ಪೆಟ್ ಕ್ಲಿನಿಕ್ ನಲ್ಲಿ ನಾಯಿಯನ್ನು ಮನಸೋ ಇಚ್ಛೆ ಥಳಿಸಿದ ಪ್ರಕರಣ; ಸಿಬ್ಬಂದಿಗಳ ಬಂಧನ
ಥಾಣೆಯಲ್ಲಿರುವ ಪೆಟ್ ಕ್ಲಿನಿಕ್‌ನಲ್ಲಿ ಇಬ್ಬರು ಸಿಬ್ಬಂದಿಗಳು ಚೌ ಚೌ ತಳಿಯ ನಾಯಿಯನ್ನು ಹೊಡೆದು ಗುದ್ದುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗಾ ಥಾಣೆ ಪೊಲೀಸರು ಇಬ್ಬರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಥಾಣೆಯ ಆರ್ ಮಾಲ್ ಬಳಿ ಇರುವ ವೆಟಿಕ್ ಪೆಟ್ ಕ್ಲಿನಿಕ್ಗೆ ತನ್ನ ನಾಯಿಯನ್ನು ಗ್ರೂಮಿಂಗ್ಗಾಗಿ ಕರೆದುಕೊಂಡು ಬಂದಿದ್ದ ವ್ಯಕ್ತಿ. ಪೆಟ್ ಕ್ಲಿನಿಕ್ನ ಸಿಬ್ಬಂದಿಗೆ ತನ್ನ ಸಾಕು ನಾಯಿಯನ್ನು ಒಪ್ಪಿಸಿ ಹೋಗಿದ್ದ. ಆದರೆ ಪೆಟ್ ಕ್ಲಿನಿಕ್ ನ ಸಿಬ್ಬಂದಿಗಳು ನಾಯಿಯನ್ನು ಮನಸೋ ಇಚ್ಛೆ ಥಳಿಸಿದ್ದಾರೆ. ಇದಲ್ಲದೇ ಈ ಹೀನಾಯ ಕೃತ್ಯವನ್ನು ಮೊಬೈಲ್ ಫೋನಿನಲ್ಲಿ ಸೆರೆಹಿಡಿದ್ದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಬಾಲಿವುಡ್ ನಟರು ಸೇರಿದಂತೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗಾ ಥಾಣೆ ಪೊಲೀಸರು ಇಬ್ಬರೂ ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ. ಬಂಧಿತರಿಬ್ಬರ ಹೆಸರು ಇನ್ನಷ್ಟೇ ಗೊತ್ತಾಗಬೇಕಿದೆ.
ನಾಯಿಯನ್ನು ಮನಸೋ ಇಚ್ಛೆ ಥಳಿಸಿದ ವಿಡಿಯೋ:
View this post on Instagram
ವೀಡಿಯೊದಲ್ಲಿ, ಪೆಟ್ ಕ್ಲಿನಿಕ್ ಸಿಬ್ಬಂದಿ ಚೌ ಚೌ ತಳಿಯ ನಾಯಿಯ ಮುಖ ಮತ್ತು ಬೆನ್ನಿನ ಮೇಲೆ ಪದೇ ಪದೇ ಗುದ್ದುತ್ತಿರುವುದು ಕಂಡುಬಂದಿದೆ. ಈ ಕೃತ್ಯವನ್ನು ಚಿತ್ರೀಕರಿಸುತ್ತಿರುವ ವ್ಯಕ್ತಿಯೊಬ್ಬರು ನಾಯಿಯ ಮೇಲೆ ಏಟು ಹಾಕುತ್ತಿರುವುದನ್ನು ಕೂಡ ಕಾಣಬಹುದು. ನಂತರ, ನಾಯಿ ಸ್ಟ್ರೆಚರ್‌ನಿಂದ ಕೆಳಗಿಳಿದು ಕೋಣೆಯಿಂದ ಹೊರಗೆ ಹೋಗುತ್ತಿದ್ದಂತೆ, ಸಿಬ್ಬಂದಿ ಒದೆಯುತ್ತಾನೆ. ವೈರಲ್ ಆಗಿರುವ ವಿಡಿಯೋ ಬಾಲಿವುಡ್ ನಟರು ಸೇರಿದಂತೆ ವಿವಿಧ ಜನರಿಂದ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಮೋದಿ ಕಟೌಟ್ ತಬ್ಬಿಕೊಂಡು, ಸೊಂಟ ಬಳುಕಿಸುತ್ತಾ ರೀಲ್ಸ್ ಮಾಡಿದ ಮಹಿಳೆ
ಪೆಟ್ ಕ್ಲಿನಿಕ್ ಸಿಬ್ಬಂದಿಗಳಿಬ್ಬರ ಬಂಧನ:
#WATCH | #Thane Dog Grooming Cruelty Case: Two From Vetic Pet Clinic Arrested After Activists Protest#Maharashtra #AnimalRights #AnimalCruelty pic.twitter.com/1WYHqJnSL7
— Free Press Journal (@fpjindia) February 13, 2024
ಇಷ್ಟೆಲ್ಲಾ ಘಟನೆ ನಡೆಯುತ್ತಿದ್ದಂತೆ “ಮೊದಲ ಹಂತವಾಗಿ, ನಾವು ತಕ್ಷಣ ಇಬ್ಬರು ಸಿಬ್ಬಂದಿಗಳನ್ನು ವಜಾಗೊಳಿಸಿದ್ದೇವೆ. ಈ ಈ ಹೀನಾಯ ಕೃತ್ಯಕ್ಕೆ ನಾವು ಕ್ಷಮೆಯಾಚಿಸುತ್ತಿದ್ದೇವೆ” ಎಂದು ವೆಟಿಕ್ ವಕ್ತಾರರು ಫ್ರೀ ಪ್ರೆಸ್ ಜರ್ನಲ್‌ಗೆ ತಿಳಿಸಿದ್ದಾರೆ .
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:31 pm, Wed, 14 February 24