ಇಂದು ಪ್ರೇಮಿಗಳ ದಿನ. ಈ ದಿನವನ್ನು ಪ್ರೇಮಿಗಳು ಬಹಳ ವಿಶಿಷ್ಟವಾಗಿ ಆಚರಿಸುತ್ತಾರೆ. ಅದೇ ರೀತಿ ಇದೀಗ ಗೂಗಲ್ ಡೂಡಲ್ ಪ್ರೇಮಿಗಳ ದಿನದ ಸಲುವಾಗಿ ವಿಶೇಷ ಆಟವೊಂದನ್ನು ರಚಿಸುವ ಮೂಲಕ ಪ್ರೇಮಿಗಳ ದಿನವನ್ನು ಸಂಭ್ರಮಿಸಿದೆ. ಗೂಗಲ್ ಪ್ರತಿ ವಿಶೇಷ ದಿನವನ್ನು ತನ್ನದೇ ಶೈಲಿಯಲ್ಲಿ ಆಚರಿಸುವಂತೆ, ಪ್ರೇಮಿಗಳ ದಿನದ ವಿಶೇಷ ಸಂದರ್ಭದಲ್ಲಿ ಅದ್ಭುತವಾದ ಡೂಡಲ್ ಅನ್ನು ರಚಿಸಿದ್ದು, ರಸಪ್ರಶ್ನೆಯ ಆಟವನ್ನು ಸಹ ಪರಿಚಯಿಸಿದೆ. ಗೂಗಲ್ ಪ್ರತಿವರ್ಷ ಪ್ರೇಮಿಗಳ ದಿನದ ಸಂದರ್ಭದಲ್ಲಿ ಗೂಗಲ್ ಡೂಡಲ್ ಆಟವನ್ನು ಪ್ರಸ್ತುತಪಡಿಸುತ್ತದೆ. ವ್ಯಾಲೆಂಟೈನ್ಸ್ ಡೇ 2024 ರ ಸಂದರ್ಭದಲ್ಲಿ ರಸಾಯನಶಾಸ್ತ್ರದ ಪರಮಾಣು ಬಂಧವನ್ನು ಆಧರಿಸಿ ಆಟವನ್ನು ಪರಿಚಯಿಸಿದ್ದು, ಈ ಡೂಡಲ್ ಅಲ್ಲಿ ನೀವು ರಸಾಯನಶಾಸ್ತ್ರದ Cu (ಕಾಪರ್) Pd (ಪಲ್ಲಾಡಿಯಮ್) ಅನ್ನು ನೋಡಬಹುದು.
ಫೆಬ್ರವರಿ ʼ14ʼ ಪ್ರೇಮ ಪಕ್ಷಿಗಳಿಗೆ ಅತ್ಯಂತ ವಿಶೇಷ ದಿನವಾಗಿದೆ. ಈ ದಿನದಂದು ಪ್ರೇಮಿಗಳು ವಿಭಿನ್ನ ರೀತಿಯಲ್ಲಿ ವ್ಯಾಲೆಂಟೈನ್ಸ್ ಡೇಯನ್ನು ಆಚರಿಸುತ್ತಾರೆ. ಹಾಗೇನೇ ಗೂಗಲ್ ಕೂಡಾ ಈ ವಿಶೇಷ ದಿನವನ್ನು ವಿಭಿನ್ನ ರೀತಿಯಲ್ಲಿ ಪ್ರಸ್ತುತ ಪಡಿಸಿದ್ದು, ಗೂಗಲ್ ತನ್ನ ಡೂಡಲ್ ಮೂಲಕ ವಿಜ್ಞಾನದ ತಿರುವುಗಳೊಂದಿಗೆ 2024 ರ ಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಿಸುತ್ತಿದೆ. ಈ ಬಾರಿ ಗೂಗಲ್ ರಸಾಯನಶಾಸ್ತ್ರದ ಪರಮಾಣು ಬಂಧಗಳನ್ನು ಆಧರಿಸಿದ ರಸ ಪ್ರಶ್ನೆಯ ಆಟವನ್ನು ಸಹ ಪರಿಚಯಿಸಿದೆ.ಇದರಲ್ಲಿ ನೀವು ಗೂಗಲ್ ಅನ್ನು ತೆರೆದಾಗ ಗುಲಾಬಿ ಬಣ್ಣದಿಂದ ತುಂಬಿದ ವಿಶೇಷ ಬಾಂಡಿಂಗ್ ಡೂಡಲ್ ಅನ್ನು ನೋಡಬಹುದು. ಇದರಲ್ಲಿ ಆಮ್ಲಜನಕದ ಎರಡು ಬಂಧಗಳು ಪರಸ್ಪರ ಹತ್ತಿರ ಬರುವುದನ್ನು ಕಾಣಬಹುದು.
ಇದನ್ನೂ ಓದಿ: ಕಾರ್ಕಳದ 8ನೇ ತರಗತಿ ಹುಡುಗನ ಕೈತೋಟ ಹೇಗಿದೆ ನೋಡಿ? ಇತನ ಕೃಷಿ ಒಲವಿಗೆ ಸಲಾಂ
ನೀವು ಡೂಡಲ್ ಅನ್ನು ಕ್ಲಿಕ್ ಮಾಡಿದಾಗ, ಎರಡು ಆಯ್ಕೆಗಳನ್ನು ನೋಡುತ್ತೀರಿ, ಅದರಲ್ಲಿ ಒಂದು ರಸಪ್ರಶ್ನೆಯಲ್ಲಿ ಪಾಲ್ಗೊಳ್ಳುವುದು ಮತ್ತು ಇನ್ನೊಂದು ನೇರ ರಾಸಾಯನಿಕ ಬಂಧಗಳನ್ನು ರೂಪಿಸುವುದಾಗಿದೆ. ಇದರಲ್ಲಿ ನಿಮ್ಮ ವ್ಯಕ್ತಿತ್ವದ ಆಧಾರದ ಮೇಲೆ ನೀವು ಯಾವ ವೈಜ್ಞಾನಿಕ ಅಂಶಕ್ಕೆ ಸಂಬಂಧಿಸಿದ್ದೀರಿ ಎಂಬುದನ್ನು ಕಂಡುಹಿಡಿಯಬಹುದು. ಅಂದರೆ ಕ್ಲೋರಿನ್, ಬ್ರೋಮಿನ್, ಹೈಡ್ರೋಜನ್, ಅಯೋಡಿನ್ ಮತ್ತು ಸಾರಜನಕದಂತಹ ಯಾವ ಅಂಶವು ನಿಮಗೆ ಸೂಕ್ತವಾಗಿದೆ ಎಂಬುದನ್ನು ತಿಳಿಯಬಹುದು. ಇದೊಂದು ರೊಮ್ಯಾಂಟಿಕ್ ವಿಜ್ಞಾನದ ಪ್ರಯೋಗವಾಗಿದ್ದು, ಪ್ರತಿಯೊಂದು ಅಂಶವೂ ತನ್ನದೇ ಆದ ಗುಣಲಕ್ಷಣಗಳನ್ನು ವಿವರಿಸುತ್ತದೆ. ವ್ಯಾಲೆಂಟೈನ್ಸ್ ಡೇ Google Doodle Chemistry CuPd ಒಂದು ಸಂವಾದಾತ್ಮಕ ಆಟವಾಗಿದ್ದು, ಇದರಲ್ಲಿ ನಿಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಅಂಶಗಳನ್ನು ನೀವು ಆಯ್ಕೆ ಮಾಡಬಹುದು.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ