ಹೈದರಾಬಾದ್: 22/24 ಕ್ಯಾರೆಟ್ ಚಿನ್ನ ಗೊತ್ತು.. ಚಿನ್ನದಂತಹ ಹೆಂಡತಿ ಗೊತ್ತು! ಆದರೆ ಇದ್ಯಾವುದು ಚಿನ್ನದ ಇಡ್ಲಿ! ಎಂದು ಆಶ್ಚರ್ಯ ಪಡುತ್ತೀರಾ? ಎಸ್.. ಚಿನ್ನದ ಇಡ್ಲಿ ಈಗ ಹೈದರಾಬಾದ್ ನಗರದಲ್ಲಿ ಹಾಟ್‌ಪಿಕ್ ಆಗಿ ಮಾರ್ಪಟ್ಟಿದೆ. ಈ ಇಡ್ಲಿ ಮಾಡುವುದು ಹೇಗೆ? ಅದರ ಬೆಲೆ ಎಷ್ಟು ಎಂದು ನೋಡೋಣ. ಬೇರೆಲ್ಲ ದೇಶಗಳಿಗೆ ಹೋಲಿಸಿದರೆ ನಮ್ಮವರು ಶುದ್ಧ ಭೋಜನಪ್ರಿಯರು. ಮನಸಾರೆ ನಗುತ್ತಾ, ಹೊಟ್ಟೆ ತುಂಬಾ ತಿನ್ನುವುದು ನಮಗೆ ಒಗ್ಗಿರುವ ಅಭ್ಯಾಸ. ನಮ್ಮ ದೇಶದ ಪ್ರತಿಯೊಂದು ರಾಜ್ಯವು ತನ್ನದೇ ಆದ ಪ್ರಸಿದ್ಧ ಆಹಾರವನ್ನು ಹೊಂದಿದೆ. ಜನರ ರುಚಿ, ಅಭಿರುಚಿ ಮತ್ತು ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ವಿವಿಧ ರೆಸ್ಟೋರೆಂಟ್‌ಗಳು ವಿಭಿನ್ನ ಆಹಾರ ಮತ್ತು ಕೊಡುಗೆಗಳನ್ನು ನೀಡುತ್ತಿವೆ. ತನ್ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿವೆ.
ಜಸ್ಟ್ ಫಾರ್ ಚೇಂಜ್ಗಾಗಿ ನೀವು ಹೊಸ ರೀತಿಯ ಆಹಾರವನ್ನು ಆನಂದಿಸುತ್ತೀರಾ? ಹಾಗಾದರೆ ನಿಮ್ಮಂತಹವರಿಗಾಗಿಯೇ ಹೈದರಾಬಾದ್‌ನಲ್ಲಿ ಹೊಸ ರೀತಿಯ ಖಾದ್ಯ ಲಭ್ಯವಿದೆ. ವಿಶೇಷ ಇಡ್ಲಿ, ಭಾಗ್ಯ ನಗರದ ಜನರ ಮನಸೂರೆಗೊಳ್ಳುತ್ತಿದೆ. ಏನು ಇಡ್ಲಿದು ಅಂತಾ ವಿಶೇಷತೆ ಎಂದು ನಿಮಗೆ ಕುತೂಹಲ/ಅನುಮಾನವಿದೆಯೇ? ಇದು ಅಂತಿಂಥ ರೀತಿಯ ಇಡ್ಲಿ ಅಲ್ಲ. ಎರಡು ಇಡ್ಲಿಗಳು ಸೇರಿ 1200 ರೂಪಾಯಿ ಬೆಲೆಯಿದೆ. ಅದೇನಪ್ಪಾ ಚಿನ್ನದಿಂದ ಏನಾದ್ರೂ ಮಾಡ್ತಾರಾ ಅಂತಾ ಮೂಗೆಳೆಯಬೇಡಿ. ಹೌದು ನಿಜಕ್ಕೂ ಆ ಇಡ್ಲಿಗಳನ್ನು ಚಿನ್ನದಿಂದ ಮಾಡಲಾಗುತ್ತಿದೆ.
ಹೈದರಾಬಾದ್ ಹೊರವಲಯದಲ್ಲಿರುವ ಭಾಗ್ಯ ನಗರದ ಹೋಟೆಲ್‌ನಲ್ಲಿ ಚಿನ್ನದ ಲೇಪಿತ ಇಡ್ಲಿಗಳನ್ನು ಮಾರಾಟ ಮಾಡಲಾಗುತ್ತದೆ. ಈ ಕೆಫೆಯಲ್ಲಿ ಇಡ್ಲಿಗಳಷ್ಟೇ ಅಲ್ಲ.. ಬಂಗಾರದ ದೋಸೆ, ಗುಲಾಬ್ ಜಾಮೂನ್ ಬಾಜಿ, ಖೋವಾ ಗುಲಾಬ್ ಜಾಮೂನ್ ಮುಂತಾದ ಬಾಯಲ್ಲಿ ನೀರೂರಿಸುವ ವಿಶೇಷ ತಿಂಡಿತಿನಿಸುಗಳಿವೆ.
ನಾನಾ ದೇಶಗಳಲ್ಲಿ ಬಿರಿಯಾನಿಯ ಘಮ/ಹೆಸರನ್ನು ಪಸರಿಸಿದ ಹೈದರಾಬಾದ್ ನವಾಬರ ನಗರದಲ್ಲಿ ತಿಂಡಿ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಗೊಂಡ ಈ ವಸ್ತುಗಳನ್ನು ತಿನ್ನಲು ಸಾರ್ವಜನಿಕ ಆಸಕ್ತಿ ತೋರಿಸುತ್ತಿದ್ದಾರೆ. ಆದರೆ ಈ ಬೆಲೆ ಜನಸಾಮಾನ್ಯರಿಗೆ ಕೈಗೆಟುಕದೇ ಇರುವುದರಿಂದ ಶ್ರೀಮಂತರು ಆ ಹೋಟೆಲ್ ನಲ್ಲಿ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.
ಹೆಚ್ಚು ಹೆಚ್ಚು ಟ್ರೆಂಡಿಂಗ್ ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:53 pm, Fri, 21 July 23