂದಮ್ಮನನ್ನು ಮುದ್ದಿಸುತ್ತಿದ್ದಾಳೆ.

ಇದನ್ನೂ ಓದಿ
ಎದೆಯ ಮೇಲೆ ಮಲಗಿರುವ ಪುಟ್ಟ ಪ್ರಪಂಚ, ಜೀವನ ನಿರ್ವಹಣೆಗಾಗಿ ಈ ಆಟೋ
ಹೆರಿಗೆ ನೋವಿನಲ್ಲೂ ಹೆಂಡ್ತಿ ಮೊಗದಲ್ಲಿ ನಗು ಮೂಡಿಸಿದ ಪತಿ
ಲವರ್​ ಜತೆ ಹೊರಟ ತಾಯಿಯನ್ನು ಪರಿ ಪರಿಯಾಗಿ ಬೇಡಿದ ಮಕ್ಕಳು
ಮುದ್ದಿನ ಮಗನಿಗೆ ಕಷ್ಟ ಕೊಡದೇ ತಾನೇ ಹೋಮ್ ವರ್ಕ್ ಮಾಡಿದ ಅಮ್ಮ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:Video: ಮಡಿಲಿನಲ್ಲಿ ಕಂದಮ್ಮನನ್ನು ಮಲಗಿಸಿಕೊಂಡು ಆಟೋ ಓಡಿಸಿ ಜೀವನ ಸಾಗಿಸುವ ಬೆಂಗಳೂರಿನ ಆಟೋ ಡ್ರೈವರ್

ಈ ವಿಡಿಯೋ ಇದುವರೆಗೆ ಒಂಬತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದ್ದು ಬಳಕೆದಾರರೊಬ್ಬರು ಸಾವಿರ ಸಾರಿ ಚಿಂತಿಸಿದರೂ, ನಿನ್ನ ಪ್ರೀತಿಯ ಸಾಟಿಗೊಂದು ಪದವಾದರೂ ಸಿಗಬಹುದೇ? ಎಂದು ಹೇಳಿದ್ದಾರೆ. ಸಂಸಾರ ಎಂಬ ಯುದ್ಧಕ್ಕೆ ಕೃಷ್ಣನಂತೆ ಏರಿದಳು ಸಾರಥಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಈ ಪ್ರಪಂಚದಲ್ಲಿ ಬೆಲೆ ಕಟ್ಟಲಾಗದ ಪ್ರೀತಿ ಅಂದ್ರೆ ಅದು ತಾಯಿಯ ಪ್ರೀತಿ ಮಾತ್ರ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ