
ಉತ್ತರ ಪ್ರದೇಶದ ಅಯ್ಯೋಧ್ಯೆಯಲ್ಲಿ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ರಾಮ ಲಲ್ಲಾ (ಬಾಲ ರಾಮ) ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಮತ್ತು ರಾಮ ಮಂದಿರ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಒಂದು ಪುಣ್ಯ ಕಾರ್ಯದಲ್ಲಿ ಭಾಗಿಯಾಗಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಈ ದಿನದಂದು ರಾಮ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ವಿಶೇಷವಾಗಿ ಕೆಲವೊಬ್ಬ ರಾಮಭಕ್ತರು ತಮ್ಮ ಊರುಗಳಿಂದ ಪಾದಯಾತ್ರೆಯ ಮೂಲಕವೇ ಪ್ರಭು ಶ್ರೀರಾಮನ ಜನ್ಮಸ್ಥಳಕ್ಕೆ ಭೇಟಿ ನೀಡುತ್ತೇನೆ ಎಂದು ಸಂಕಲ್ಪ ತೆಗೆದುಕೊಂಡು ಈಗಾಗಲೇ ಅಯೋಧ್ಯೆಗೆ ಪಾದಯಾತ್ರೆಯನ್ನು ಪ್ರಾರಂಭಿಸಿದ್ದಾರೆ.
ಕರ್ನಾಟಕ ಸೇರಿದಂತೆ, ಬೇರೆ ರಾಜ್ಯಗಳಿಂದಲೂ ಭಕ್ತರು ಪಾದಯಾತ್ರೆಯನ್ನು ಹೊರಟಿರುವ ಸುದ್ದಿಗಳು ಹರಿದಾಡುತ್ತಿವೆ. ಸದ್ಯ ಇಲ್ಲೊಂದು ವಿಶೇಷ ವಿಡಿಯೋ ಹರಿದಾಡುತ್ತಿದ್ದು, ರಾಮಭಕ್ತರೊಬ್ಬರು ತಮ್ಮ ಸಂಕಲ್ಪದಂತೆ ತಲೆಕೆಳಗಾಗಿ ನಡೆಯುತ್ತಾ ಪ್ರಭು ಶ್ರೀರಾಮನ ದರ್ಶನಕ್ಕಾಗಿ ಅಯೋಧ್ಯೆಗೆ ಹೊರಟಿದ್ದಾರೆ.
ಇದನ್ನೂ ಓದಿ: ಪೇಪರ್ನಲ್ಲಿ ಮೂಡಿದ ಪರಿಸರಸ್ನೇಹಿ ಶ್ರೀರಾಮ ಮೂರ್ತಿ
ರಾಮಭಕ್ತ ತಲೆಕೆಳಗಾಗಿ ನಡೆಯುತ್ತಾ, ಅಯೋಧ್ಯೆಗೆ ಶ್ರೀರಾಮನ ದರ್ಶನಕ್ಕೆ ಹೊರಟಿರುವಂತಹ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಡಿಯೋದಲ್ಲಿ ರಾಮಭಕ್ತರೊಬ್ಬರು ತಲೆ ಕೆಳಗಾಗಿ ತಮ್ಮ ಕೈಗಳಲ್ಲಿ ಹೆಜ್ಜೆಯಿಡುತ್ತಾ, ಶ್ರೀರಾಮನ ದರ್ಶನಕ್ಕಾಗಿ ಅಯೋಧ್ಯೆಗೆ ಹೊರಟಿರುವ ದೃಶ್ಯವನ್ನು ಕಾಣಬಹುದು. ಅಷ್ಟಕ್ಕೂ ಇವರು ಯಾವ ಊರಿನಿಂದ ಪಾದಯತ್ರೆ ಹೊರಟಿದ್ದಾರೆ ಹಾಗೂ ಅವರ ವೈಯಕ್ತಿಕ ವಿವರವಗಳ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:24 am, Wed, 17 January 24