Valentineʼs Special Optical Illusion: ಪ್ರೇಮಿಗಳಿಗೊಂದು ಸವಾಲ್, ಚುಂಬನದ ಚಿತ್ರದ ನಡುವೆ ಮರೆಯಾದ ಹೃದಯವನ್ನು 14 ಸೆಕೆಂಡ್ನಲ್ಲಿ ಹುಡುಕಬಲ್ಲಿರಾ?
ಸಾಮಾಜಿಕ ಜಾಲತಾಣದಲ್ಲಿ ಮೆದುಳಿಗೆ ಕೆಲಸ ನೀಡುವ ಒಗಟಿನ ಚಿತ್ರವೊಂದು ವೈರಲ್ ಆಗಿದ್ದು, ಈ ಒಂದು ಪ್ರೇಮಿಗಳ ದಿನದ ವಿಶೇಷ ಒಗಟಿನ ಚಿತ್ರದಲ್ಲಿ ಒಂದಷ್ಟು ಚುಂಬನದ ಚಿತ್ರಗಳಿರುವುದು ಕಾಣಬಹುದು. ಆ ಚುಂಚನಗಳ ನಡುವೆ ಒಂದು ಪುಟ್ಟ ಹೃದಯ ಅಡಗಿದೆ. ಆ ಹೃದಯವನ್ನು ನಿಮಗೆ 14 ಸೆಕೆಂಡುಗಳ ಒಳಗೆ ಹುಡುಕಲು ಸಾಧ್ಯವೇ?
ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಮೆದುಳಿಗೆ ಕೆಲಸ ನೀಡುವಂತಹ ಒಗಟಿನ ಆಟಗಳು ವೈರಲ್ ಆಗುತ್ತಿರುತ್ತವೆ. ಈ ಒಗಟಿನ ಆಟಗಳು ಮನೋರಂಜನೆಯನ್ನು ನೀಡುವುದರ ಜೊತೆಗೆ ಮೆದುಳನ್ನು ಚುರುಕುಗೊಳಿಸಲು ಇರುವ ಒಂದು ಮೋಜಿನ ವ್ಯಾಯಾಮ ಮಾರ್ಗವಾಗಿದೆ. ಹೆಚ್ಚಿನ ಜನರು ಈ ಕುತೂಹಲಕಾರಿ ಆಟವನ್ನು ಆಡಲು ಇಷ್ಟಪಡುತ್ತಾರೆ. ಪ್ರಸ್ತುತ ಬಿಡುವಿಲ್ಲದ ಕೆಲಸದ ನಡುವೆ ಕೊಂಚ ಬ್ರೇಕ್ ತೆಗೆದುಕೊಂಡು ಮನಸ್ಸನ್ನು ರಿಫ್ರೇಶ್ ಮಾಡಬೇಕೆಂದು ಬಯಸುತ್ತೀದ್ದೀರಾ? ಹಾಗಾದರೆ ಪ್ರೇಮಿಗಳ ದಿನದ ಈ ವಿಶೇಷ ಸವಾಲಿನ ಆಟವನ್ನು ಭೇದಿಸಿ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಒಗಟಿನ ಆಟವು ಚುಂಬನಗಳ ಚಿತ್ರದ ಮಧ್ಯೆ ಇರುವ ಹೃದಯವನ್ನು ಹುಡುಕಲು ಸವಾಲು ನೀಡುತ್ತದೆ.
ಈ ಒಗಟಿನ ಆಟ ಪ್ರೇಮಿಗಳಿಗೆ ವ್ಯಾಲೆಂಟೈನ್ಸ್ ವೀಕ್ ಅನ್ನು ಆಚರಿಸಲು ಒಂದು ಮೋಜಿನ ಮಾರ್ಗವಾಗಿದ್ದು, ಈ ವಿಶೇಷ ಒಗಟನ್ನು ತೀವ್ರ ಗ್ರಹಿಕಾ ಶಕ್ತಿಯನ್ನು ಹೊಂದಿರುವವರಿಗೆ ರಚಿಸಲಾಗಿದೆ. ತೀಕ್ಷ್ಣ ದೃಷ್ಟಿಯ ಜೊತೆಗೆ ಹೃದಯದಲ್ಲಿ ಪ್ರೀತಿಯ ಭಾವವಿದ್ದರೆ ಖಂಡಿತವಾಗಿಯೂ ನಿಮಗೆ ಈ ಒಗಟಿನಲ್ಲಿ ಅಡಗಿರುವಂತಹ ಪುಟ್ಟ ಹೃಯವನ್ನು ಹುಡುಕಲು ಸಾಧ್ಯವಾಗುತ್ತದೆ.
ಇಂಗ್ಲೇಂಡಿನ ಕ್ಯಾಪಿಟಲ್ ಹೇರ್ ಆಂಡ್ ಬ್ಯೂಟಿ ಎಂಬ ಹೆಸರಿನ ಹೇರ್ ಕೇರ್ ಸಪ್ಲೈರ್ ಕಂಪೆನಿ ಪ್ರೇಮಿಗಳ ದಿನದ ಈ ವಿಶೇಷ ಒಗಟನ್ನು ರಚಿಸಿದೆ. ನೀವು ನಿಮ್ಮ ದೃಷ್ಟಿಯ ತೀಕ್ಷ್ಣತೆಯನ್ನು ಪರಿಶೀಲಿಸಲು ಈ ಒಗಟಿನ ಚಿತ್ರದಲ್ಲಿ ಅಡಗಿರುವಂತಹ ಪುಟ್ಟ ಹೃದಯವನ್ನು 20 ಸೆಕೆಂಡು ಅಥವಾ ಅದಕ್ಕಿಂತ ಕಡಿಮೆ ಸಮಯದಲ್ಲಿ ಗುರುತಿಸಬೇಕು. ಕೆಂಪು, ಗುಲಾಬಿ ಹೀಗೆ ವಿವಿಧ ಬಣ್ಣದ ಲಿಪ್ಸ್ಟಿಕ್ ಚುಂಬನದ ಮಧ್ಯೆ ಈ ಪುಟ್ಟ ಹೃದಯವನ್ನು ಮರೆ ಮಾಚಲಾಗಿದೆ.
ಇದನ್ನೂ ಓದಿ: ಅಬ್ಬಬ್ಬಾ! ದೆಹಲಿಯಲ್ಲಿ ಚಿಂದಿ ಆಯುವವರ ದಿನದ ಆದಾಯ 1.5 ಕೋಟಿ ರೂ
ಉತ್ತರ ಇಲ್ಲಿದೆ:
ಅರೇ ಏನು ಮಾಡೋದು! ಎಷ್ಟು ಹುಡುಕಿದರೂ ಚುಂಬನದ ಮಧ್ಯೆ ಅಡಗಿರುವಂತಹ ಹೃಯದವನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ ಅಂತ ಯೋಚ್ನೆ ಮಾಡುತ್ತಿದ್ದೀರಾ? ಚಿಂತಿಸಬೇಡಿ, ನಾವು ನಿಮಗೆ ಉತ್ತರವನ್ನು ನೀಡಲಿದ್ದೇವೆ. ಒಂದು ಚಿತ್ರವನ್ನು ಕೆಳಗೆ ನೀಡಲಾಗಿದೆ, ಇದರಲ್ಲಿ ನೀಲಿ ಬಣ್ಣದಲ್ಲಿ ರೌಂಡ್ ಮಾರ್ಕ್ ಮಾಡಿರುವ ಜಾಗದಲ್ಲಿ ನೀವು ಪುಟ್ಟ ಹೃದಯವನ್ನು ಕಾಣಬಹುದು.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ