viral video: ದೆಹಲಿ ಎನ್ಸಿಆರ್ನಲ್ಲಿ ಪ್ರತಿ ದಿನ 10 ಕಿಲೋಮೀಟರ್ ಓಡುತ್ತಿದ್ದಂತಹ ಹುಡುಗನ ವಿಡಿಯೋ ಇತ್ತೀಚಿಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಆತನ ಭಾರತೀಯ ಸೇನೆಗೆ ಸೇರಲಿರುವ ಉತ್ಸಾಹ ಮತ್ತು ಪ್ರೇರಣೆಯನ್ನು ಜನರು ಶ್ಲಾಘಿಸಿದ್ದರು. ಈಗ ಅಂತಹದ್ದೇ ಒಂದು ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಅಲ್ಲಿ ರಾಜಸ್ಥಾನದ ವ್ಯಕ್ತಿಯೊಬ್ಬರು ಸಿಕಾರ್ ಪಟ್ಟಣದಿಂದ ಸರಿಸುಮಾರು 350 ಕಿಲೋಮೀಟರ್ ದೂರದಲ್ಲಿರುವ ನವದೆಹಲಿಗೆ ಓಡುತ್ತ ಬಂದಿದ್ದಾರೆ. ಈ ಯುವಕ ಹೀಗೆ ಅಷ್ಟೂ ದೂರದಿಂದ ಓಡಿ ಬರಲು ಕಾರಣ ಕೇಳಿದರೇ ನೀವು ನಿಜಕ್ಕೂ ಶಾಕ್ ಆಗುತ್ತಿರಿ. ಆ ವ್ಯಕ್ತಿ ಹೀಗೆ ಓಡಿ ಬರಲು ಕಾರಣ ಭಾರತೀಯ ಸೇನೆಗೆ ಸೇರಲು. ರಾಜಸ್ಥಾನ ಮೂಲದ ಸುರೇಶ್ ಭಿಚಾರ್ ಎನ್ನುವ ಯುವಕ ಸಿಕರ್ ಪ್ರದೇಶದಿಂದ ನವದೆಹಲಿಗೆ ಓಡಿ, ಒಟ್ಟು 50 ಗಂಟೆಗಳಲ್ಲಿ 350 ಕಿ.ಮೀ ದೂರವನ್ನು ಪೂರ್ಣಗೊಳಿಸಿದ್ದಾರೆ. ಭಾರತೀಯ ಸೇನೆಯ ನೇಮಕಾತಿ ಪ್ರಕ್ರಿಯೆಯಲ್ಲಿನ ವಿಳಂಬದ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಅವರು ಇಲ್ಲಿಯವರೆಗೆ ಓಡಿಬಂದಿರುವುದು ಕಾರಣವಾಗಿದೆ.
#WATCH दिल्ली: भारतीय सेना में शामिल होने के लिए इच्छुक एक युवा राजस्थान के सीकर से दिल्ली में एक प्रदर्शन में शामिल होने के लिए 50 घंटे में 350 किलोमीटर दौड़कर पहुंचा। pic.twitter.com/rpRVH8k4SI
— ANI_HindiNews (@AHindinews) April 5, 2022
ಭಿಚಾರ್ ಹೆದ್ದಾರಿಯಲ್ಲಿ ಓಡುತ್ತಿರುವ ವಿಡಿಯೋ ಕ್ಲಿಪ್ನ್ನು ಸುದ್ದಿ ಸಂಸ್ಥೆ ಎಎನ್ಐ ಪೋಸ್ಟ್ ಮಾಡಿದ್ದು, ಇದೀಗ ಸಾಕಷ್ಟು ವೈರಲ್ ಆಗಿದೆ. 24 ವರ್ಷದ ಯುವಕ ನೇಮಕಾತಿ ಪರೀಕ್ಷೆಯನ್ನು ಮುಂದೂಡಿರುವ ಕುರಿತು ದೆಹಲಿಯಲ್ಲಿ ಸೇನಾ ಆಕಾಂಕ್ಷಿಗಳು ನಡೆಸುತ್ತಿದ್ದ ಪ್ರದರ್ಶನದಲ್ಲಿ ಸೇರಲು ಓಡಿಬಂದಿದ್ದಾರೆ. ಎಎನ್ಐ ವರದಿಗಳ ಪ್ರಕಾರ, ನನಗೆ 24 ವರ್ಷ. ನಾನು ನಾಗೌರ್ ಜಿಲ್ಲೆಯಿಂದ (ರಾಜಸ್ಥಾನ) ಬಂದಿದ್ದೇನೆ. ನನಗೆ ಭಾರತೀಯ ಸೇನೆಗೆ ಸೇರುವ ಉತ್ಸಾಹವಿದೆ. 2 ವರ್ಷಗಳಿಂದ ನೇಮಕಾತಿ ಆಗುತ್ತಿಲ್ಲ. ನಾಗೌರ್, ಸಿಕರ್, ಜುಂಜುನು ಯುವಕರು ಮುದುಕರಾಗುತ್ತಿದ್ದಾರೆ. ಯುವಕರ ಉತ್ಸಾಹವನ್ನು ಹೆಚ್ಚಿಸಲು ಓಡಿ ದೆಹಲಿಗೆ ಬಂದಿದ್ದೇನೆ ಭಿಚಾರ್ ಹೇಳಿದ್ದಾರೆ. ತನ್ನ ಫಿಟ್‌ನೆಸ್ ಕಾಪಾಡಿಕೊಳ್ಳಲು ಮತ್ತು ಇತರ ಯುವಕರನ್ನು ಭಾರತೀಯ ಸೇನೆಗೆ ಸೇರಲು ಮತ್ತು ಅವರ ದೇಶಕ್ಕೆ ಸೇವೆ ಸಲ್ಲಿಸಲು ಪ್ರೇರೇಪಿಸಲು ನಾನು ದೂರದಿಂದ ಓಡಲು ಪ್ರಾರಂಭಿಸಿದ್ದೇನೆ ಎಂದು ಭಿಚಾರ್ ಹೇಳಿದರು. ಸೇನೆಯ ಮೇಲಿನ ಉತ್ಸಾಹವನ್ನು ಮುಂದುವರಿಸಲು ಅವರು ಪ್ರತಿದಿನ 5 ರಿಂದ 7 ಗಂಟೆಗಳ ಕಾಲ ಓಡುತ್ತಿದ್ದರು ಎಂದು ಅವರು ಹೇಳಿದರು.
ನಾನು ಬೆಳಿಗ್ಗೆ 4 ಗಂಟೆಗೆ ಓಟವನ್ನು ಪ್ರಾರಂಭಿಸುತ್ತಿದ್ದೆ. 11 ಗಂಟೆಗೆ ಪೆಟ್ರೋಲ್ ಪಂಪ್ ತಲುಪಿದ ನಂತರವೇ ನಿಲ್ಲಿಸಿದೆ. ಅಲ್ಲಿ ನಾನು ವಿಶ್ರಾಂತಿ ಪಡೆದೆ ಮತ್ತು ಹತ್ತಿರದ ಪ್ರದೇಶಗಳಲ್ಲಿನ ಸೇನಾ ಆಕಾಂಕ್ಷಿಗಳಿಂದ ಆಹಾರ ಸ್ವೀಕರಿಸಿದ್ದೇನೆ ಎಂದು ಸುರೇಶ್ ಹೇಳಿದರು. ಭಾರತೀಯ ಸೇನೆಗೆ ಸೇರುವುದು ಅವರ ಮುಖ್ಯ ಗುರಿಯಾಗಿದ್ದರೂ, ಭಿಚಾರ್ ಅವರು ಪ್ರಾದೇಶಿಕ ಸೇನೆಯ (ಟಿಎ) ಭಾಗವಾಗಲು ಆಶಿಸುತ್ತಿದ್ದಾರೆ. ತನ್ನ ಶಿಕ್ಷಣದ ವೆಚ್ಚವನ್ನು ಪೂರೈಸಲು, ಅವರ ಪೋಷಕರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಹಂಚಿಕೊಂಡಿದ್ದಾರೆ. ಸುರೇಶನ ಕಥೆಯು ವೈರಲ್ ಆಗಿದೆ. ಅನೇಕ ನೆಟಿಗರು ಸೈನ್ಯಕ್ಕೆ ಸೇರುವ ಆತನ ಉತ್ಸಾಹವನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ:
ಹಣಕ್ಕಾಗಿ ಗುಟ್ಟಾಗಿ ವೀರ್ಯ ದಾನ ಮಾಡಿದ ಗಂಡ; ವಿಷಯ ತಿಳಿದು ಡೈವೋರ್ಸ್ಗೆ ಪಟ್ಟು ಹಿಡಿದ ಹೆಂಡತಿ