AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion: ಪ್ರೇಮಿಗಳಿಗೊಂದು ಸವಾಲ್; ಕ್ಯುಪಿಡ್​​​ಗಳ ಮಧ್ಯೆ ಅಡಗಿರುವ ಹೃದಯವನ್ನು ಕಂಡು ಹಿಡಿಯುವಿರಾ?

ಸಾಮಾಜಿಕ ಜಾಲತಾಣದಲ್ಲಿ ಮೆದುಳಿಗೆ ಕೆಲಸ ನೀಡುವಂತಹ ಒಗಟಿನ ಆಟಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಸದ್ಯ ಪ್ರೇಮಿಗಳ ದಿನದ ಈ ಸುಸಂದರ್ಭದಲ್ಲಿ ಪ್ರೇಮಿಗಳಿಗೆ ಸವಾಲ್ ನೀಡಲು ಮೆದುಳು ಹಾಗೂ ಕಣ್ಣಿನ ತೀಕ್ಷ್ಣತೆಯ ಸಾಮಾರ್ಥ್ಯವನ್ನು ಪರೀಕ್ಷಿಸುವ ಬ್ರೈನ್ ಟೀಸರ್ ಚಿತ್ರವೊಂದು ವೈರಲ್ ಆಗಿದೆ. ಬಿಲ್ಲು ಮತ್ತು ಬಾಣವನ್ನು ಹಿಡಿದು ನಿಂತಿರುವ ಕ್ಯುಪಿಡ್ ದೇವತೆಗಳ ಈ ಚಿತ್ರದಲ್ಲಿ ಪುಟ್ಟ ಹೃದಯವೊಂದು ಅಡಗಿದೆ. ಆ ಹೃದಯವನ್ನು ನಿಮಗೆ 7 ಸೆಕೆಂಡುಗಳಲ್ಲಿ ಹುಡುಕಲು ಸಾಧ್ಯವೇ ಎಂಬುದನ್ನು ಪರೀಕ್ಷಿಸಿ.

Optical Illusion: ಪ್ರೇಮಿಗಳಿಗೊಂದು ಸವಾಲ್; ಕ್ಯುಪಿಡ್​​​ಗಳ  ಮಧ್ಯೆ ಅಡಗಿರುವ ಹೃದಯವನ್ನು ಕಂಡು ಹಿಡಿಯುವಿರಾ?
Optical Illusion
ಮಾಲಾಶ್ರೀ ಅಂಚನ್​
| Edited By: |

Updated on: Feb 13, 2024 | 6:53 PM

Share

ಅನೇಕ ಜೋಡಿಗಳು ವ್ಯಾಲೆಂಟೈನ್ಸ್ ವೀಕ್ ಅನ್ನು ಆಚರಿಸುತ್ತಾರೆ. ವ್ಯಾಲೆಂಟೈನ್ಸ್ ಡೇ ಅನ್ನು ಸೆಲೆಬ್ರೇಟ್ ಮಾಡಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಪ್ರೇಮಿಗಳಿಗೊಂದು ಸವಾಲ್ ನೀಡುವಂತಹ ಒಗಟಿನ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪ್ರೀತಿಯ ದೇವತೆಯೆಂದೇ ಕರೆಯುವ ಕ್ಯುಪಿಡ್ ದೇವತೆಗಳು ಬಿಲ್ಲು ಬಾಣವನ್ನು ಹಿಡಿದು ನಿಂತಿರುವ ಈ ಒಗಟಿನ ಚಿತ್ರದಲ್ಲಿ ಕೆಂಪು ಬಣ್ಣದ ಪುಟ್ಟ ಹೃದಯವೊಂದು ಅಡಗಿದೆ. ಈ ಹೃದಯವನ್ನು ಹುಡುಕಲು ಪ್ರೇಮಿಗಳಿಗೆ ಸವಾಲು ನೀಡಲಾಗಿದೆ. ನಿಮ್ಮ ಏಕಾಗ್ರತೆಯನ್ನು ಮತ್ತು ಗ್ರಹಿಕಾ ಶಕ್ತಿಯನ್ನು ಪರೀಕ್ಷಿಸಲು ನೀವು ಬಯಸುವಿರಾ? ಹಾಗಿದ್ದರೆ ಈ ಚಟುವಟಿಕೆಯನ್ನು ನೀವು ಕೂಡಾ ಪ್ರಯತ್ನಿಸಿ.

ಪ್ರೇಮಿಗಳ ದಿನ ಬಂದೇ ಬಿಟ್ಟಿದೆ. ಪ್ರೇಮ ಪಕ್ಷಿಗಳು ಪ್ರೇಮಿಗಳ ದಿನವನ್ನು ಬಹಳ ವಿಶಿಷ್ಟವಾಗಿ ಆಚರಿಸುತ್ತಾರೆ. ಇದೀಗ ಈ ವಿಶೇಷ ದಿನವನ್ನು ಗಮನದಲ್ಲಿಟ್ಟುಕೊಂಡು, ಇಂದು ನಾವು ನಿಮಗಾಗಿ ಪ್ರೀತಿಗೆ ಸಂಬಂಧಿಸಿದ ಅತ್ಯಂತ ಆಸಕ್ತಿದಾಯಕ ಬ್ರೈನ್ ಟೀಸರ್ ಅನ್ನು ಹೊತ್ತು ತಂದಿದ್ದೇವೆ. ಈ ತೀಕ್ಷ್ಣ ದೃಷ್ಟಿ ಪರೀಕ್ಷೆಯಲ್ಲಿ ನೀವು ಉತ್ತೀರ್ಣರಾಗುತ್ತೀರೇ ಎಂಬುದನ್ನು ನೋಡೋಣ. ಹಾಗಿದ್ದರೆ ನೀವು ಕೇವಲ 7 ಸೆಕೆಂಡುಗಳ ಒಳಗೆ ಈ ಒಗಟಿನ ಚಿತ್ರದಲ್ಲಿರುವ ಪುಟ್ಟ ಹೃದಯವನ್ನು ಕಂಡು ಹಿಡಿಯಬೇಕು.

ಮೇಲೆ ಕೊಟ್ಟಿರುವಂತಹ ಒಗಟಿನ ಚಿತ್ರದಲ್ಲಿ ಬಿಲ್ಲು ಮತ್ತು ಬಾಣವನ್ನು ಹಿಡಿದು ನಿಂತಿರುವ ಮೂರು ಕ್ಯುಪಿಡ್ ದೇವತೆಗಳು ಮತ್ತು ಕೆಂಪು ಬಣ್ಣದ ಗುಲಾಬಿ ಹೂವಿನ ಚಿತ್ರವನ್ನು ಕಾಣಬಹುದು. ಈ ಗುಲಾಬಿ ಹೂವುಗಳ ನಡುವೆ ಪುಟ್ಟ ಹೃದಯವೊಂದು ಅಡಗಿದೆ. ಆ ಹೃದಯವನ್ನು ನಿಮ್ಮಿಂದ ಕಂಡು ಹಿಡಿಯಲು ಸಾಧ್ಯವೇ?

ಉತ್ತರ ಇಲ್ಲಿದೆ:

ಅಯ್ಯೋ ಏನು ಮಾಡೋದು! ಎಷ್ಟು ಹುಡುಕಿದರೂ ಗುಲಾಬಿ ಹೂವುಗಳು ಹಾಗೂ ಕ್ಯುಪಿಡ್ ದೇವತೆಗಳ ಮಧ್ಯೆ ಅಡಗಿರುವಂತಹ ಹೃದಯದವನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ ಅಂತ ಯೋಚ್ನೆ ಮಾಡುತ್ತಿದ್ದೀರಾ? ಚಿಂತಿಸಬೇಡಿ, ನಾವು ನಿಮಗೆ ಉತ್ತರವನ್ನು ನೀಡಲಿದ್ದೇವೆ. ಒಂದು ಚಿತ್ರವನ್ನು ಕೆಳಗೆ ನೀಡಲಾಗಿದೆ, ಈ ಚಿತ್ರದ ಎಡ ಬದಿಯಲ್ಲಿ ನೀಲಿ ಬಣ್ಣದಲ್ಲಿ ರೌಂಡ್ ಮಾರ್ಕ್ ಮಾಡಿರುವ ಜಾಗದಲ್ಲಿ ನೀವು ಪುಟ್ಟ ಹೃದಯವನ್ನು ಕಾಣಬಹುದು.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ