AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕಾರ್ಕಳದ 8ನೇ ತರಗತಿ ಹುಡುಗನ ಕೈತೋಟ ಹೇಗಿದೆ ನೋಡಿ? ಇತನ ಕೃಷಿ ಒಲವಿಗೆ ಸಲಾಂ

Udupi Saurav poojary:  ಪ್ರಸ್ತುತ ಈ ಕಾಲ ಘಟ್ಟದಲ್ಲಿ ಆಧುನೀಕತೆಯ ಭರಾಟೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಆಧುನಿಕತೆಯ ಅನುಕರಣೆಯಲ್ಲಿಯೇ  ಕರಗಿಹೋಗುತ್ತಿದ್ದಾರೆ. ಮತ್ತು ಕೊಂಚ ಬಿಡುವಿನ ಸಮಯದಲ್ಲಿ ಮೊಬೈಲ್ ನೋಡುತ್ತಾ ಟೈಮ್ ವೇಸ್ಟ್ ಮಾಡುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಹುಡುಗ ಅದಕ್ಕೆ ತದ್ವಿರುದ್ಧವಾಗಿ ಶಾಲೆಗೆ ಹೋಗುತ್ತಲೇ ತನ್ನನ್ನು ತಾನು ಕೃಷಿಯಲ್ಲಿ ತೊಡಗಿಕೊಂಡು ಅದೆಷ್ಟೋ ವಿದ್ಯಾರ್ಥಿಗಳಿಗೆ, ಯುವ ಜನರಿಗೆ ಮಾದರಿಯಾಗಿ ನಿಂತಿದ್ದಾನೆ. 

Viral Video: ಕಾರ್ಕಳದ 8ನೇ ತರಗತಿ ಹುಡುಗನ ಕೈತೋಟ ಹೇಗಿದೆ ನೋಡಿ? ಇತನ ಕೃಷಿ ಒಲವಿಗೆ ಸಲಾಂ
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Feb 14, 2024 | 1:00 PM

Share

ಕೃಷಿ ಮತ್ತು ರೈತ ದೇಶದ ಬೆನ್ನೆಲುಬು. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ ಯುವ ಜನತೆ ಕೃಷಿ ಕಾಯಕದಿಂದ ದೂರ ಸರಿಯುತ್ತಿದ್ದಾರೆ. ಮತ್ತು ಆಧುನೀಕತೆಯ ಅನುಕರಣೆಯಲ್ಲಿ ಕರಗಿ ಹೋಗುತ್ತಿದ್ದಾರೆ. ಅಷ್ಟೇ ಅಲ್ಲದೆ  ನಮ್ಮ ಹಳ್ಳಿಯ ಯುವಕರು ನಗರದತ್ತ ಮುಖ ಮಾಡಿ ಕೃಷಿ ಕಾಯಕವನ್ನು ಬಿಡುತ್ತಿದ್ದಾರೆ. ಆದರೆ ಇಲ್ಲೊಬ್ಬ  ಪುಟ್ಟ ಹುಡುಗ ವಿದ್ಯಾಭ್ಯಾಸದ ಜೊತೆಗೆ ಕೃಷಿ ಕಾಯಕದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಫೇಸ್ ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಮ್ ಎಂದು ಕಾಲ ಕಳೆಯುವ ಅದೆಷ್ಟೋ ಸೋಮಾರಿ ಯುವಕರಿಗೆ  ಮಾದರಿಯಾಗಿದ್ದಾನೆ.

ಹೌದು ಉಡುಪಿ ಜಿಲ್ಲೆಯ ಕಾರ್ಕಳದ ಸೌರವ್ ಪೂಜಾರಿ ಎಂಬ ಹುಡುಗ  ಚಿಕ್ಕ ವಯಸ್ಸಿನಲ್ಲಿಯೇ ಕೃಷಿ ಚಟುವಟಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ.  ಪ್ರಸ್ತುತ 8 ನೇ ತರಗತಿಯ ವಿದ್ಯಾರ್ಥಿಯಾಗಿರುವ ಈತ ಬಹಳ ಸಣ್ಣ ವಯಸ್ಸಿನಲ್ಲಿಯೇ  ಕೃಷಿಯಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದಾನೆ.

ಸೌರವ್  ತಂದೆಯೂ ಕೃಷಿಕರಾಗಿದ್ದು, ತಂದೆಯ ಜೊತೆ ಸೇರಿ ಈ ಹುಡುಗ  ಸೌತೆ ಕಾಯಿ, ಚೀನಿಕಾಯಿ, ಅಲಸಂಡೆ, ಶುಂಠಿ, ಟೊಮ್ಯಾಟೋ, ಬೆಂಡೆಕಾಯಿ ಹೀಗೆ ಎಲ್ಲಾ ಬಗೆಯ ತರಕಾರಿಗಳನ್ನು  ಬೆಳೆಯುತ್ತಿದ್ದಾನೆ. ಜೊತೆಗೆ ಅಡುಗೆಯಿಂದ ಹಿಡಿದು ಎಲ್ಲಾ ರೀತಿಯ ಮನೆ ಕೆಲಸಗಳನ್ನು ಕೂಡಾ ಮಾಡುತ್ತಾನೆ ಈ ಪೋರ. ಅಷ್ಟೇ ಅಲ್ಲದೆ ಈತ ಶಾಲೆಯಲ್ಲಿಯೂ ಹಲವಾರು ಬಗೆಯ ತರಕಾರಿ ಕೃಷಿಗಳನ್ನು ಬೆಳೆದಿದ್ದಾನೆ.

ತನ್ನ ಬಿಡುವಿನ ಸಮಯದಲ್ಲಿ ಇತರ ಮಕ್ಕಳಂತೆ ಮೊಬೈಲ್, ಟಿವಿ, ಆಟ ಎಂದು ಸಮಯವನ್ನು ವ್ಯರ್ಥ ಮಾಡದೆ, ಗಿಡಗಳಿಗೆ ನೀರು ಬಿಡುತ್ತಾ, ಗೊಬ್ಬರ ಹಾಕುತ್ತಾ ಕೃಷಿಯ ವಿಚಾರವಾಗಿ ತಂದೆಗೆ ಸಹಾಯ ಮಾಡುತ್ತಿದ್ದಾನೆ. ಕೃಷಿ ಎಂದರೆ ಮೂಗು ಮುರಿಯುವ, ಫ್ರೀ ಟೈಮ್ ಅಲ್ಲಿ ಯಾವುದೇ ಕೆಲಸ ಮಾಡದೇ ಮೊಬೈಲ್ ನೋಡುತ್ತಾ ಟೈಮ್ ವೇಸ್ಟ್ ಮಾಡುತ್ತಾ ಕೂರುವ ಯುವಕರಿಗೆ ಈ ಹುಡುಗ ನಿಜಕ್ಕೂ ಸ್ಪೂರ್ತಿ ಅಂತಾನೇ ಹೇಳಬಹುದು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ತರಕಾರಿ ಕೃಷಿಯಲ್ಲಿ ಆಸಕ್ತಿಯನ್ನು ಹೊಂದಿರುವ ಸೌರವ್ ಪೂಜಾರಿಯ ವಿಶೇಷ ಸಂದರ್ಶನದ  ವಿಡಿಯೋವನ್ನು ಉಡುಪಿಯ ಕಂಡೀರಾ ಎಂಬ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.  ವಿಡಿಯೋದಲ್ಲಿ ಪುಟ್ಟ ಹುಡುಗನ ತರಕಾರಿ ಕೃಷಿ, ಮತ್ತು ಆತನ ಮುದ್ದಾದ  ಸಂದರ್ಶನವನ್ನು ನೋಡುಬಹುದು.

ಇದನ್ನೂ ಓದಿ: ಮೋದಿ ಕಟೌಟ್‌ ತಬ್ಬಿಕೊಂಡು, ಸೊಂಟ ಬಳುಕಿಸುತ್ತಾ ರೀಲ್ಸ್​​ ಮಾಡಿದ ಮಹಿಳೆ

ಒಂದು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಮೂರುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ 19 ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಈ ಪುಟ್ಟ ಹುಡುಗನ ಕೃಷಿಯ ಬಗೆಗಿನ ಒಲವಿಗೆ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು  ʼಈ ಹುಡುಗನ ಸಂದರ್ಶನ ನೋಡಿ ಮನಸ್ಸಿಗೆ ಬಹಳ ಸಂತೋಷವಾಯಿತುʼ ಎಂದು ಹೇಳಿದ್ದಾರೆ.  ಇನ್ನೊಬ್ಬ ಬಳಕೆದಾರರು ʼಇಂದಿನ ಪೀಳಿಗೆಗೆ ಈ ಹುಡುಗ ಮಾದರಿʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ಹುಡುಗನ ಬಗ್ಗೆ ಮಾಹಿತಿ  ತಿಳಿಸಿಕೊಟ್ಟಿದ್ದಕ್ಕಾಗಿ ನಿಮಗೆ ಧನ್ಯವಾದಗಳುʼ ಎಂಬ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಉತ್ತಮ ಕೆಲಸ, ಈ ಕೃಷಿ ಕಾಯಕವನ್ನು ಹೀಗೆ ಮುಂದುವರೆಸಿಕೊಂಡು ಹೋಗು ಮಗು ಎಂದು ಆಶಿರ್ವಾದಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಅಹಮದಾಬಾದ್‌ನಲ್ಲೂ ಆರ್‌ಸಿಬಿ ಅಲೆ!
ಅಹಮದಾಬಾದ್‌ನಲ್ಲೂ ಆರ್‌ಸಿಬಿ ಅಲೆ!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ