AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentineʼs Day google Doodle: ಗೂಗಲ್ ಡೂಡಲ್​​​​​ನಿಂದ ಪ್ರೇಮಿಗಳ ದಿನದ ಸ್ಪೆಷಲ್ ಕೆಮಿಸ್ಟ್ರಿ ಗೇಮ್, ಇದರ ವಿಶೇಷತೆಗಳೇನು? 

Valentine's Day 2024: ಪ್ರೇಮಿಗಳ ಈ ದಿನದಂದು ಗೂಗಲ್ ವಿಜ್ಞಾನದ ಟ್ರಿಕ್ ಬಳಸಿ ವ್ಯಾಲೆಂಟೈನ್ಸ್  ಡೂಡಲ್ ಸಿದ್ಧಪಡಿಸಿದೆ.  ಹೌದು ಟೆಕ್ ದೈತ್ಯ ಎಂದೆನಿಸಕೊಂಡಿರುವ ಗೂಗಲ್ ಏನಾದ್ರೂ ವಿಶೇಷ ದಿನಗಳು ಬಂದ್ರೆ ಸಾಕು ಅದ್ರ ಬಗ್ಗೆ ಆನಿಮೇಷನ್, ಫೋಟೋ ಹಾಕುವ ಮೂಲಕ ಸಂಭ್ರಮಿಸುತ್ತದೆ. ಅದೇ ರೀತಿ ಇದೀಗ ಗೂಗಲ್ ಡೂಡಲ್  ಪ್ರೇಮಿಗಳ ದಿನದ ಸಲುವಾಗಿ ವಿಶೇಷ ಆಟವೊಂದನ್ನು ರಚಿಸುವ ಮೂಲಕ ಪ್ರೇಮಿಗಳ ದಿನವನ್ನು ಸಂಭ್ರಮಿಸಿದೆ. 

Valentineʼs Day google Doodle: ಗೂಗಲ್ ಡೂಡಲ್​​​​​ನಿಂದ ಪ್ರೇಮಿಗಳ ದಿನದ ಸ್ಪೆಷಲ್ ಕೆಮಿಸ್ಟ್ರಿ ಗೇಮ್, ಇದರ ವಿಶೇಷತೆಗಳೇನು? 
ಮಾಲಾಶ್ರೀ ಅಂಚನ್​
| Edited By: |

Updated on: Feb 14, 2024 | 2:22 PM

Share

ಇಂದು ಪ್ರೇಮಿಗಳ ದಿನ.  ಈ ದಿನವನ್ನು ಪ್ರೇಮಿಗಳು ಬಹಳ ವಿಶಿಷ್ಟವಾಗಿ  ಆಚರಿಸುತ್ತಾರೆ. ಅದೇ ರೀತಿ ಇದೀಗ ಗೂಗಲ್ ಡೂಡಲ್  ಪ್ರೇಮಿಗಳ ದಿನದ ಸಲುವಾಗಿ ವಿಶೇಷ ಆಟವೊಂದನ್ನು ರಚಿಸುವ ಮೂಲಕ ಪ್ರೇಮಿಗಳ ದಿನವನ್ನು ಸಂಭ್ರಮಿಸಿದೆ. ಗೂಗಲ್ ಪ್ರತಿ ವಿಶೇಷ ದಿನವನ್ನು ತನ್ನದೇ ಶೈಲಿಯಲ್ಲಿ ಆಚರಿಸುವಂತೆ, ಪ್ರೇಮಿಗಳ ದಿನದ ವಿಶೇಷ ಸಂದರ್ಭದಲ್ಲಿ ಅದ್ಭುತವಾದ ಡೂಡಲ್ ಅನ್ನು ರಚಿಸಿದ್ದು, ರಸಪ್ರಶ್ನೆಯ ಆಟವನ್ನು ಸಹ ಪರಿಚಯಿಸಿದೆ. ಗೂಗಲ್ ಪ್ರತಿವರ್ಷ ಪ್ರೇಮಿಗಳ ದಿನದ ಸಂದರ್ಭದಲ್ಲಿ ಗೂಗಲ್ ಡೂಡಲ್ ಆಟವನ್ನು ಪ್ರಸ್ತುತಪಡಿಸುತ್ತದೆ. ವ್ಯಾಲೆಂಟೈನ್ಸ್ ಡೇ 2024 ರ ಸಂದರ್ಭದಲ್ಲಿ ರಸಾಯನಶಾಸ್ತ್ರದ ಪರಮಾಣು ಬಂಧವನ್ನು ಆಧರಿಸಿ ಆಟವನ್ನು ಪರಿಚಯಿಸಿದ್ದು,   ಈ ಡೂಡಲ್ ಅಲ್ಲಿ ನೀವು ರಸಾಯನಶಾಸ್ತ್ರದ Cu (ಕಾಪರ್)  Pd  (ಪಲ್ಲಾಡಿಯಮ್) ಅನ್ನು  ನೋಡಬಹುದು.

ಪ್ರೇಮಿಗಳ ದಿನದಂದು ವಿಶೇಷ ಗೂಗಲ್ ಡೂಡಲ್:

ಫೆಬ್ರವರಿ ʼ14ʼ  ಪ್ರೇಮ ಪಕ್ಷಿಗಳಿಗೆ ಅತ್ಯಂತ ವಿಶೇಷ ದಿನವಾಗಿದೆ. ಈ ದಿನದಂದು  ಪ್ರೇಮಿಗಳು ವಿಭಿನ್ನ ರೀತಿಯಲ್ಲಿ ವ್ಯಾಲೆಂಟೈನ್ಸ್ ಡೇಯನ್ನು ಆಚರಿಸುತ್ತಾರೆ.  ಹಾಗೇನೇ ಗೂಗಲ್ ಕೂಡಾ ಈ ವಿಶೇಷ ದಿನವನ್ನು ವಿಭಿನ್ನ ರೀತಿಯಲ್ಲಿ ಪ್ರಸ್ತುತ ಪಡಿಸಿದ್ದು, ಗೂಗಲ್ ತನ್ನ ಡೂಡಲ್ ಮೂಲಕ ವಿಜ್ಞಾನದ ತಿರುವುಗಳೊಂದಿಗೆ 2024 ರ ಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಿಸುತ್ತಿದೆ. ಈ ಬಾರಿ ಗೂಗಲ್ ರಸಾಯನಶಾಸ್ತ್ರದ ಪರಮಾಣು ಬಂಧಗಳನ್ನು ಆಧರಿಸಿದ  ರಸ ಪ್ರಶ್ನೆಯ ಆಟವನ್ನು ಸಹ ಪರಿಚಯಿಸಿದೆ.ಇದರಲ್ಲಿ ನೀವು ಗೂಗಲ್ ಅನ್ನು ತೆರೆದಾಗ ಗುಲಾಬಿ ಬಣ್ಣದಿಂದ ತುಂಬಿದ ವಿಶೇಷ ಬಾಂಡಿಂಗ್ ಡೂಡಲ್ ಅನ್ನು ನೋಡಬಹುದು. ಇದರಲ್ಲಿ ಆಮ್ಲಜನಕದ ಎರಡು ಬಂಧಗಳು ಪರಸ್ಪರ ಹತ್ತಿರ ಬರುವುದನ್ನು ಕಾಣಬಹುದು.

ಇದನ್ನೂ ಓದಿ: ಕಾರ್ಕಳದ 8ನೇ ತರಗತಿ ಹುಡುಗನ ಕೈತೋಟ ಹೇಗಿದೆ ನೋಡಿ? ಇತನ ಕೃಷಿ ಒಲವಿಗೆ ಸಲಾಂ

ನೀವು ಡೂಡಲ್ ಅನ್ನು ಕ್ಲಿಕ್ ಮಾಡಿದಾಗ, ಎರಡು ಆಯ್ಕೆಗಳನ್ನು ನೋಡುತ್ತೀರಿ, ಅದರಲ್ಲಿ ಒಂದು ರಸಪ್ರಶ್ನೆಯಲ್ಲಿ ಪಾಲ್ಗೊಳ್ಳುವುದು ಮತ್ತು ಇನ್ನೊಂದು ನೇರ ರಾಸಾಯನಿಕ ಬಂಧಗಳನ್ನು ರೂಪಿಸುವುದಾಗಿದೆ. ಇದರಲ್ಲಿ ನಿಮ್ಮ ವ್ಯಕ್ತಿತ್ವದ ಆಧಾರದ ಮೇಲೆ ನೀವು ಯಾವ ವೈಜ್ಞಾನಿಕ ಅಂಶಕ್ಕೆ ಸಂಬಂಧಿಸಿದ್ದೀರಿ ಎಂಬುದನ್ನು ಕಂಡುಹಿಡಿಯಬಹುದು. ಅಂದರೆ ಕ್ಲೋರಿನ್, ಬ್ರೋಮಿನ್, ಹೈಡ್ರೋಜನ್, ಅಯೋಡಿನ್ ಮತ್ತು ಸಾರಜನಕದಂತಹ ಯಾವ ಅಂಶವು ನಿಮಗೆ ಸೂಕ್ತವಾಗಿದೆ ಎಂಬುದನ್ನು ತಿಳಿಯಬಹುದು. ಇದೊಂದು ರೊಮ್ಯಾಂಟಿಕ್ ವಿಜ್ಞಾನದ ಪ್ರಯೋಗವಾಗಿದ್ದು, ಪ್ರತಿಯೊಂದು ಅಂಶವೂ ತನ್ನದೇ ಆದ ಗುಣಲಕ್ಷಣಗಳನ್ನು ವಿವರಿಸುತ್ತದೆ. ವ್ಯಾಲೆಂಟೈನ್ಸ್ ಡೇ  Google Doodle Chemistry CuPd ಒಂದು ಸಂವಾದಾತ್ಮಕ ಆಟವಾಗಿದ್ದು, ಇದರಲ್ಲಿ ನಿಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಅಂಶಗಳನ್ನು ನೀವು ಆಯ್ಕೆ ಮಾಡಬಹುದು.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು