ಅರ್ಮೇನಿಯಾದ ಯೆರೆವಾನ್‌ನ ಹಮಾಜಾಸ್ಪ್ ಹ್ಲೋಯಾನ್ ಅವರು ಹೆಲಿಕಾಪ್ಟರ್‌ನಿಂದ ಪುಲ್ ಅಪ್‌ಗಳನ್ನು ಪ್ರದರ್ಶಿಸುವ ಮೂಲಕ ವಿಶ್ವ ದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಹೊಸ ಹೊಸ ಸ್ಟಂಟ್ ಮಾಡಿ ಪೋಸ್ಟ್ ಮಾಡುವುದು ಹೆಚ್ಚಾಗುತ್ತದೆ. ಆದರೆ ನೀವು ಅಂತಹ ಪೋಸ್ಟ್ಗಳಿಗೆ ಪ್ರಭಾವಿತರಾಗಿ ಎಂದಿಗೂ ಮುಂಜಾಗ್ರತಾ ಕ್ರಮ ಇಲ್ಲದೆ ಯಾವುದೇ ಸ್ಟಂಟ್ಗಳನ್ನು ಮಾಡಲು ಪ್ರಯತ್ನಿಸಬೇಡಿ.
ಸಾಮಾನ್ಯವಾಗಿ ಪುಶ್ ಅಪ್, ಪುಲ್ ಅಪ್‌ಗಳನ್ನು ಜಿಮ್ಗಳಲ್ಲಿ ಅಥವಾ ಮನೆಯಲ್ಲಿ ಮಾಡಿದರೆ, ಇಲ್ಲೊಬ್ಬ ಹೆಲಿಕಾಪ್ಟರ್‌ನಲ್ಲಿ ನೇತಾಡಿಕೊಂಡು ಪುಲ್ ಅಪ್‌ಗಳನ್ನು ಮಾಡಿ ವಿಶ್ವ ದಾಖಲೆ ಬರೆದ್ದಿದ್ದಾನೆ. ಇಂತಹ ಸಾಹಸ ಇದೇ ಮೊದಲೇನಲ್ಲಾ , ಆದರೆ ಈತ ಕೇವಲ ಒಂದೇ ನಿಮಿಷದಲ್ಲಿ 32 ಪುಲ್-ಅಪ್‌ಗಳನ್ನು ಮಾಡಿ ವಿಶ್ವದ ಗಮನ ಸೆಳೆದ್ದಿದ್ದಾನೆ. ಹೆಲಿಕಾಪ್ಟರ್‌ನಿಂದ ಪುಲ್ ಅಪ್‌ಗಳನ್ನು ಪ್ರದರ್ಶಿಸುವ ವಿಡಿಯೋ ಇಲ್ಲಿದೆ ನೋಡಿ.
ಇದನ್ನೂ ಓದಿ: 52 ವರ್ಷದ ಮಹಿಳೆಯ ಎನರ್ಜಿಟಿಕ್ ಡಾನ್ಸ್ಗೆ ನೆಟ್ಟಿಗರು ಫಿದಾ
ಅರ್ಮೇನಿಯಾದ ರಾಜಧಾನಿ ಯೆರೆವಾನ್‌ನಲ್ಲಿ, ಹೆಲಿಕಾಪ್ಟರ್‌ನಲ್ಲಿ ನೇತಾಡಿಕೊಂಡು ಒಂದು ನಿಮಿಷದಲ್ಲಿ 32 ಪುಲ್-ಅಪ್‌ಗಳನ್ನು ಪೂರ್ಣಗೊಳಿಸುವ ಮೂಲಕ, ಅಥ್ಲೀಟ್ ಈ ಹಿಂದಿನ ವಿಶ್ವ ದಾಖಲೆಯನ್ನು ಮುರಿದ್ದಿದ್ದಾರೆ. ಇವರು ಬಹು ಗಿನ್ನೆಸ್ ವಿಶ್ವ ದಾಖಲೆಯನ್ನು ಹೊಂದಿರುವ ರೋಮನ್ ಸಹರಾದ್ಯಾನ್ ಅವರಿಂದ ತರಬೇತಿ ಪಡೆದಿದ್ದಾರೆ.
ಇಂತಹ ಸಾಹಸ ಹೊಸತೇನಲ್ಲಾ ಈ ಹಿಂದೆ 2022 ರಲ್ಲಿ ಬೆಲ್ಜಿಯನ್ ವ್ಯಕ್ತಿಯೊಬ್ಬರು ಒಂದು ನಿಮಿಷದಲ್ಲಿ 25 ಪುಲ್-ಅಪ್‌ಗಳ ಮಾಡಿ ವಿಶ್ವ ದಾಖಲೆ ಪಡೆದುಕೊಂಡಿದ್ದರು. ಇದೀಗಾ ಹಮಾಜಾಸ್ಪ್ ಹ್ಲೋಯಾನ್ 32 ಪುಲ್ ಅಪ್‌ಗಳ ಮೂಲಕ ವಿಶ್ವ ದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 10:56 am, Wed, 15 March 23